About the Author

ಡಾ. ನಾಗ ಎಚ್. ಹುಬ್ಬಿ ಅವರು ಮೂಲತಃ ಹುಬ್ಬಳ್ಳಿಯವರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಸದ್ಯ ಇವರು ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.

ಹಲವಾರು ಪತ್ರಿಕೆಗಳಿಗೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಆದಿವಾಸಿಗಳನ್ನು ಕುರಿತು ಕಳೆದ 22 ವರ್ಷಗಳಿಂದ ಝಾರ್ಖಂಡ್, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸಗಢ, ನಿಕೋಬಾರ್ ದ್ವೀಪ, ಉತ್ತರಾಖಂಡ ಮುಂತಾದ ರಾಜ್ಯಗಳ ಆದಿವಾಸಿ ತಾಂಡಾಗಳಿಗೆ ನಿರಂತರ ಭೇಟಿ ನೀಡಿ ಜನಾಂಗೀಯ ಅಧ್ಯಯನ ನಡೆಸುತ್ತಿದ್ದಾರೆ.

'ಸರಹುಲ್', 'ಝಾರ್ಖಂಡ್ ಆದಿವಾಸಿ ಬದುಕು, ಆದಿವಾಸಿ ಸಂಸ್ಕೃತಿ' ಮತ್ತು 'ಅಸುರ' ಇವರ ಇತರ ಕೃತಿಗಳು. ಸಾಕಷ್ಟು ಕೃತಿಗಳ ಅನುವಾದ ಮಾಡಿದ್ದಾರೆ. ಹಿಂದಿಯಿಂದ ಅನುವಾದಿಸಿದ 'ಭೂತನಾಥ' ಎಂಬ ಬೃಹತ್ ಕಾದಂಬರಿಗೆ “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ'ದ ಪುಸ್ತಕ ಬಹುಮಾನ ದೊರಕಿದೆ.

ನಾಗ ಎಚ್. ಹುಬ್ಳಿ