ಅಲಗ ನೆಕ್ಕುವ ಸೊಣಗ

Author : ಮೀನಾಕ್ಷಿ ಬಾಳಿ

Pages 152

₹ 120.00




Year of Publication: 2020
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕಿ ಡಾ. ಮೀನಾಕ್ಷಿ ಬಾಳಿ ಅವರ ಲೇಖನಗಳ ಸಂಗ್ರಹ ಕೃತಿ-ಅಲಗ ನೆಕ್ಕುವ ಸೋಣಗ. 19 ಲೇಖನಗಳಿದ್ದು,, ವೈಚಾರಿಕ ಚಿಂತನಾ ಕ್ರಮದಿಂದ ಗಮನ ಸೆಳೆಯುತ್ತವೆ. ಸತ್ಯ,ನ್ಯಾಯ,ನಿಷ್ಠುರ ವಿಚಾರಗಳು ಇವುಗಳ ವೈಶಿಷ್ಟ್ಯ. ಸಾರ್ವತ್ರಿಕ ಸತ್ಯವನ್ನು ಹೇಳುವ ಎದೆಗಾರಿಕೆ ಇಲ್ಲಿಯ ಬರಹಗಳ ವಿಶೇಷತೆ. ಚಿಂತಕ,ಚಳವಳಿಕಾರರು, ಬಯಸುವುದು ಅರ್ಥಪೂರ್ಣ ಬದುಕು, ಸ್ವಸ್ಥ ಸಮಾಜ.ಹಾಗೆ ಸಮಾಜದಲ್ಲಿ ಸಮಾನತೆ ಇದ್ದಾಗ ಮಾತ್ರ ಅದು ಸಾಧ್ಯ ಎನ್ನುವ ಸತ್ಯವನ್ನು ಲೇಖನಗಳಲ್ಲಿ ದಾಖಲಿಸಿದ್ದಾರೆ. ಸತ್ಯ ಘಟನೆಗಳನ್ನು ಕಂಡು ಅದನ್ನು ಶೋಧಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೂಡಿದ ಬರಹಗಳಿವು.

About the Author

ಮೀನಾಕ್ಷಿ ಬಾಳಿ
(22 June 1962)

ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ.    ...

READ MORE

Related Books