Book Watchers

ಸಂಗನಗೌಡ ಹಿರೇಗೌಡ

ಸಂಗನಗೌಡ ಹಿರೇಗೌಡ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಬರಖೇಡದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ತತ್ವಪದಗಳ ಕಾವ್ಯ ಮೀಮಾಂಸೆ’ ವಿಚಾರದಲ್ಲಿ ಸಂಶೋಧನ ಕೈಗೊಂಡಿದ್ದಾರೆ. ಓದು, ಬರವಣಿಗೆ ಇವರ ಹವ್ಯಾಸ

Articles

'ಅಕಥ ಕಥಾ' ಒಳಗಿನ ಸಂಕರತೆ

ಕೇಶವ ಮಳಗಿ ಸರ್ ಅವರ ಎಂಟು ಕತೆಗಳನ್ನು ಒಳಗೊಂಡ 'ಅಕಥ ಕಥಾ' ಎನ್ನುವ ಕಥಾಸಂಕಲನ ಓದಿ ಮುಗಿಸಿದೆ..ಇಲ್ಲಿಯ ಬಹುತೇಕ ಕತೆಗಳು ಕೃಷ್ಣಾ ಮೇಲ್ದಂಡೆ ಪರಿಸರದ್ದಾಗಿವೆ. ಈ ಭಾಗದಲ್ಲಿ ಕೊಡೆಕಲ್ ಬಸವಣ್ಣ, ತಿಂತೂಣಿ ಮೋನಪ್ಪ, ಚಿದಾನಂದಾವಧೂತರಂಥವರು ಆಗಿ ಹೋಗಿದ್ದಾರೆ..ಈ ಕಥಾ ಸಂಕಲನದ ಶೀರ್ಷಿಕೆ ಕಬೀರದಾಸರ ದೋಹಾಗಳಲ್ಲಿ ಬರುವುದೇ ಆಗಿರುವುದು ಆಕಥ ಕಥಾ ಕತೆಯ ಪ್ರಾರಂಭದಲ್ಲಿಯೇ ಬಳಸಿರುವುದರಿಂದ ಇಲ್ಲಿಯ ಕಥೆಗಳು ಶ್ರಮಣ ಪಂಥಗಳು, ಭಕ್ತಿ ಪಂಥಗಳ  ಸುತ್ತಮುತ್ತ ಘಟಿಸುತ್ತವೆ...

Read More...

ಮಠದ ಹೋರಿ

ಗೆಲುವೆನೆಂಬುದು ಸೋಲದ ಮಾತು', 'ಸಕಲರೊಳು ಲಿಂಗಾತ್ಮ ಕಾಣಾ' ಈ ಎರಡೂ ಕತೆಗಳು ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ತನಗಿರಬೇಕಾದ ಜವಬ್ದಾರಿಯ ಕುರಿತು ಮಾತಾಡುವುದರ ಜೊತೆಗೆ ತಾನು ಹಿಡಿದಿರುವ ವಾಮಮಾರ್ಗವನ್ನೂ ಅನಾವರಣಗೊಳ್ಳುತ್ತವೆ. ಇರುವುದನ್ನು ಇಲ್ಲವಾಗಿಸುವ, ಇಲ್ಲವಾಗಿರುವುದನ್ನು ಇರುವಿಕೆ ಗೊಳಿಸುವ, ಅಥವಾ ಸಣ್ಣ ಇರುವಿಕೆಯನ್ನು ತನ್ನ ಏಳಿಗೆಗಾಗಿ ವೈಭವೀಕರಿಸುವ ಮತ್ತು ತುಚ್ಛವಾಗಿ ಕಡೆಗಾಣಿಸುವಂಥ ಬೇಜವಾಬ್ದಾರಿತನವನ್ನು ಕಟ್ಟಿಕೊಟ್ಟಿದ್ದಾರೆ

Read More...