Story/Poem

ಶಾಂತಾ ಜಯಾನಂದ್

ಕವಯತ್ರಿ ಶಾಂತಾ ಜಯಾನಂದ್ ಅವರು ಮೂಲತಃ ಚಿಕ್ಕಮಗಳೂರು . ಜಿಲ್ಲೆಯ ತರೀಕೆರೆಯವರು. ಶಿವಮೊಗ್ಗದಲ್ಲಿಯೇ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪೂರೈಸಿದರು. ಬಾಲ್ಯದಿಂದಲೇ ಸಾಹಿತ್ಯ, ಕ್ರೀಡೆ, ನಾಟಕ ಮತ್ತು ಗಾಯನದಲ್ಲಿ ಆಸಕ್ತಿ. ಕಾಲೇಜು ದಿನಗಳಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದ ಶಾಂತಾ ಜಯಾನಂದ್ ಅವರು ಸಾಹಿತ್ಯಿಕ ಚರ್ಚೆ, ಸಂಗೀತ, ಕಾವ್ಯರಚನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಸಮಾಜಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವೀಧರರು. ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್ ಪದವಿ ಪೂರೈಸಿದ್ದಾರೆ. ದೂರದರ್ಶನದ ಚಂದನವಾಹಿನಿಯಲ್ಲಿ ನಿರೂಪಕಿಯಾಗಿ ಹಾಗೂ  ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಎಂ.ಎಸ್ ರಾಮಯ್ಯ ಕಾನೂನು ಮತ್ತು ಮ್ಯಾನೇಜ್ ಮೆಂಟ್ ಕಾಲೇಜು ಹಾಗೂ ಇಂಡಿಯನ್ ಅಕಾಡೆಮಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದಾರೆ. 

More About Author

Story/Poem

ಮೆಸ್ಸೀ ಹೇರ್ ಡೊಂಟ್ ಕೇರ್

ಒಳ್ಳೇ ಸ್ಲೋಗನ್ ಹೇರ್ ಬಿಟ್ಟರು, ಕೆಟ್ಟರೂ, ಕಟ್ಟಿದರೂ ... ಬಣ್ಣಗೆಟ್ಟರೂ, ಬಣ್ಣ ಹಚ್ಚಿದರೂ, ರಂಗು ರಂಗಾಗಿ ಹಾರಾಡಿದರೂ, ಡೊಂಟ್ ಕೇರ್, ಮುಖಕ್ಕೆ ಅರಿಶಿನ ಹಣೆಗೆ ಕುಂಕುಮ, ಮುಡಿಗೆ ಹೂವು ಮೂಗಿಗೆ ಮೂಗುತಿ, ಪತಿವ್ರತೆ, ಹರಿದ ಬಟ್ಟೆ, ಹೊಲೆದ ಬಟ್ಟೆ ಚಡ್ಡಿ, ಪ್ಯಾಂಟ...

Read More...

ನದಿಗಳಿಗೂ ನೆನಪಿದೆ

ದಟ್ಟ ಕಾನನದ ನಡುವೆ ಪುಟ್ಟ ಬುಗ್ಗೆಯಾಗಿ ಹಾದಿಯುದ್ದಕ್ಕೂ ಸಾಗುವ ನದಿಗಳಿಗೂ ನೆನಪಿದೆ ನಾಗರೀಕತೆಗಳ ಯಾನ ಹಸಿರ ಬನಿ ಉಕ್ಕಿ ಊರೂರು ಬೆಳೆದು ಕಾಡೆಲ್ಲಾ ನಾಡಾಗಿ ನಾಡೇ ಜನರ ಬೀಡಾದ ಕತೆ ನದಿಗಳಿಗೂ ನೆನಪಿದೆ ಪುಟ್ಟ ಹಳ್ಳ ಸಣ್ಣ ಝರಿ ಪುಟ್ಟ ತೊರೆಗಳೊಂದಾಗಿ ಭೋರ್ಗರೆವ ನದಿ ಕಡಲ...

Read More...

ಅವಳು ಮತ್ತು ಕವಿತೆ

ಅವಳು – ಕವಿತೆ ಹಿಂಸಿಸುತ್ತಿದೆ.. ದುಃಖಿಸುತ್ತಿದೆ.. ಉಸಿರ ಕಟ್ಟಿಸುತ್ತಿದೆ ಕವಿತೆ... ಹೊರಬರಲು ನಾ ಬರಲೇ ..... ಹೊರಗೆ? ಅವಳು ಚಿಂತಿಸು.. ತ್ತಲೇ ಇದ್ದಾಳೆ, ಕವಿತೆ ಹೊರತರಲು... ಮಗು ಜೋರಾಗಿ ಅಳುತ್ತಿದೆ ಓಡುತ್ತಾಳೆ ಹಾಲೂಡಿಸಲು, ಕವಿತೆ ಮರೆಯುತ್ತಾಳೆ........

Read More...