Book Watchers

ರಮೇಶ ಎಸ್. ಕತ್ತಿ

.ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ಡಾ.ಚನ್ನಪ್ಪ ಕಟ್ಟಿ : ಬದುಕು ಬರಹ, ಓದಿನ ಬೆರಗು (ವಿಮರ್ಶೆ ಲೇಖನಗಳ ಸಂಕಲನ), ಗೀಗೀ ಗಾರುಡಿಗ ಕಡಣಿ ಕಲ್ಲಪ್ಪ (ಜೀವನ ಚಿತ್ರಣ) ಅಲೆಮಾರಿ ಅವಧೂತ ( ಕಾದಂಬರಿ ಕಾರ ಸಿದ್ಧರಾಮ ಉಪ್ಪಿನ ಅವರ ಬದುಕು-ಬರೆಹ) ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

Articles

ಮೊಗಲಾಯಿ ನೆಲದ ನೆನಹುಗಳ ಭಿತ್ತಿ; ಯಡ್ರಾಮಿ ಸೀಮೆ ಕಥನಗಳು

ವ್ಯಕ್ತಿಕೇಂದ್ರೀತ ಮತ್ತು ಜೀವಕೇಂದ್ರಿತ ಪರಧಿಯಾಚೆಗಿನ ಸಮೂಹ ಸೃಷ್ಠಿಯ ಕುರಿತಾಗಿಗ ಚಿಂತನೆಗಳು ಇವು. ಜಾನಪದದ ಹಂತಿ ಇಂದು ಮರೆಯಾಗುತ್ತಿರುವ ಕಾವ್ಯಮಾಧ್ಯಮ, ವಿಮರ್ಶೆಯ ಅಳತೆಗೋಲಿನಲ್ಲಿ ಇಲ್ಲಿನ ಬರಹಗಳು ತಾಗಿಕೊಂಡಿವೆ.

Read More...

ಮೂರು ತಲೆಮಾರಿನ ಜೀವನ ಘಟನಾವಳಿ ‘ಬಯಲೆಂಬೊ ಬಯಲು’

ಸಂಪೂರ್ಣ ಕಾದಂಬರಿ ಭಾರತದ ಗ್ರಾಮಪರಂಪರೆಯನ್ನು ಪ್ರತಿನಿಧಿಸುತ್ತದೆ. ಬಹುತೇಕ ಹಳ್ಳಿಗಳಲ್ಲಿರುವಂತೆ ಜಾತಿ, ಸಮುದಾಯಗಳ ಒಳಜಗಳ, ದ್ವೇಷ, ನಾಡಿನ ಹಿರಿಯ ಕತೆಗಾರರಲ್ಲೊಬ್ಬರಾದ ಡಾ.ಎಚ್.ಟಿ.ಪೋತೆ ಅವರು ತಮ್ಮ ಆತ್ಮಚರಿತ್ರೆಯನ್ನು ವಿಭಿನ್ನಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

Read More...

ಭಿನ್ನ ಧರ್ಮೀಯ ಆಚರಣೆ-ಸಂಸ್ಕೃತಿಗಳ ಪಾಕ-ತೇಜೋ ತುಂಗಭದ್ರಾ

ಮತಾತಂತರದ ಸನ್ನಿವೇಶಗಳು ಹೃದಯವನ್ನು ಹಿಂಡುತ್ತವೆ.  ಯಹೂದಿಗಳು ಕ್ಯಾಥೋಲಿಕ್ ಆಗುವ ಸಂದರ್ಭದಲ್ಲಿ ದೊಡ್ಡ ಕ್ರಾಂತಿಯೇ ಘಟಿಸುತ್ತದೆ. ಸಿಕ್ಕಸಿಕ್ಕ ಯಹೋದಿಗಳನ್ನು ಹತ್ಯೆ ಮಾಡಲಾಗುತ್ತದೆ, ಬೆಲ್ಲಾಳನ್ನು ಟ್ಟಿಸಿಕೊಂಡು ಬಂದರೂ ಅವಳು ಪಾರಾಗುತ್ತಾಳೆ ಈ ಎಲ್ಲ ಚಿತ್ರಣಗಳು ಓದುಗನಲ್ಲಿ ಸ್ಥಾಯಿಯಾಗಿ ನಿಲ್ಲುತ್ತವೆ. ಭಾರತದಲ್ಲೂ ಮುಸ್ಲಿಂ ರಾಜರು ದೊಡ್ಡ ಪ್ರಮಾಣದಲ್ಲಿ ಮತಾಂತರ ಪ್ರಕ್ರಿಯೆ ಮಾಡುತ್ತಾರೆ. ಈ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ವಸುಧೇಂದ್ರ ನಿರೂಪಿಸಿದ್ದಾರೆ. ಇಂತಹ ಕ್ರೌರ್ಯಗಳು ಒಂದಡೆಯಾದರೆ, ಭಾರತದಲ್ಲಿ ಆತ್ಮಬಲಿದಾನಗಳು ರೌರವ ನರಕ ದರ್ಶನದ ನೆನಪು ಮಾಡುತ್ತದೆ. ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯಗಳು ಬಲವಂತವಾಗಿ ಸತಿಯಾಗುವಂತೆ ಮಾಡುತ್ತವೆ. ಇಲ್ಲಿ ಗಂಡ ಮಡಿದ ನಂತರ ಸತಿಯಾಗುವ ಸನ್ನಿವೇಶಗಳು ಬಿತ್ತರಿಸುವ ಕ್ರಮ ಅತ್ಯಂತ ಕುತೂಹಲಕಾರಿ. ಬಿಭೀತ್ಸ ರಸ ಓತಪ್ರೋತವಾಗಿ ಓದುಗನನ್ನು ಕಾಡುತ್ತದೆ. ಆತ್ಮಬಲಿದಾನದ ಭಾಗವಾದ ಲೆಂಕನಾಗುವ ಪದ್ದತಿಯ ಒಂದು ದೃಶ್ಯವಂತೂ ರಣಭೀಕರ.

Read More...