ಸಂಸ್ಕಾರ ಫಲ

Author : ವೈ.ಬಿ. ಕಡಕೋಳ

Pages 50

₹ 48.00




Year of Publication: 2011
Published by: ಶಿಖರ ಸಾಹಿತ್ಯ
Address: # ಸಿಸಿಬಿ-150, 2ನೇ ಅಡ್ಡರಸ್ತೆ, ಅಂಗೋಲ ಮಾಲ್, ಬೆಳಗಾವಿ

Synopsys

`ಸಂಸ್ಕಾರಫಲ' ಎಂಬುದು ಮಕ್ಕಳ ಕಥಾ ಸಂಕಲನ. ಲೇಖಕ ವೈ.ಬಿ. ಕಡಕೋಳ ಅವರ ಕೃತಿ. ಶೌರ್ಯ ಮೆರೆದ ಬಾಲಕ, ವಿಜಯ ಸೇನೆ ಹಾಗೂ ಆರು ರಾಣಿಯರು, ಮಾತಿನಮರ್ಮ, ಫಲಿಸದ ತಂತ್ರಗಳು, ಪರಮಾತ್ಮನ ಅಸ್ತಿತ್ವ, ಯಾರು ದುರದೃಷ್ಟಶಾಲಿ?, ಪರೀಕ್ಷಿತನ ಜಾಣ್ಮೆ, ಮಾತೆಯ ಮೌಲ್ಯ, ನನಸೆಂದುಕೊಂಡ ಕನಸು, ಛಲತಂದ ಫಲ, ತುಂಟ ಅನಂತು, ಸಂಸ್ಕಾರ ಫಲ, ದುರಾಸೆಯಫಲ ಎಂಬ ಶೀರ್ಷಿಕೆಯ ಒಟ್ಟು 13 ಕಥೆಗಳನ್ನು ಸಂಕಲಿಸಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ವೈ.ಬಿ. ಕಡಕೋಳ

ಲೇಖಕ ವೈ.ಬಿ.ಕಡಕೋಳ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು.ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಮೂರು ವರ್ಷಗಳ ಕಾಲ ಅರ್ಟಗಲ್ ಕ್ಲಸ್ಟರ್ ಸಿ.ಆರ್.ಪಿ ಯಾಗಿ. ನಿಯೋಜಿತ ಬಿ.ಆರ್.ಪಿ ಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಅವರು ಹಂಪಿಯ ಕನ್ನಡ ವಿ.ವಿ.ಗೆ ಸಂಶೋಧನಾ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ.  ಕೃತಿಗಳು:  ಸಾವು ಬದುಕಿನ ನಡುವೆ (ಕಥಾ ಸಂಕಲನ) ಸಂಸ್ಕಾರ ಫಲ (ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ...

READ MORE

Related Books