About the Author

ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. 

 

ಮೀನಾಕ್ಷಿ ಬಾಳಿ

(22 Jun 1962)