ಲೇಖಕ ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಬರೆದ 'ಅದೇನಾಯ್ತು ಅಂದ್ರೆ..' ಕವಿತೆಯ ಸಾಲುಗಳು ಹೀಗಿವೆ ....
೧
ಅವನು ಸಿಕ್ಕ ಇವನೂ ಸಿಕ್ಕ..ಯಾರ್ಯಾರೋ ಸಿಕ್ರು
ದೇವರಂಥವರಂತೂ ಬೇಕಾದಷ್ಟು ಜನ ಸಿಕ್ಕರು
ಮನುಷ್ಯನನ್ನು ಹುಡುಕ್ತಿದ್ದಿನಿ....ಸಿಕ್ರೆ ಚೂರ್ ಹೇಳಿ ಸಾ...
೨...
ನಿನ್ನ ಹಣ ಇಲ್ಲಿ ಪ್ರವೇಶ ಇಲ್ಲ ಮಾರಾಯ
ನಿನ್ನ ಸೈಟು
ಮನೆ
ಬಂಗ್ಲೆ ಇಲ್ಲಿ ತರಲಾಗದು
ಗೊತ್ತಾ ನೀ ಕೂಡಿಟ್ಟ ಒಡವೆ..ಶೇರು, ಪಾಲಿಸಿ
ಇಲ್ಲಿ ಲೆಕ್ಕಕ್ಕೇ ಇಲ್ಲ
ನಿನ್ನ ಹೆಂಡತಿ ಮಕ್ಕಳು ಅದೋ ಮೈಲುದ್ದ
ದಿಂದಲೇ ಕೈ ಬೀಸಿ ಹೋಗಿ ಬಾ ಅನ್ನುತ್ತಿದ್ದಾರೆ!
ಬಂಧು ಮಿತ್ರರು ಇದ್ದಲ್ಲಿಂದಲೇ ಲೊ...