’ಬದಲಾದರೆ ಯೋಚನೆ ಗೆಲುವು ನಿಮ್ಮದೇ’ ಕೃತಿಯು ನಾಗ ಎಚ್. ಹುಬ್ಳಿ ಅವರ ಕತಾ ಹಂದರವಾಗಿದೆ. 47 ಬಿಡಿಬರಹಗಳಿರುವ ಈ ಕೃತಿಯು ಬದುಕಿನ ಸಾರ್ವಕಾಲಿಕ ಜೀವನ ಮೌಲ್ಯಗಳ ಜೊತೆಗೆ ನೀತಿಪಾಠಗಳನ್ನು ತಿಳಿಸುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಮತ್ತು ಜೀವನದ ಯಶಸ್ಸಿಗೆ ಪ್ರೇರಕವಾದ ಸಣ್ಣ ಸಣ್ಣ ರೂಪಕ ಕಥೆಗಳನ್ನು ಹಾಗೂ ಘಟನೆಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಮನುಷ್ಯ ಅರಿತುಕೊಳ್ಳಬೇಕಾದ ವಿಚಾರಗಳ ಕುರಿತು ಆದರ್ಶ ಸೂತ್ರಗಳನ್ನು ನೀಡುವುದು ಬರಹಗಳ ಉದ್ದೇಶವಾಗಿದೆ ಎನ್ನುತ್ತಾರೆ ಲೇಖಕರು.
ಮನುಷ್ಯ ಜ್ಞಾನದ ಮಿತಿಗೆ ತಕ್ಕಂತೆ ಯೋಚಿಸುವುದರಿಂದ, ಸಮಸ್ಯೆಗಳು ಉದ್ಭವಿಸಿದಾಗ ಆ ಯೋಚನೆಗಳು ಅವನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದಿಲ್ಲ. ಕಾರಣ, ಆತ ಯೋಚಿಸುವ ರೀತಿ ಸಮರ್ಪಕವಾಗದೇ ಇರುವುದು. ಅಂತಹ ಸಂದರ್ಭದಲ್ಲಿ ವ್ಯಕ್ತಿ ಹೇಗೆ ಯೋಚನೆಯ ದಿಕ್ಕನ್ನೂ ಬದಲಾಯಿಸಿಬೇಕು, ಬದಲಾವಣೆ ಯಾವ ಬಗೆಯದಾಗಿರಬೇಕು ಎನ್ನುವ ಅಂಶಗಳನ್ನು ಕೇಂದ್ರೀಕರಿಸಿ ರಚಿತಗೊಂಡ ಕೃತಿ ಇದು.
ಲೇಖಕ ನಾಗ ಎಚ್. ಹುಬ್ಳಿ ಅವರು ಎಲೆಕ್ಟ್ರಾನಿಕ್ ಡಿಪ್ಲೊಮಾ ಪದವೀಧರರು. ನಂತರ ಪತ್ರಿಕೋದ್ಯಮದಲ್ಲೂ ಪದವಿ ಪೂರೈಸಿದ್ದಾರೆ. ಕೆಲಕಾಲ ಪತ್ರಿಕೆಗಳಲ್ಲಿ ಕೆಲಸ ಮಾಡಿ ಸದ್ಯ ರಾಂಚಿ( ಜಾರ್ಖಂಡ್)ಯಲ್ಲಿ ಪತ್ರಿಕಾ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಇವರ ಆಸಕ್ತಿ ಕ್ಷೇತ್ರ ಅಧ್ಯಯನವಾಗಿದ್ದು, ದೇಶದ ವಿವಿಧೆಡೆಗಳ ಆದಿವಾಸಿ ಜನಾಂಗದ ಬದುಕು ಸಂಸ್ಕೃತಿಗಳ ಕುರಿತು ಎರಡು ದಶಕಗಳಿಂದ ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ. ಸುಮಾರು 10-15 ಪುಸ್ತಕಗಳು ಪ್ರಕಟವಾಗಿದ್ದು, ಕೆಲ ಪುಸ್ತಕಗಳನ್ನು ಅನುವಾದವೂ ಮಾಡಿದ್ದಾರೆ. ...
READ MORE