ದೇವಕಿ

Author : ಎಸ್. ವಿ. ಪ್ರಭಾವತಿ

Pages 160

₹ 140.00
Year of Publication: 2021
Published by: ಶ್ರೀ ಸಿದ್ಧಲಿಂಗೇಶ್ವರ ಬುಕ್‌ ಡಿಪೋ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕಿ ಪ್ರಭಾವತಿ ಎಸ್. ವಿ ಅವರ ಕೃತಿ ‘ದೇವಕಿ’. ಕರ್ನಾಟಕ ಲೇಖಕಿಯರ ಸಂಘದ ಕಾಕೋಳು ಸರೋಜಾರಾವ್ ಪ್ರಶಸ್ತಿ ಪುರಸ್ಕೃತ " ದೇವಕಿ " ಕಾದಂಬರಿ ಹಾಗೂ ಅವರ 8ನೇ ಕಾದಂಬರಿಯೂ ಹೌದು.ಲೇಖಕಿ ಖುದ್ದು ಹೇಳುವಂತೆ, ದೇವಕಿಯ ಬಗ್ಗೆ ಬರೆಯಿರಿ ಎಂದು ಸಿಟಿ ಬಸ್ಸಿನಲ್ಲಿ ಭೇಟಿ ಯಾದ ಅಪರಿಚಿತ ಪ್ರಯಾಣಿಕರು ( ಮಂಜುಳಾ ) ಸಲಹೆ ನೀಡಿದಾಗ , ನಾನು ಪರಿಶೀಲಿಸಿದ ಮಟ್ಟಿಗೆ ಎಲ್ಲಾ ಕಡೆಯೂ ಕಂಸ ವಧೆಗೆ ದೇವಕಿಯ ಕತೆ ನಿಂತು ಹೋಗುತ್ತದೆ . ಆದರೆ ಕೃಷ್ಣ ಸಾಯುವ ವರೆಗೆ ಇರುವ ಮಹಾಭಾರತ ದ ಕತೆಯನ್ನಾಧರಿಸಿ ನಾನು ಬರೆದೆ . ಉಳಿದ ವಿವರಗಳಿಗೆ ಪುರಾಣ ನಾಮ ಚೂಡಾಮಣಿಯ ಮೊರೆಹೊಕ್ಕೆ’ ಎನ್ನುತ್ತಾರೆ. ಪುರಾಣಗಳಲ್ಲಿ ಕಂಸ ವಧೆಯ  ನಂತರ ದೇವಕಿ ಎಲ್ಲಿಯೂ ಕಂಡುಬರುವುದಿಲ್ಲ. ಆದರೆ ಕೃಷ್ಣನ ಕಥೆ ಇದೆ ಅವನು ಸಾಯುವವರೆಗೂ ಅಂಶವನ್ನು ಬಳಸಿಕೊಂಡು ದೇವಕಿಯ ಪಾತ್ರವನ್ನು ನಿರ್ಮಾಣ ಮಾಡುವ ಮೂಲಕ ಕಾದಂಬರಿ ಪ್ರಪಂಚಕ್ಕೂ ಪುರಾಣಗಳ ಪ್ರಪಂಚಕ್ಕೂ ಕೊಡುಗೆ ನೀಡಿದ್ದಾರೆ. ಈ ಕಾದಂಬರಿಯು 2010ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. ಇದು ಎರಡನೇ ಆವೃತ್ತಿ. 

 

About the Author

ಎಸ್. ವಿ. ಪ್ರಭಾವತಿ
(27 May 1950)

ಸ್ತ್ರೀವಾದಿ ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭಿಸಿದ ಅವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ...

READ MORE

Related Books