ಬೀದಿ ಮಕ್ಕಳು ಬೆಳದೊ (ಗಾದೆಗಳ ಸಂಕಲನ)

Author : ಕಾಳೇಗೌಡ ನಾಗವಾರ

Pages 240

₹ 180.00




Year of Publication: 2016
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಜಾನಪದ ತಜ್ಞ ಡಾ. ಕಾಳೇಗೌಡ ನಾಗವಾರ ಅವರು ಗಾದೆಗಳನ್ನು ಸಂಗ್ರಹಿಸಿ, ಸಂಪಾದಿಸಿದ ಕೃತಿ-ಬೀದಿ ಮಕ್ಕಳು ಬೆಳದೊ. ಜಾನಪದ ಸಾಹಿತ್ಯ ರಚನೆಕಾರರು ಯಾರೆಂಬುದು ಗೊತ್ತಿಲ್ಲ. ಬಾಯಿಂದ ಬಾಯಿಗೆ ಹರಿದು ಬಂದ ಸಾಹಿತ್ಯವದು. ಗಾದೆ ಮಾತುಗಳೆಂದರೆ ವೇದಕ್ಕೂ ಮಿಗಿಲು ಎಂಬ ಭಾವನೆ ಜನಮಾನಸದಲ್ಲಿದೆ. ಏಕೆಂದರೆ, ಗಾದೆಗಳು ಬದುಕಿನ ಅನುಭವದ ಬೆಳಕು. ಸಾರ ಎಲ್ಲವೂ ಆಗಿದೆ. ಒಂದು ವೇಳೆ ವೇದ ಸುಳ್ಳಾಗಬಹುದು. ಆದರೆ, ಗಾದೆಗಳು ಸುಳ್ಳಾಗಲಾರವು. ಅವು ಬದುಕಿನ ಸತ್ಯದ ಮೂಲವನ್ನು ಒಳಗೊಂಡಿವೆ. ಹೀಗಾಗಿ, ಬದುಕಿನ ವಿವಿಧ ಆಯಾಮಗಳ ಅಧ್ಯಯನಕ್ಕೂ ಈ ಗಾದೆಗಳು ಎಲ್ಲ ರೀತಿಯ ಆಕರಗಳನ್ನು ಪೂರೈಸುತ್ತವೆ. ಒಳನೋಟಗಳನ್ನು ನೀಡುತ್ತವೆ. ಬದುಕಿನ ರೀತಿಯನ್ನು ಕಲಿಸುತ್ತವೆ. ಈ ಹಿನ್ನೆಲೆಯಲ್ಲಿ ಈ ಕೃತಿಯು ಮಹತ್ವ ಪಡೆಯುತ್ತದೆ.

About the Author

ಕಾಳೇಗೌಡ ನಾಗವಾರ
(02 February 1947)

ಕತೆಗಾರ ಕಾಳೇಗೌಡ ನಾಗವಾರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರದವರು. ತಂದೆ ಸಿದ್ದೇಗೌಡ, ತಾಯಿ ಲಿಂಗಮ್ಮ. ನಾಗವಾರ, ಚೆನ್ನಪಟ್ಟಣ, ಮಂಡ್ಯ, ಮೈಸೂರಿನಲ್ಲಿ ಶಿಕ್ಷಣ ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದ ಎಂ.ಎ.(1971)  ಪದವೀಧರರು. ಬೆಂಗಳೂರು ವಿ.ವಿ.ಯಿಂದ ‘ಕಾಡುಗೊಲ್ಲರ ಒಂದು ಹಟ್ಟಿಯ ಅಧ್ಯಯನ’ ಪ್ರಬಂಧಕ್ಕೆ ಪಿಎಚ್ ಡಿ ಪದವಿ (1985) ಪಡದರು.  ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು. ಬೆಂಗಳೂರು ವಿ.ವಿ. ಜ್ಞಾನಭಾರತಿ ಕನ್ನಡ (1985) ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ (2007ರವರೆಗೆ) ಪ್ರಾಧ್ಯಾಪಕರಾಗಿದ್ದರು.  ಕಾಳೇಗೌಡ ನಾಗವಾರ ಅವರ ...

READ MORE

Related Books