ಕ್ರಿಯಾಶೀಲ ಸಹೋದರರು

Author : ಬಿ.ಪಿ. ಸಂಪತ್ ಕುಮಾರ್

Pages 248

₹ 150.00




Year of Publication: 2018
Published by: ಸುವರ್ಣ ಮಹೋತ್ಸವ ಆಚರಣಾ ಸಮಿತಿ
Address: ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಯವ ಪುಸ್ತಕ ಮಾಲಿಕೆ. ಶ್ರೀ ಕ್ಷೇತ್ರ ಧರ್ಮಸ್ಥಳ

Synopsys

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರರ ಕಾಯಕಗಳ ಕಥಾನಕವೇ ʼಕ್ರಿಯಾಶೀಲ ಸಹೋದರರುʼ ಕೃತಿ. ಲೇಖಕ ಡಾ.ಬಿ.ಪಿ ಸಂಪತ್‌ ಕುಮಾರ್, ಧರ್ಮಸ್ಥಳದ ಆಗು ಹೋಗುಗಳ ಹಿನ್ನೆಲೆಯಲ್ಲಿ ಕಾರ್ಯಪ್ರವೃತರಾಗುವ ಸಹೋದರರ ಕಾರ್ಯವ್ಯಾಪ್ತಿ ಮತ್ತು ಕೌಶಲ್ಯಗಳನ್ನು ಈ ಪುಸ್ತಕ ದಾಖಲಿಸುತ್ತ ಹೋಗುತ್ತದೆ.

ಶ್ರೀ.ಡಿ ಸುರೇಂದ್ರ, ಶ್ರೀ ಡಿ. ಹರ್ಷೇಂದ್ರ, ಮತ್ತು ಶ್ರೀ ಡಿ.ರಾಜೇಂದ್ರ ಈ ಸಹೋದರರು ಹಿರಿಯಣ್ಣ ವೀರೇಂದ್ರರೊಂದಿಗೆ ಸೇರಿಕೊಂಡ ಚತುರ್ಭುಜಗಳಾದರೆ, ತಂಗಿ ಶ್ರೀಮತಿ ಪದ್ಮಲತಾ ಅಣ್ಣನ ಕೀರ್ತಿಯನ್ನು ಬೆಳಗುವ ಮಣಿದೀಪವಾಗಿದ್ದರೆ. ಧರ್ಮಸ್ಥಳದ ಕ್ರಿಯಾಶೀಲತೆ ಮತ್ತು ಕಾರ್ಯಕ್ಷೇತ್ರಗಳು ಇಂದು ದೇಶದ ಇತರೆಡೆಗಳಿಗೂ ವ್ಯಾಪಿಸಿ ಸಾಂಗವಾಗುತ್ತಿರುವುದಲ್ಲಿ ಖಾವಂದರ ಸೂಕ್ಷ್ಮ ನೋಟ ಮತ್ತು ಜನತಾಂತರ ದೃಷ್ಟಿಯು ಮುಖ್ಯವಾಗಿದೆ, ಎಂದು  ಲೇಖಕರು ವಿಶ್ಲೇಷಿಸಿದ್ದಾರೆ. 

About the Author

ಬಿ.ಪಿ. ಸಂಪತ್ ಕುಮಾರ್

ಡಾ. ಬಿ. ಪಿ. ಸಂಪತ್ ಕುಮಾರ್ ಅವರು ಅವಿಭಜಿತ ದ.ಕ. ಜಿಲ್ಲೆಯ ಅನೇಕ ಸಂಸ್ಥೆಗಳ ಸ್ಮರಣ ಸಂಚಿಕೆಗಳ ಸಂಪಾದಕರಾಗಿ, ವಿಮರ್ಶೆ ಮತ್ತು ಪರಾಮರ್ಶನ ಗ್ರಂಥಗಳಲ್ಲಿ ಸಹಸಂಪಾದಕರಾಗಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ, ಜೇಸೀ ವಲಯ ತರಬೇತಿದಾರರಾಗಿ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದ್ದು, ರಾಷ್ಟ್ರಮಟ್ಟದ ಶೈಕ್ಷಣಿಕ ಶಿಬಿರಗಳಲ್ಲಿ ತರಬೇತಿ ಪಡೆದವರು, ಅನೇಕ ರಾಷ್ಟ್ರೀಯ ವಿಚಾರ ಸಂಕಿರಣಗಳ ಸಂಘಟಕರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಚಿನ್ನದ ಪದಕಗಳೊಂದಿಗೆ  ಸ್ನಾತಕೋತ್ತರ ಪದವೀಧರರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. 'ಸಾಂಸ್ಕತಿಕ ಧರ್ಮಸ್ಥಳ' ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಮುಂಬಯಿ ವಿ. ವಿ. ಯಿಂದ ಪಿ.ಹೆಚ್.ಡಿ. ...

READ MORE

Related Books