About the Author

ಸ್ತ್ರೀವಾದಿ ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭಿಸಿದ ಅವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ.

ಕನ್ನಡಿಗರ ಕನ್ನಡಿ, ಬಹುಜನ ಕನ್ನಡಿಗರು, ಕನ್ನಡದ ಮನೆಯಿಂದ ಹಾಗೂ ಉಷಾಕಿರಣ ಪತ್ರಿಕೆಗಳಿಗೆ ಸ್ತ್ರೀವಾದಿ ಲೇಖನಗಳ ಅಂಕಣಗಾರ್ತಿ. ’ಮಳೆ ನಿಂತ ಮೇಲಿನ ಮರ, ಉಳಿದದ್ದು ಆಕಾಶ, ಭೂಮ” ಅವರ ಪ್ರಕಟಿತ ಕವನ ಸಂಕಲನಗಳು. ’ದೇವಕಿ, ಗಾರ್ಗಿ, ದ್ರೌಪದಿ, ಕುಂತಿ, ಅಹಲ್ಯಾ, ಯಶೋಧರಾ, ಸೀತಾ, ಶಕುಂತಲಾ’ ಮುಂತಾದ ಪೌರಾಣಿಕ ಕಾದಂಬರಿಳನ್ನು ರಚಿಸಿದ್ಧಾರೆ. ’ಕನ್ನಡ ಸಾಹಿತ್ಯದಲ್ಲಿ ದ್ರೌಪದಿ, ದ್ರೌಪದಿ ಒಂದು ಅಧ್ಯಯನ, ಸ್ತ್ರೀವಾದದ ಪ್ರಸ್ತುತತೆ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಕನ್ನಡ ರಾಮಾಯಣಗಳು, ಹೊರಳುನೋಟ, ಜಾಗತೀಕರಣ ಮತ್ತು ಮಹಿಳೆ, ಸಮನ್ವಯ, ಚಿತ್ತ-ಭಿತ್ತಿ’  ಸಂಶೋಧನೆಯ ಕೃತಿಗಳು. ’ಭೂಮಿ’ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ, ‘ದ್ರೌಪದಿ’ ಕಾದಂಬರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ‘ಯಶೋಧರಾ’ ಕಾದಂಬರಿಗೆ ಗೀತಾದೇಸಾಯಿ ದತ್ತಿನಿ ಪ್ರಶಸ್ತಿ, ‘ಸ್ತ್ರೀವಾದದ ಪ್ರಸ್ತುತತೆ’ ಪ್ರಬಂಧ ಸಂಕಲನಕ್ಕೆ ಕಾವ್ಯನಂದ ಪುರಸ್ಕಾರ, ‘ಸಮನ್ವಯ’ ವಿಮರ್ಶಾ ಕೃತಿಗೆ ಗೋಕಾಕ್ ವಿಮರ್ಶಾ ಪ್ರಶಸ್ತಿಗಳು ಅವರ ಮುಡಿಗೇರಿವೆ. 

ಎಸ್. ವಿ. ಪ್ರಭಾವತಿ

(27 May 1950)