Story/Poem

ರಾಜಶೇಖರ ಜೋಗಿನ್ಮನೆ

ರಾಜಶೇಖರ ಜೋಗಿನ್ಮನೆ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಜೋಗಿನ್ಮನೆ ಗ್ರಾಮ. ತಂದೆ ಅಣ್ಣಪ್ಪ ಹೆಗಡೆ, ತಾಯಿ ಕಾಮಾಕ್ಷಿ ಹೆಗಡೆ. ವೃತ್ತಿಯಿಂದ ವಿಜಯವಾಣಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರು. ಪ್ರವೃತ್ತಿಯಿಂದ ಕಥೆಗಾರರು. ನೀರಿನ ಕುರಿತ ಬರೆಹವೊಂದಕ್ಕೆ ’ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಸಂದಿದೆ. ಸಂಗೀತ, ಸಿನಿಮಾ, ನಾಟಕ, ಯಕ್ಷಗಾನ, ಸಾಹಿತ್ಯ- ಇವರ ಆಸಕ್ತಿ ಕ್ಷೇತ್ರಗಳು.

More About Author

Story/Poem

ಎಲ್ಲ ಬೇರೆ ಥರ

ಮುಂಚಿನಂತಿಲ್ಲ ಈಗ ಏನೂ ಯಾವುದೂ. ಇರಲೂಬಾರದು ಒಂದೇ ಥರ ಹಳಹಳಿಕೆ, ತಿಳಿವಳಿಕೆ, ಕಲ್ಲು ಬಂಡೆಯ ಶಾಂತತೆ. ಹೇಳುತ್ತಾರಲ್ಲ ಇತಿಹಾಸ ಬೇಕು ವರ್ತಮಾನಕ್ಕೆ, ಭವಿಷ್ಯಕ್ಕೆ. ಬೇಕಷ್ಟೇ, ಅದೇ ಅಲ್ಲವಲ್ಲ, ಬೇರೆ ಥರ. ಯಾರೋ ಕಡಿದು ಗುಡ್ಡೆ ಹಾಕಿದ್ದರಂತೆ, ಆ ಗುಡ್ಡ ಕಡಿಯಬೇಕೆಂದೇ? ಹಾಗಲ್ಲ...

Read More...