Book Watchers

ಸಿದ್ದು ಯಾಪಲಪರವಿ

ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ ಇವರು ಕಳೆದ ಮೂರು ದಶಕಗಳಿಂದ ಗದುಗಿನ ಕನಕದಾಸ ಸಮಿತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಸಾವಿರಾರು ಉಪನ್ಯಾಸಗಳು, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳ ಸಂಚಾರವನ್ನು ನಡೆಸಿ, ಜೀವನ ಕೌಶಲ್ಯಗಳ ಕುರಿತಾದ ತರಬೇತಿಯನ್ನು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ.

Articles

ಪೊಸಿಟಿವ್ ದೃಷ್ಟಿಕೋನದ ಅವಲೋಕನ: 'ಇದೊಂಥರಾ ಆತ್ಮಕಥೆ’ 

’ಇದೊಂಥರಾ ಆತ್ಮಕಥೆ’  ವಿಠ್ಠಲಮೂರ್ತಿಯ ಪ್ರಾಮಾಣಿಕ ಮನಸ್ಥಿತಿಯನ್ನು ಅನಾವರಣ ಮಾಡುತ್ತದೆ. ಪ್ರತಿಯೊಬ್ಬ ರಾಜಕೀಯ ನಾಯಕರಲ್ಲಿ ಇರುವ ಅಥವಾ ಇರಬಹುದಾದ ಒಳ್ಳೆಯ ಮುಖ ಮತ್ತು ಸಂದೇಶಗಳ ಮೇಲೆ ಬೆಳಕು ಚೆಲ್ಲುತ್ತದೆ. ಯಾರನ್ನಾದರೂ ಪ್ರಾಮಾಣಿಕ ಎಂದು ಕರೆಯಲು ಭಯವಾಗುವಷ್ಟು ಹಿಪ್ಪೊಕ್ರೇಟ್ಸ್ ತುಂಬಿ ತುಳುಕುತ್ತಿದ್ದಾರೆ.

Read More...

ಜಾದುಗಾರ ಜೋಗಿಯ 'L'

ಪ್ರೀತಿಯ ನಶೆ ಇಳಿದಾಗ ಮನುಷ್ಯನಿಗೆ ವಾಸ್ತವ ಅರ್ಥವಾಗುತ್ತದೆ. ಆದರೆ ಬರೀ ಪ್ರೀತಿಯಷ್ಟೇ ನಶೆಯಲ್ಲ ನಮ್ಮ ಎಲ್ಲ ಪ್ಯಾಶನ್ ಹೆಸರಿನ ತೆವಲುಗಳು ನಶೆ. ಮನುಷ್ಯ ಆ ನಶೆಗಳಿರದಿದ್ದರೆ ಅವನು ಮನುಷ್ಯನೇ ಅಲ್ಲ.

Read More...