ಪುಟ್ಟೀರಮ್ಮನ ಪುರಾಣ

Author : ವಿ. ಗಾಯತ್ರಿ

Pages 76

₹ 40.00




Published by: ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಆಂಡ್ ಆ್ಯಕ್ಷನ್
Address: ನಂ. 22, 5ನೇ ಕ್ರಾಸ್, ಮೈಖೇಲ್ ಪಾಳ್ಯ, 2ನೇ ಹಂತ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು- 560075

Synopsys

‘ಪುಟ್ಟೀರಮ್ಮನ ಪುರಾಣ’ ಮಿಶ್ರಬೆಳೆ-ಬೆರಕೆ ಸೊಪ್ಪಿನ ವಿಸ್ಮಯ ಲೋಕ. ಲೇಖಕಿ ವಿ. ಗಾಯತ್ರಿ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಅನುಭವದ ನುಡಿಮುತ್ತುಗಳಿಗೆ ಮೊದಲ ಸ್ಥಾನ. ಪುಸ್ತಕದ ಉಪಶೀರ್ಷಿಕೆ ಹೇಳುವಂತೆ ಮುಖ್ಯವಾಗಿ ಮಿಶ್ರಬೆಳೆ ಮತ್ತು ಬೆರಕೆಸೊಪ್ಪಿನ ವಿಸ್ಮಯಲೋಕ ಈ ಕೃತಿಯಲ್ಲಿ ಅನಾವರಣಗೊಂಡಿದೆ. ಪುಟ್ಟೀರಮ್ಮನವರ ಅನುಭವದ ಮಾತುಗಳು ನಮ್ಮ ಹಳೆ ಕೃಷಿ ಪದ್ಧತಿ ಎಷ್ಟು ಸಂಪದ್ಭರಿತವಾಗಿದೆ. ರೈತರನ್ನು ಹೇಗೆ ಸ್ವಾವಲಂಬಿಗಳಾಗಿಸುವ ವಿಧಾನವಾಗಿದೆ ಎಂದು ಪ್ರತ್ಯಕ್ಷಿಸಿ ತೋರಿಸುತ್ತದೆ. ಈ ನೆಲದ ಅಮೂಲ್ಯ ಕೃಷಿ ಜ್ಞಾನವನ್ನು ಶತಮಾನಗಳಿಂದ ಸಂರಕ್ಷಿಸಿ ಜಾನಪದ ಹಾಡುಗಳಲ್ಲಿ, ಗಾದೆ ಮಾತುಗಳಲ್ಲಿ, ಸಾಂಸ್ಕೃತಿಕ ಪದ್ಧತಿಗಳಲ್ಲಿ ಅಳವಡಿಸಿ, ಯಾವ ಅಕ್ಷರ ಜ್ಞಾನದ ಹಂಗೂ ಇಲ್ಲದೆ ಮಹಾನ್ ಜ್ಞಾನ ಪರಂಪರೆಯನ್ನು ಮುಂದಿನ ಜನಾಂಗಗಳಿಗೆ ದಾಟಿಸುತ್ತಾ ಬಂದಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ವಿ. ಗಾಯತ್ರಿ

ಲೇಖಕಿ, ಅನುವಾದಕಿ, ಪತ್ರಕರ್ತೆ ಹಾಗೂ ಸಾಹಿತಿ ಮಾತ್ರವಲ್ಲದೆ ಸಮಾಜ ಕಾರ್ಯದಲ್ಲೂ ತೊಡಗಿರಿವ ವಿ. ಗಾಯತ್ರಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದವರು. ಅವರ ‘ತುಂಗಾ’ ಮಕ್ಕಳ ಸೃಜನಶೀಲ ಕಾದಂಬರಿ 7ನೇ ತರಗತಿಗೆ ಪಠ್ಯವಾಗಿದೆ. ಡಿ.ಡಿ.ಭರಮಗೌಡ್ರ ಬದುಕು- ಬೇಸಾಯ, ತೊತ್ತೋ ಚಾನ್- ವಿಶ್ವ ವಿಖ್ಯಾತ ಜಪಾನಿ ಕಾದಂಬರಿಯ ಕನ್ನಡ ಅನುವಾದ, ಸಾವಯವ ಪರಂಪರೆಯ ಕಥನ ಭಾಗ 1, 2,3 ಮತ್ತು 4 – ಸಹಜ/ಸಾವಯವ ರೈತರ ಕೃಷಿ ಮತ್ತು ಬದುಕುಗಳು (28 ಕಥನಗಳ ಸಂಗ್ರಹ)- ದಾಖಲಿಸಿ ನಿರೂಪಿಸಿದ ಕೃತಿಗಳು.   ‘ಪುಟ್ಟೀರಮ್ಮನ ಪುರಾಣ’, ‘ತೆರೆಮರೆಯ ಸತ್ಯಕಥೆ’, ‘ಸಾವಯವ ಸಂಗತಿ’ ಅವರ ಪ್ರಮುಖ ...

READ MORE

Related Books