ಸಿರಿ ಚೈತನ್ಯದ ಸಿರಿ

Author : ಎ. ಜಯಕುಮಾರ ಶೆಟ್ಟಿ

Pages 232

₹ 150.00




Year of Publication: 2019
Published by: ಸುವರ್ಣ ಮಹೋತ್ಸವ ಆಚರಣ ಸಮಿತಿ
Address: ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭೀಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆ, ಶ್ರೀಕ್ಷೇತ್ರ ಧರ್ಮಸ್ಥಳ

Synopsys

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭೀಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯದ ಭಾಗ-15ರ ಕೃತಿಯಾಗಿ ‘ಸಿರಿ, ಚೈತನ್ಯದ ಸಿರಿ’ ಪ್ರಕಟಗೊಂಡಿದೆ. ಲೇಖಕ ಡಾ. ಎ. ಜಯಕುಮಾರ ಶೆಟ್ಟಿ ಅವರು ಕೃತಿಕಾರರು. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ಪಿ. ಸುಬ್ರಮಣ್ಯ ಎಡಪಡಿತ್ತಾಯ ಅವರು ‘ಪ್ರಾರ್ಥಿಸುವ ಕೈಗಳಿಗಿಂತ ಸಹಾಯ ಮಾಡುವ ಕೈಗಳು ಶ್ರೇಷ್ಠ ಎಂಬ ಮಾತಿನಂತೆ ಸಾಮಾನ್ಯ ಜನರ ಅಭಿವೃದ್ಧಿಗೆ ಬೇಕಾಗಿರುವುದು ಪ್ರೀತಿಪೂರ್ವಕವಾಗಿ ಆತ್ಮವಿಶ್ವಾಸ ತುಂಬಿಸುವ ಮಾರ್ಗದರ್ಶನ ಹಾಗೂ ಸಕಾಲಿಕ ಸೌಲಭ್ಯಗಳು. ಪೂಜ್ಯ ಹೆಗ್ಗಡೆಯವರ ಅನುಗ್ರಹಪೂರ್ವಕ ಪ್ರಗತಿಪರ ಚಿಂತನೆಗಳು ಯೋಜನೆಯ ಸೇವಾನಿರತರ ಮೂಲಕ ನಾಡಿನ ಮೂಲೆ ಮೂಲೆಯ ಬಡ ಕುಟುಂಬಗಳ ಬದುಕನ್ನು ಹಸನಾಗಿಸಿದೆ. ‘ಸಿರಿ’ ಸಂಸ್ಥೆಯು ಬೆಳೆದು ಬಂದ ರೀತಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿ ನಿಲ್ಲುವ ಪರಿ ಸಂಶೋಧಕರಿಗೆ, ಅಭಿವೃದ್ಧಿ ಚಿಂತಕರಿಗೆ ಅಧ್ಯಯನ ಯೋಗ್ಯ ಸಂಗತಿ ಹಾಗೂ ತೊಡಗಿಸಿಕೊಳ್ಳುವವರಿಗೆ ಮಾದರಿಯಾಗಿ ಗೋಚರಿಸುತ್ತದೆ. ನೂರಾರು ಸಂಶೋಧನಾ ಗ್ರಂಥಗಳನ್ನು ಬರೆಯುವಷ್ಟು ವಿಶಾಲವಾಗಿ ಬೆಳೆದಿರುವ ಹಾಗೂ ನಿರಂತರ ವಿನೂತನ ಪ್ರಯೋಗಗಳಿಗೆ ತೆರೆದುಕೊಳ್ಳುವ ಪ್ರಕ್ರಿಯೆಯನ್ನು ಕೆಲವೇ ಪುಟಗಳ ಪುಸ್ತಕದಲ್ಲಿ ಕ್ರೋಢಿಕರಿಸುವುದು ಕಷ್ಟ ಸಾಧ್ಯ. ಆದಾಗ್ಯೂ ಈ ಕೃತಿ ಐತಿಹಾಸಿಕ ಅಭಿವೃದ್ಧಿ ಮಾದರಿಯ ಕುರುಹು ಆಗಿದೆ ಎನ್ನುವುದು ಹೆಮ್ಮೆಯ ಸಂಗತಿ’ ಎಂದು ಪ್ರಶಂಸಿಸಿದ್ದಾರೆ.

About the Author

ಎ. ಜಯಕುಮಾರ ಶೆಟ್ಟಿ

ಡಾ. ಎ. ಜಯಕುಮಾರ ಶೆಟ್ಟಿ ಅವರು ಮಂಗಳೂರು ವಿ.ವಿ.ಯಿಂದ ಅರ್ಥಶಾಸ್ತ್ರದ ಸ್ನಾತಕೋತ್ತರ ಪದವೀಧರರು. 1985ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನಲ್ಲಿ ವೃತ್ತಿಬದುಕು ಆರಂಭಿಸಿ, ಸಿಬ್ಬಂದಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ, ಎಂ.ಬಿ.ಎ ಹಾಗೂ ಕರ್ನಾಟಕ ವಿ.ವಿ.ಯಿಂದ (1998) ಡಾಕ್ಟರೇಟ್ ಪದವಿ ಪಡೆದರು. ಪ್ರಸಕ್ತ ತುಮಕೂರು ವಿ.ವಿ. ಹಾಗೂ ಕನ್ನಡ ವಿ.ವಿ. ಅಭಿವೃದ್ಧಿ ಆಧ್ಯಯನ ವಿಭಾಗದ ಸಂಶೋಧನಾ ಮಾರ್ಗದರ್ಶಕರು. ಮಂಗಳೂರು ವಿ.ವಿ. ಗ್ರಾಮೀಣಾಭಿವೃದ್ಧಿ ಹಾಗೂ ವ್ಯವಹಾರ ನಿರ್ವಹಣಾ ಅಧ್ಯಯನ ಮಂಡಳಿಯ ಅಧ್ಯಕ್ಷರು ಹಾಗೂ ಮಂಗಳೂರು ವಿ.ವಿ. ಅರ್ಥಶಾಸ್ತ್ರ ಒಕ್ಕೂಟದ ರಾಜ್ಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ರಾಜ್ಯ ಪ್ರಶಸ್ತಿ, ...

READ MORE

Related Books