ಧರ್ಮೋತ್ಥಾನ

Author : ಪುಂಡಿಕ್ಯಾ ಗಣಪಯ್ಯ ಭಟ್

Pages 267

₹ 150.00




Year of Publication: 2019
Published by: ಸುವರ್ಣ ಮಹೋತ್ಸವ ಆಚರಣಾ ಸಮಿತಿ
Address: ಶ್ರೀ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆ, ಶ್ರೀಕ್ಷೇತ್ರ ಧರ್ಮಸ್ಥಳ.

Synopsys

ಶ್ರೀ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯ-17ನೇ ಕೃತಿಯಾಗಿ ‘ಧರ್ಮೋತ್ಥಾನ’ ಪ್ರಕಟಗೊಂಡಿದೆ. ಲೇಖಕ ಡಾ. ಪುಂಡಿಕ್ಯಾ ಗಣಪಯ್ಯ ಭಟ್ ಅವರು ಸಂಪಾದಿಸಿದ್ದಾರೆ. ಜೀಣೋದ್ಧಾರದ ಜೊತೆಗೆ ಸಾನ್ನಿಧ್ಯವನ್ನು ಉಳಿಸಿ, ವೃದ್ಧಿಸುವುದು ಮುಖ್ಯ (ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ನಡೆಸಿದ ಸಂದರ್ಶನ), ಪರಂಪರೆಯ ಸಂರಕ್ಷಣೆಯ ಪುಣ್ಯಕಾರ್ಯದಲ್ಲಿ ಭಾಗಿಯಾಗುವುದರಿಂದ ಸಂತೋಷ ಮತ್ತು ಆತ್ಮತೃಪ್ತಿ, ಡಿ. ಸುರೇಂದ್ರಕುಮಾರ್ ಅವರ ಮನದ ಮಾತು) , ಪೂಜ್ಯ ಹೆಗ್ಗಡೆಯವರ ಕನಸನ್ನು ನನಸಾಗಿಸುವುದರಲ್ಲೇ ಸಾರ್ಥೈಕ್ಯ (ಎ.ಎಚ್. ಹರಿರಾಮ ಶೆಟ್ಟಿಯವರ ಜೊತೆ ಮಾತುಕತೆ) , ಹಲವರು ಕಂಡಂತೆ, ಸದ್ದಿಲ್ಲದ ಕ್ರಾಂತಿ, ಪುನರುತ್ಥಾನದ ಯಶೋಗಾಥೆ ಅಧ್ಯಾಯಗಳನ್ನು ಒಳಗೊಂಡಿದೆ.

ಕೃತಿಗೆ ಮುನ್ನುಡಿ ಬರೆದ ಸಾಹಿತಿ ಸಿ.ಎಸ್. ಕೇದಾರ ಅವರು ‘ಧರ್ಮೋತ್ಥಾನ ಟ್ರಸ್ಟ್ ಬೆಳೆದು ಬಂದ ಪರಿ, ಉದ್ದೇಶ ಹಾಗೂ ಸಾಧನೆಗಳ ಜೊತೆ ಸ್ಮಾರಕ, ಚರಿತ್ರೆ, ಪರಂಪರೆ, ಸಂರಕ್ಷಣೆ-ಇವೆಲ್ಲವೂ ಈ ಕೃತಿಯಲ್ಲಿ ವಿವಿಧ ಆಯಾಮಗಳಲ್ಲಿ ವೈಚಾರಿಕ ಒಳನೋಟದಿಂದ ಡಾ. ಪುಂಡಿಕ್ಯಾ ಗಣಪಯ್ಯ ಭಟ್ ಅವರ ಬರಹ ಗಮನ ಸೆಳೆಯುತ್ತದೆ. ಇಂತಹ ಒಂದು ವಿಶೇಷ ಹಾಗೂ ಅತ್ಯಪೂರ್ವ ಕಾರ್ಯಗಳನ್ನು ಬರಹ ರೂಪದಲ್ಲಿ ಇಳಿಸುವುದು ಸಾಮಾನ್ಯನವರೆಗೂ ಮನಮುಟ್ಟುವಂತೆ ತಿಳಿಸುವುದು ಸುಲಭ ಸಾಧ್ಯವಲ್ಲ. ಅದೆಲ್ಲವನ್ನೂ ಒಳಗೊಳ್ಳಿಸಿ, ಸುಂದರವಾದ ಆವರಣದೊಂದಿಗೆ ವಿಶಾಲ ವ್ಯಾಪ್ತಿಯ ಬೃಹತ್ ಯೋಜನೆಯ ನೋಟವನ್ನು ಮುನ್ನೋಟದೊಂದಿಗೆ ಲೇಖಕರು ಈ ಮೂಲಕ ಉಣಬಟಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ಪುಂಡಿಕ್ಯಾ ಗಣಪಯ್ಯ ಭಟ್

ಲೇಖಕ ಡಾ. ಪುಂಡಿಕ್ಯಾ ಗಣಪಯ್ಯ ಭಟ್ ಅವರು ಮೂಡಬಿದಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕರು. ತುಳುನಾಡಿನ ಇತಿಹಾಸ, ವಾಸ್ತುಶಿಲ್ಪ ಹಾಗೂ ಶಾಸನಗಳ ಕುರಿತ ಸಂಶೋಧಕರು. ಪುರಾತತ್ವ ವಿಭಾಗಗಳಿಗೆ ಸಂಬಂಧಿಸಿ ಗ್ರೀಸ್ ಹಾಗೂ ಇಂಗ್ಲೆಂಡ್ ನಲ್ಲಿ ತರಬೇತಿ ಪಡೆದಿದ್ದು, ಈ ಕುರಿತು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ನೂರಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದಾರೆ. ಬಟ್ವಾಳ್ ತಾಲೂಕು (2017) ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಂದಿದೆ. ಹಂಪಿಯ ಕನ್ನಡ ವಿ.ವಿ. ಹಾಗೂ ಮಣಿಪಾಲ ವಿ.ವಿ.ಗಳ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶಕರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಉಪನ್ಯಾಸಗಳನ್ನು ...

READ MORE

Related Books