ಸಂಬಂಧ

Author : ಗಿರಡ್ಡಿ ಗೋವಿಂದರಾಜ

Pages 630

₹ 550.00




Year of Publication: 2020
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9341757653

Synopsys

ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರ ಸಂಪಾದಕತ್ವದ ’ಸಂಬಂಧ’ ಕೃತಿಯು ಮಲ್ಲಿಕಾರ್ಜುನ ಹೀರೆಮಠರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಒಳಗೊಂಡ ಅಭಿನಂದನಾ ಗ್ರಂಥವಾಗಿದೆ. ಸಂವೇದನಾಶೀಲ ಲೇಖಕರಾದ ಮಲ್ಲಿಕಾರ್ಜುನ ಹಿರೇಮಠರು ತಮ್ಮ ಸಾಧನೆಯ ಹಾದಿಯಲ್ಲಿ ಪಟ್ಟ ಶ್ರಮ, ಸಾಹಿತ್ಯದಲ್ಲಿ ಸಾಧಿಸಿದ ರೀತಿಯನ್ನು ಈ ಪುಸ್ತಕದಲ್ಲಿ ಭಿನ್ನವಾಗಿ ಕಟ್ಟಿಕೊಡಲಾಗಿದೆ. ಹಿರೇಮಠರಿಗೆ 75 ವರ್ಷ ತುಂಬಿದ ಹೊತ್ತಿನಲ್ಲಿ ’ಸಂಬಂಧ’ ಅಭಿನಂದನಾ ಗ್ರಂಥ ಹೊರತರಲಾಯಿತು. ಈ ಕೃತಿಯು ಎರಡು ಭಾಗಗಳನ್ನು ಒಳಗೊಂಡಿದ್ದು ಭಾಗ-1 ರಲ್ಲಿ ಒಡನಾಡಿಗಳು, ಸಾಹಿತಿಗಳು, ಅವರ ಪ್ರೀತಿ ಉಂಡವರೆಲ್ಲ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಭಾಗ-2 ರಲ್ಲಿ ಹಲವಾರು ಲೇಖಕರು ಮತ್ತು ವಿಮರ್ಶಕರು ಅವರ ಕೃತಿಗಳ ಸಮೀಕ್ಷೆ, ವಿಮರ್ಶೆ ಮಾಡಿದ್ದಾರೆ

 

About the Author

ಗಿರಡ್ಡಿ ಗೋವಿಂದರಾಜ
(22 September 1939 - 11 May 2018)

ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್‌ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು  ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...

READ MORE

Related Books