ಗಾಂಧಿ ನಿಜಕ್ಕೂ ಮಹಾತ್ಮರೇ?

Author : ನಾಗ ಎಚ್. ಹುಬ್ಳಿ

Pages 374

₹ 374.00
Year of Publication: 2022
Published by: ಸಮೃದ್ಧ ಪ್ರಕಾಶನ
Address: ವಿಠ್ಠಲ ನಗರ, ಬೆಂಗಳೂರು- 560026
Phone: 9880773027

Synopsys

ಎಂ.ಎಂ. ಕೊಠಾರಿ ಅವರ ʻಕ್ರಿಟಿಕ್‌ ಆಫ್‌ ಗಾಂಧಿʼ ಅನ್ನುವ ಇಂಗ್ಲೀಷ್‌ ಕೃತಿಯ ಕನ್ನಡ ಅನುವಾದ ʻಗಾಂಧಿ ನಿಜಕ್ಕೂ ಮಹಾತ್ಮರೇ?ʼ. ಲೇಖಕ ನಾಗ ಹೆಚ್. ಹುಬ್ಳಿ ಅವರು ಈ ಪುಸ್ತಕವನ್ನು ಅನುವಾದಿಸಿದ್ದಾರೆ. ಗಾಂಧೀಜಿಯ ಕುರಿತಾಗಿ ಅನೇಕ ಪ್ರಶ್ನೆಗಳು, ಸಂದೇಹಗಳು ಹಾಗೂ ಆ ಕುರಿತಾಗಿ ಹಲವಾರು ವಿವಾದಗಳೂ ದೇಶದಾದ್ಯಂತ ಹುಟ್ಟಿಕೊಳ್ಳುತ್ತಿವೆ. ಪ್ರಸ್ತುತ ಪುಸ್ತಕವೂ ಗಾಂಧಿಯ ಚಿಂತನೆಗಳು, ಅಹಿಂಸಾ ಭಾವನೆಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸುತ್ತದೆ. ಪುಸ್ತಕದಲ್ಲಿ ಗಾಂಧಿಯ ನೈತಿಕ ತಪ್ಪುಗಳು, ಆಧ್ಯಾತ್ಮಿಕ ಭ್ರಮೆಗಳು ಎಂಬಂತೆ ಅವರ ವಿಚಾರಗಳನ್ನು ಭಾಗಗಳಾಗಿ ವಿಂಗಡಿಸಿ ವಿಶ್ಲೇಶಿಸಲಾಗಿದೆ.

About the Author

ನಾಗ ಎಚ್. ಹುಬ್ಳಿ

ಡಾ. ನಾಗ ಎಚ್. ಹುಬ್ಬಿ ಅವರು ಮೂಲತಃ ಹುಬ್ಬಳ್ಳಿಯವರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಸದ್ಯ ಇವರು ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಹಲವಾರು ಪತ್ರಿಕೆಗಳಿಗೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಆದಿವಾಸಿಗಳನ್ನು ಕುರಿತು ಕಳೆದ 22 ವರ್ಷಗಳಿಂದ ಝಾರ್ಖಂಡ್, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸಗಢ, ನಿಕೋಬಾರ್ ದ್ವೀಪ, ಉತ್ತರಾಖಂಡ ಮುಂತಾದ ರಾಜ್ಯಗಳ ಆದಿವಾಸಿ ತಾಂಡಾಗಳಿಗೆ ನಿರಂತರ ಭೇಟಿ ನೀಡಿ ಜನಾಂಗೀಯ ಅಧ್ಯಯನ ನಡೆಸುತ್ತಿದ್ದಾರೆ. 'ಸರಹುಲ್', 'ಝಾರ್ಖಂಡ್ ಆದಿವಾಸಿ ಬದುಕು, ಆದಿವಾಸಿ ಸಂಸ್ಕೃತಿ' ಮತ್ತು 'ಅಸುರ' ಇವರ ಇತರ ಕೃತಿಗಳು. ...

READ MORE

Related Books