About the Author

ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರೆನಿಸಿಕೊಂಡರು. ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿದ ನಂತರ ಮುಂದೆ ಏಕಾಂಗಿಯಾಗಿ ನಡೆದರು. ತಮ್ಮ ಮುಂದಿನ ಅರವತ್ತು ವರ್ಷಗಳ ಜೀವಿತಾವಧಿಯಲ್ಲಿ ವಿಶ್ವದಾದ್ಯಂತ ಸಂಚರಿಸಿ, ಮಾನವ ಸಮಾಜದಲ್ಲಿ ಸ್ವಯಂದಾರ್ಶನಿಕ ಬದಲಾವಣೆಯನ್ನು ತರಲು ಅಪಾರವಾದ ಕೆಲಸ ಮಾಡಿದರು. ಕೃಷ್ಣಮೂರ್ತಿಯವರ ಚಿಂತನೆಗಳು ಸಾಹಿತ್ಯರೂಪಕವಾಗಿ ಅವರ ವಿದಾರ್ಥಿ, ಶಿಕ್ಷಕ, ವಿಜ್ಞಾನಿ, ಧಾರ್ಮಿಕವರ್ಗದ ವಿವಿಧ ಜನರೊಡನೆ ನಡೆಸಿದ ಚರ್ಚೆಗಳಲ್ಲಿ, ಬರಹಗಳಲ್ಲಿ, ರೇಡಿಯೋ ದೂರದರ್ಶನ ರೂಪಕಗಳಲ್ಲಿ, ಪತ್ರಗಳಲ್ಲಿ ವಿಶ್ವದಾದ್ಯಂತ ಸಂಚಲಿತದಲ್ಲಿವೆ. ‘ನೀವೇ ಲೋಕ ನಿಮ್ಮೊಳಗೆ ಲೋಕ, ಚಲನಶೀಲ ಬದುಕು, ಸಾಮಾಜಿಕ ಹೊಣೆಗಾರಿಕೆ’ ಮುಂತಾದ ಬದುಕಿನ ಜಿಜ್ಞಾಸೆ ಕುರಿತ ಪುಸ್ತಕಗಳು ಕನ್ನಡಕ್ಕೆ ಅನುವಾದವಾಗಿವೆ.

ಜಿಡ್ಡು ಕೃಷ್ಣಮೂರ್ತಿ

(11 May 1895)