ಅನುಭವದ ಅಡುಗೆ

Author : ಪ್ರವೀಣಾ ಕುಲಕರ್ಣಿ

Pages 180

₹ 200.00
Year of Publication: 2022
Published by: ಬರಹ ಪಬ್ಲಿಷಿಂಗ್‌ ಹೌಸ್‌, ಬೆಂಗಳೂರು.
Address: #119, 3ನೇ ಕ್ರಾಸ್‌, 8ನೇ ಮುಖ್ಯ, ಹಂಪಿನಗರ, ಬೆಂಗಳೂರು- 104
Phone: 08023409512

Synopsys

ಲೇಖಕಿ ಪ್ರವೀಣಾ ಕುಲಕರ್ಣಿ ಅವರ ಅಡುಗೆ ಸಂಬಂಧಪಟ್ಟ ಕೃತಿ ʻಅನುಭವದ ಅಡುಗೆ: ಆಹಾ! ಎಂಥಾ ರುಚಿʼ. ಬೆಂಗಳೂರು ದೂರದರ್ಶನದ ʻಆಹಾ! ಎಂಥಾ ರುಚಿʼ ಕಾರ್ಯಕ್ರಮದ ಸರಣಿಯಲ್ಲಿ ಬಿತ್ತರಗೊಂಡ, ಹಲವು ವಿಷಯ ತಜ್ಞರೊಡನೆ ನಡೆದ ಚರ್ಚೆ, ಹತ್ತಾರು ಬಗೆಯ ಅಡುಗೆ ತಯಾರಿ ವಿಧಾನಗಳನ್ನು ಎಲ್ಲಾ ಒಟ್ಟು ಸೇರಿಸಿ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಹೊಸ ವಿಧದ ಆಹಾರ ತಯಾರಿಸಲು ಬಯಸುವವರಿಗೆ ಈ ಪುಸ್ತಕ ಮಾರ್ಗದರ್ಶನವಾಗಲಿದೆ.

About the Author

ಪ್ರವೀಣಾ ಕುಲಕರ್ಣಿ

ಪ್ರವೀಣಾ  ಕುಲಕರ್ಣಿ ಅವರದ್ದು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿತ್ವ. ಕಲೆ, ಸಾಹಿತ್ಯ, ಸಂಗೀತ, ನಾಟಕ, ಕ್ರೀಡೆ, ಕಿರುತೆರೆ, ಚಿತ್ರರಂಗ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ‘ಪರ್ವಿಕ್ ಕನ್ಸಲ್ಟೆಂಟ್ಸ್’ ಸಂಸ್ಥೆಯನ್ನು ಹುಟ್ಟುಹಾಕಿ ಹಲವಾರು ಕ್ರಿಯಾತ್ಮಕ, ಸಂಘಟನಾತ್ಮಕ, ಕೌಶಲ್ಯವರ್ಧಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಬೆಂಗಳೂರು ಆಕಾಶವಾಣಿಗೂ ಧ್ವನಿಯಾಗಿದ್ದು, ಡಿಜಿಟಲ್ ರೇಡಿಯೋದ 'ಜವಾರಿ ಮಾತು' ಕಾರ್ಯಕ್ರಮದಿಂದ ರೇಡಿಯೋ ಜಾಕಿ ಎಂದೆನಿಸಿಕೊಂಡಿದ್ದಾರೆ. ದೂರದರ್ಶನದ ಹಲವಾರು ವಾಹಿನಿಗಳಲ್ಲಿ ನಿರೂಪಕರಾಗಿ, ಸಂದರ್ಶಕರಾಗಿ ಕಾಣಿಸಿಕೊಂಡಿರುವ ಪ್ರವೀಣಾ ಕುಲಕರ್ಣಿ ಚಂದನ ವಾಹಿನಿಯ ‘ಆಹಾ ಎಂಥಾ ರುಚಿ’ ಕಾರ್ಯಕ್ರಮದಿಂದ ಕನ್ನಡಿಗರ ಮನೆಮಾತಾಗಿದ್ದಾರೆ. ಯಶಸ್ವಿ ನಿರೂಪಕಿಯಾಗಿ, ಕಲಾವಿದೆಯಾಗಿ ಗುರುತಿಸಿಕೊಂಡಿರುವ ಇವರು ...

READ MORE

Related Books