ಆರ್ಚಿ ಅಂಕಣ

Author : ಎನ್. ಭಾಸ್ಕರ ಆಚಾರ್ಯ

Pages 124

₹ 100.00




Year of Publication: 2016
Published by: ಎನ್.ಆರ್‌.ಎ.ಎಮ್.ಎಚ್ ಪ್ರಕಾಶನ
Address: ಕೋಟೇಶ್ವರ 576222

Synopsys

ವೃತ್ತಿಯಲ್ಲಿ ವೈದ್ಯರಾಗಿ ಜನಪ್ರಿಯರಾಗಿರುವ ಎನ್.ಭಾಸ್ಕರ ಆಚಾರ್ಯರು 'ಆರ್ಚಿ' ಎಂಬ ಕಾವ್ಯನಾಮದಿಂದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸಾಮಾಜಿಕ ಕಳಕಳಿಯ ಜನಪರ ಚಿಂತನೆಯ ಫಲವಾಗಿ ರೂಪುಗೊಂಡ ವಿಚಾರಗಳು, ಸ್ಥಿತಿಗತಿ ಪತ್ರಿಕೆಗಾಗಿ ಪುಟ್ಟ ಮಟ್ಟ ಬರಹಗಳಾಗಿ ಮೂಡಿ ಬಂದಿದ್ದು, ಅಂತಹ ಲೇಖನಗಳನ್ನು ’ಆರ್ಚಿ ಅಂಕಣ’ ಸಂಕಲನದಲ್ಲಿ ನೀಡಲಾಗಿದೆ.

ಸಾಮಾಜಿಕ ಆರೋಗ್ಯ, ಆಸ್ಪತ್ರೆಗಳ ವ್ಯವಸ್ಥೆ, ಸಮಕಾಲೀನ ಜಗತ್ತಿನ ಸಾಮಾಜಿಕ ಮೌಲ್ಯಗಳು, ಯುವ ಜನತೆಯ ಗೊಂದಲಗಳು, ಜನರ ಮನಸ್ಸನ್ನು ಬದಲಿಸಬಲ್ಲ ಜಾಹೀರಾತುಗಳು, ಕನ್ನಡ ಪ್ರಕಾಶನ ಉದ್ಯಮ, ಅಪರಾಧಿ ಮನೋವೃತ್ತಿ ಮುಂತಾದ ಸಂಗತಿಗಳನ್ನು ಹೊಸ ಆಲೋಚನಾ ಕ್ರಮದಿಂದ ವಿಶ್ಲೇಷಿಸಿ ಬರೆದಿರುವ ಲೇಖನಗಳು ಓದುಗರಿಗೆ ಹೊಸ ಒಳನೋಟಗಳನ್ನು ನೀಡುತ್ತವೆ.

About the Author

ಎನ್. ಭಾಸ್ಕರ ಆಚಾರ್ಯ
(01 February 1954)

ಭಾಸ್ಕರ್ ಆಚಾರ್ಯ ಎನ್ ಅವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ 1954 ಫೆಬ್ರವರಿ 01ರಂದು ಜನಿಸಿದರು. ಆರ್ಚಿ ಅವರ ಕಾವ್ಯನಾಮ. ತಂದೆಯ ಸ್ಮರಣಾರ್ಥ ಡಾ. ಎನ್. ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆಯನ್ನು 1983ರಲ್ಲಿ ನಿರ್ಮಿಸಿದ್ದಾರೆ.  ಕೋಟೇಶ್ವರ ರೋಟರಿ ಸಂಸ್ಥೆಯ ಪ್ರಾರಂಭಿಕ ಸದಸ್ಯರಾಗಿದ್ದರು. ಸುವರ್ಣ ಮಹೋತ್ಸವ ಸಮಿತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ಗೌರವಾಧ್ಯಕ್ಷ ಹಾಗೂ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದರು. ‘ದ್ವಂದ್ವ, ವ್ಯವಸ್ಥೆ, ಅಭ್ಯಾಸ, ಪ್ರಯೋಗ, ಪರಿಣಾಮ, ಹೊಸ ಹಾದಿಯಲ್ಲಿ, ಆರ್ಚಿ ಅಂಕಣ’ ಅವರ ಮುಖ್ಯ ಕೃತಿಗಳು. ಪ್ರತಿ ವರ್ಷ ಬೆಂಗಳೂರಿನ ಗೆಳೆಯರ ಬಳಗದ ಸಹಯೋಗದೊಡನೆ ಸಾಹಿತ್ಯಕ ಸ್ಪರ್ಧೆ, ...

READ MORE

Related Books