ಮನೆಗೆಲಸದ ಕಯ್ಪಿಡಿ

Author : ಭಾರತಿ ಭಟ್‌

₹ 275.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: 64/1, 5Tನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು- 560009
Phone: 7353530805

Synopsys

ಲೇಖಕಿ ಭಾರತಿ ಭಟ್‌ ಅವರು ಬರೆದ ಕೈಪಿಡಿ ಕೃತಿ ʻಮನೆಗೆಲಸದ ಕೈಪಿಡಿʼ. ಪುಸ್ತಕ ಮನೆ ಕೆಲಸಗಳಿಗೆ ಸಹಾಯಯಾಗುವ ಉಪಕರಣಗಳು, ಅವುಗಳ ಆರೈಕೆ, ಜಾಣ್ಮೆಯಿಂದ ಕೆಲಸ ಮಾಡುವ ಕುರಿತು ಸಲಹೆಗಳನ್ನು ನೀಡುತ್ತದೆ. ಅಗತ್ಯ ವಸ್ತುಗಳು ಕೆಟ್ಟು ಹೋಗದಂತೆ ನೋಡಿಕೊಳ್ಳುವುದು, ಅವುಗಳಿಂದ ಹಣ- ಸಮಯ ಎರಡನ್ನೂ ಉಳಿಸುವುದು, ಅಡುಗೆಗೆ ರುಚಿ ಹೆಚ್ಚಿಸುವುದು ಹಾಗೂ ಮನೆಯವರ ಆರೋಗ್ಯವನ್ನು ಕಾಪಾಡುವುದು ಹೀಗೆ ಮನೆಯ ದಿನನಿತ್ಯದ ಕ್ರಿಯೆಗಳನ್ನು ಅಚ್ಚು ಕಟ್ಟಾಗಿ, ಸುಲಭ ಮಾರ್ಗದಲ್ಲಿ ಮಾಡುವ ವಿಚಾರಗಳನ್ನು ವಿವರವಾಗಿ ಪುಸ್ತಕ ಹೇಳಿಕೊಡುತ್ತದೆ. ಭಾರತಿ ಅವರು ತಮ್ಮ ʻಅಡಿಗೆಯ ಒಳಗುಟ್ಟುʼ ಮತ್ತು ʻಮನೆಗೆಲಸದ ಒಳಗುಟ್ಟುʼ ಎಂಬ ಎರಡು ಪುಸ್ತಕಗಳಲ್ಲಿ ಹೇಳಿರುವ ಹಾಗೂ ತಮ್ಮ ಅನುಭವದ ಹಿನ್ನೆಲೆಯಿಂದ ಹಂಚಿಕೊಂಡ ಕೆಲವು ವಿಷಯಗಳನ್ನು ಒಟ್ಟು ಸೇರಿಸಿ ಈ ಕೈಪಿಡಿಯನ್ನು ತಯಾರಿಸಲಾಗಿದೆ.

About the Author

ಭಾರತಿ ಭಟ್‌

ಭಾರತಿ ಭಟ್‌ ಅವರು ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನ ಕೊಂಬೆಟ್ಟಿನವರು. ಪುತ್ತೂರಿನಲ್ಲೇ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಬಳಿಕ 1963ರಲ್ಲಿ ಡಿ.ಎನ್.‌ ಶಂಕರ ಭಟ್ಟರನ್ನು ವಿವಾಹವಾದರು. ಮುಂದೆ ಪುಣೆಯಿಂದ ಜೀವನ ಶುರುವಾಗಿ ಮೈಸೂರಿನವರೆಗೆ ಹಲವಾರು ಊರುಗಳಲ್ಲಿ ನಡೆಯಿತು. ಬರವಣಿಗೆ ಮೇಲೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಭಾರತಿ ಭಟ್‌ ಅವರು ಆ ಅನುಭವಗಳನ್ನು ಒಟ್ಟುಸೇರಿಸಿ ʻಬದುಕು ಬರಹʼ ಪುಸ್ತಕದ ಮೂಲಕ ಹೊರತಂದಿದ್ದಾರೆ. ...

READ MORE

Related Books