ತತ್ವಪದ ಮತ್ತು ಮಹಿಳೆ

Author : ಮೀನಾಕ್ಷಿ ಬಾಳಿ

Pages 206

₹ 150.00




Year of Publication: 2019
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ತತ್ವಪದ ಪರಂಪರೆಯಲ್ಲಿ ಕಾಣುವ ಒಂದು ಸಮಸ್ಯೆ ಎಂದರೆ ಅದು ಹೆಣ್ಣನ್ನು ಕುರಿತಾದ ಅವರ ಗ್ರಹಿಕೆ. ಅದರ ಬಗೆಗೆ ಎಷ್ಟೇ ಯೋಚಿಸಿದರೂ ಅಲ್ಲಿ ಮಂಡಿತವಾಗಿರುವ ವಿಚಾರಧಾರೆಯು ಹೆಣ್ಣನ್ನು ಸಮಾನವಾದ ನೆಲೆಯಲ್ಲಿ ಗ್ರಹಿಸಿಯೇ ಇಲ್ಲ. ಇಂತಹ ಕಾಲಘಟ್ಟದಲ್ಲಿ ಹಲವು ಮಹಿಳಾ ತತ್ವಪದಕಾರ್ತಿಯರು ಈ ಸಾಧಕರ ಪರಂಪರೆಯಲ್ಲಿದ್ದು, ಮುನ್ನೆಲೆಗೆ ಬಂದಿದ್ದಿಲ್ಲ. ಅಂತಹ ತತ್ವಪದಕಾರ್ತಿಯರ ಪರಿಚಯ ಮತ್ತು ಅವರ ಜೀವನದ ಒಳನೋಟ, ತತ್ವಪದಗಳ ನೆಲೆಯನ್ನು ಗ್ರಹಿಸಿ ಬರೆದಿರುವ ಪ್ರಬಂಧಗಳ ಸಂಕಲನ ಇದಾಗಿದೆ.

About the Author

ಮೀನಾಕ್ಷಿ ಬಾಳಿ
(22 June 1962)

ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ.    ...

READ MORE

Related Books