ಇದು ಜೀವನ ಇದು ಅಮೃತ

Author : ಪಾಟೀಲ ಪುಟ್ಟಪ್ಪ

Pages 215

₹ 75.00




Year of Publication: 2000
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

‘ಇದು ಜೀವನ ಇದು ಅಮೃತ’ ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ ಅವರ ಹಿತಚಿಂತನೆ/ಸೂಕ್ತಿಗಳ ಕೃತಿ. ಪ್ರಪಂಚ ವಾರಪತ್ರಿಕೆಯಲ್ಲಿ ದಶಕಗಳ ಕಾಲ ಬರೆದ ಅನುಭವ ಅಂಕಣದ ಸಂಗ್ರಹ ರೂಪ ‘ಇದು ಜೀವನ ಇದು ಅಮೃತ.' 

ಸನ್ಯಾಸಿ, ಬ್ರಹ್ಮಚರ್ಯ, ಸೌಂದರ್ಯ, ಸುದೈವ, ದುರ್ಗುಣ, ಸದ್ಗುಣ, ಪ್ರೇಮ- ಪ್ರೀತಿ , ನೀತಿ ನಡತೆ, ಗೆಳೆತನ, ತಂದೆ ತಾಯಿ, ಯೌವ್ವನ ಮುಪ್ಪು, ಕೆಲಸ, ರೈತ ಒಕ್ಕಲಿಗ, ಹವ್ಯಾಸ,... ಇಂತಹ ಅನೇಕ ವಿಷಯಗಳ ಕುರಿತು ಅನುಭವ, ಓದು, ಅವಲೋಕನದ ಆಧಾರದ ಮೇಲೆ ಸೂಕ್ತಿಗಳನ್ನು 'ಪಾಪು’ ರಚಿಸಿಕೊಟ್ಟಿದ್ದಾರೆ.

About the Author

ಪಾಟೀಲ ಪುಟ್ಟಪ್ಪ
(14 January 1922 - 16 March 2020)

`ಪಾಪು’ ಎಂದೇ ಚಿರಪರಿಚಿತರಿರುವ ಪಾಟೀಲ ಪುಟ್ಟಪ್ಪ ಅವರು ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡವರು. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದವರು. ತಂದೆ ಸಿದ್ಧಲಿಂಗಪ್ಪ-ತಾಯಿ ಮಲ್ಲಮ್ಮ. 1922ರ ಜನೆವರಿ 4ರಂದು ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. 1949ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು. ‘ವಿಶಾಲ ಕರ್ನಾಟಕ’ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ‘ನವಯುಗ’ ಮಾಸಪತ್ರಿಕೆ ...

READ MORE

Related Books