About the Author

ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್‌ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು  ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು.

ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ಗಿರಡ್ಡಿ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.(1998-2001)

ಆ ಮುಖ ಈ ಮುಖ, ಹಂಗು ಮತ್ತು ಇತರ ಕಥೆಗಳು, ಒಂದು ಬೇವಿನ ಮರದ ಕಥೆ (ಕತೆಗಳು), ಶಾರದಾಲಹರಿ, ರಸವಂತಿ (ಕವಿತೆ), ಜನಪದ ಕಾವ್ಯ, ನವ್ಯ ವಿಮರ್ಶೆ, ಸಣ್ಣಕತೆಯ ಹೊಸ ಒಲವುಗಳು, ಸಾತತ್ಯ, ವಚನ ವಿನ್ಯಾಸ (ವಿಮರ್ಶೆ) 'ಸಂಕ್ರಮಣ' ಸಂಪಾದಕರಲ್ಲಿ ಒಬ್ಬರಾಗಿದ್ದರು. ಕಲಬುರ್ಗಿಯಲ್ಲಿ 'ರಂಗಮಾಧ್ಯಮ' ನಾಟಕ ಸಂಸ್ಥೆಯ ಸ್ಥಾಪಿಸಿರುವ ರಂಗ ಚಟುವಟಿಕೆಗಳಿಗೆ ಇಂಬು ನೀಡಿದ್ದರು.

ಗಿರಡ್ಡಿ ಗೋವಿಂದರಾಜ

(22 Sep 1939-11 May 2018)

Awards