Book Watchers

ಕಾವ್ಯಶ್ರೀ ಮಹಾಗಾಂವಕರ್‌

ಹಿರಿಯ ಲೇಖಕಿ, ಕವಯತ್ರಿ ಕಾವ್ಯಶ್ರೀ ಮಹಾಗಾಂವಕರ್‌ ಹುಟ್ಟೂರು ಶಿವಮೊಗ್ಗ. ಇವರು ಬರೆದಿರುವ ಕಥೆಗಳಿಗೆ ಗುಲ್ಬರ್ಗ ವಿಶ್ವವಿದ್ಯಾಯಲಯವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಬರೆದಿರುವ ಪ್ರಮುಖ ಕಾದಂಬರಿ ’ಪ್ರೇಮಕಾವ್ಯ’ ಹಾಗೂ ’ಬೆಳಕಿನೆಡೆಗೆ’. ಅವರ ಸಾಮಾಜಿಕ ಕಾದಂಬರಿ ’ಪ್ರೇಮಕಾವ್ಯ’ ಜಾತಿಯೆಂಬ ಕಂದಾಚಾರದ ನಡುವೆ ಪ್ರೇಮಿಗಳಿಬ್ಬರೂ ಸಿಕ್ಕಿ ಬೀಳುವ ಕಥಾ ವಸ್ತು ಹೊಂದಿದೆ. ’ಕವನಗಳಲ್ಲಿ ಸದಾ ಹೊಸತನವಿದ್ದು ತೀವ್ರವಾದ ಅಭಿವ್ಯಕ್ತಿಯ ಸಂಕೇತವಾಗಬೇಕು’ ಎನ್ನುವ ಅವರು ಕಾವ್ಯ ರಚನೆಯಲ್ಲೂ ಯಶಸ್ಸು ಸಾಧಿಸಿದ್ದಾರೆ. ಅನೇಕ ಜಿಲ್ಲಾ ಮಟ್ಟದಲ್ಲಿ ಕವನ ವಾಚಿಸಿದ್ದಾರೆ.

Articles

ನಾಲ್ವರ ನಾಲ್ದೇರಾ ತಿರುಗಾಟದೊಂದಿಗೆ

'ನಾಲ್ದೇರಾ' ಶೀರ್ಷಿಕೆ ಇಡುವಲ್ಲಿಯೂ ತಮ್ಮೊಳಗಿನ ಸೂಕ್ತ ಭಾವನೆಯನ್ನು ವಿವರಿಸಿದ್ದಾರೆ. ಆದರೂ ಇದಕ್ಕಿಂತಲೂ ಆಕರ್ಷಕವಾದ ಹೆಸರಿಡುವ ಸಾಧ್ಯತೆಗಳು ಇದ್ದವು ಎನಿಸುತ್ತದೆ. ಬೀದರ ಜಿಲ್ಲೆಯ ಒಂದು ಸುಂದರ ಪುಸ್ತಕವೆಂದು ಯಾವ ಮುಜುಗರವಿಲ್ಲದೆ ಹೇಳುವಂತಿದೆ.

Read More...

ಉದಯವಾಯಿತೆ ಚೆಲುವ ಕನ್ನಡ ನಾಡು?

'ಉದಯವಾಯಿತೆ ಚೆಲುವ ಕನ್ನಡನಾಡು' ಕೃತಿಯು ಅದ್ಯಯನ ಮಾಡುವವರಿಗೆ ಮತ್ತು ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಆಕರವಾಗಿ ಬಳಸಿಕೊಳ್ಳಬಹುದು. ಲೇಖನಗಳೆಲ್ಲಾ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿ ತನ್ನ ಮೌಲ್ಯವನ್ನು ಸಾಬೀತು ಪಡಿಸಿವೆ.

Read More...