About the Author

ಲೇಖಕ ವೈ.ಬಿ.ಕಡಕೋಳ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು.ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಮೂರು ವರ್ಷಗಳ ಕಾಲ ಅರ್ಟಗಲ್ ಕ್ಲಸ್ಟರ್ ಸಿ.ಆರ್.ಪಿ ಯಾಗಿ. ನಿಯೋಜಿತ ಬಿ.ಆರ್.ಪಿ ಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಅವರು ಹಂಪಿಯ ಕನ್ನಡ ವಿ.ವಿ.ಗೆ ಸಂಶೋಧನಾ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ. 

ಕೃತಿಗಳು:  ಸಾವು ಬದುಕಿನ ನಡುವೆ (ಕಥಾ ಸಂಕಲನ) ಸಂಸ್ಕಾರ ಫಲ (ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ಕಿಟಕಿ(ಸ್ಥಳ ನಾಮ ವಿವೇಚನೆ) ಕತೆಯಲ್ಲ ಜೀವನ (ಸಂಪಾದಿತ ಕೃತಿ) ಅಮೃತ ಧಾರೆ (ಸಂಪಾದಿತ ಕೃತಿ). ಒಂಟಿ ಪಯಣ (ಸಂಪಾದಿತ ಕೃತಿ) ಗುರು ಶಿಷ್ಯ ಸಂಬಂಧ (ಸಂಪಾದಿತ ಕೃತಿ) ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ( ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ ಎಂ.ಫಿಲ್ ಪ್ರಬಂಧ) ಪಯಣಿಗ (ಪ್ರವಾಸ ಕಥನ).

ಪ್ರಶಸ್ತಿ-ಪುರಸ್ಕಾರಗಳು ಇವರ  ಸಾಹಿತ್ಯ ಸೇವೆ ಪರಿಗಣಿಸಿ ನರಗುಂದ ಪತ್ರಿವನದ ಬಿಲ್ವಶ್ರೀ ಪ್ರಶಸ್ತಿ, ಗಡಿಜಿಲ್ಲೆಯ ಹೊಂಗಿರಣ ಸಾಹಿತ್ಯ ಪ್ರತಿಷ್ಠಾನದ ವಿಶಿಷ್ಟ ಸಾಹಿತ್ಯ ಸಾಧಕ ಪ್ರಶಸ್ತಿ,  ಧಾರವಾಡ ಡಯಟ್ ಡೆಪ್ಯೂಟಿ ಚನ್ನಬಸಪ್ಪ ಪ್ರತಿಷ್ಠಾನದ ವಿಭಾಗ ಮಟ್ಟದ ಶಿಕ್ಷಕ ಸಾಹಿತಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕದಿಂದ ಗೌರವ, 2014-15 ರಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿದೆ. ಹಾರೂಗೇರಿಯ ಅಜೂರ ಪ್ರತಿಷ್ಠಾನದ ಜಿಲ್ಲಾ ಮಟ್ಟದ ಸಾಹಿತ್ಯ ಕೃತಿಗೆ ಇವರ ಪಯಣಿಗ ಕೃತಿ ಆಯ್ಕೆಯಾಗಿದೆ. ಸೇಡಂ ತಾಲೂಕಿನ ಮೇದಕ ಗ್ರಾಮದ ಚನ್ನಕೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ನಿಂದ ಶ್ರೀ ಚನ್ನಕೇಶ್ವರ ಉತ್ಸವದ ಮಾತೋಶ್ರೀ ನಾಗಮ್ಮ ಆಶಪ್ಪ ಬೊಪ್ಪಾಲ್ ಸ್ಮರಣಾರ್ಥ ರಾಜ್ಯಮಟ್ಟದ 15ನೇ ವರ್ಷದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ಇವರ “ಚಿತ್ರೆಗೊಂದು ಕಿಟಕಿ” ಕೃತಿ  ಪ್ರಶಸ್ತಿ ಗೌರವ.

ವೈ.ಬಿ. ಕಡಕೋಳ