ಮನದ ಸೂತಕ ಹಿಂಗಿದೊಡೆ

Author : ಮೀನಾಕ್ಷಿ ಬಾಳಿ

₹ 60.00




Year of Publication: 2009
Published by: ಚಿಂತನಾ ಪುಸ್ತಕ
Address: #1863, 11ನೇ ಮುಖ್ಯ ರಸ್ತೆ, 38ನೇ ಅಡ್ಡರಸ್ತೆ, 4 ಟಿ. ಬ್ಲಾಕ್ ಜಯನಗರ. ಬೆಂಗಳೂರು-560041
Phone: 9902249150

Synopsys

’ಮನದ ಸೂತಕ ಹಿಂಗಿದೊಡೆ’ ಮೀನಾಕ್ಷಿ ಬಾಳಿ ಅವರ ಲೇಖನ ಬರಹಗಳ ಕೃತಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ರಹಮತ್ ತರಿಕೆರೆ ಅವರು, ಇಲ್ಲಿನ ಬರಹಗಳು ಸಾಮಾನ್ಯವಾಗಿ ಮಾಹಿತಿಯನ್ನು ಜೋಡಿಸಿ ಕೊಡುತ್ತ, ಚಾರಿತ್ರಿಕ ಸಮೀಕ್ಷೆ ಮಾಡುವ ವಿಧಾನವನ್ನು ಅನುಸರಿಸಿವೆ. ಇದರಿಂದ ವರ್ತಮಾನದ ಘಟನೆಗೆ ಕಾರಣವಾಗಿರುವ ಗತಕಾಲದ ಭಿತ್ತಿಯ ನೋಟಗಳೇನೊ ಸಿಕ್ಕುತ್ತಿವೆ. ಆದರೆ ಚಾರಿತ್ರಿಕ ನೋಟಗಳ ಹೆಚ್ಚಳದಿಂದಾಗಿ, ಲೇಖಕಿಗೆ ತನ್ನ ಚಿಂತನೆ ಕಲ್ಪನೆಗಳನ್ನು ಕೂಡಿಸಿ ಹೊಸ ಕಥನಗಳನ್ನು ಕಟ್ಟುವ ಸಾಧ್ಯತೆಗಳು ಕಡಿಮೆಯಾಗಿವೆ. ಇಲ್ಲಿರುವ ಲೇಖನವೊಂದರಲ್ಲಿ ಬರುವ ಇರುವೆಯ ರೂಪಕದ ವಿಶ್ಲೇಷಣೆಯಲ್ಲಿ ಅಂತಹ ವಿನ್ಯಾಸದ ಸಣ್ಣ ಝಲಕು ಬಂದಿದೆ. ಮಹಿಳೆಯು ತಾಯಿಯಾಗುವ ಜೈವಿಕ ಅನುಭವದ ಕಥನದಲ್ಲಿ ಆ ಝಲಕು ಮೈದೋರಿದೆ. ಸಾಮಾನ್ಯವಾಗಿ ವೈಚಾರಿಕ ಪ್ರಜ್ಞೆಯಿಂದ ತಾರ್ಕಿಕವಾಗಿ ಬರೆಯುವ ಬಾಳಿಯವರು, ಕೆಲವು ವಿಷಯಗಳಲ್ಲಿ ಅಂತರ್ಮುಖಿಯಾಗಿದ್ದು, ಭಾವನಾತ್ಮಕವಾಗಿಯೂ ಕಾವ್ಯಾತ್ಮಕವಾಗಿಯೂ ಬರೆಯಬಲ್ಲರು ಎಂಬುದಕ್ಕೆ ಮೇಲೆ ಉಲ್ಲೇಖಿಸಿದ ಎರಡು ನಿರ್ದಶನಗಳು ಸಾಕ್ಷಿಯಾಗಿವೆ'  ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಮೀನಾಕ್ಷಿ ಬಾಳಿ
(22 June 1962)

ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ.    ...

READ MORE

Related Books