ನಾಯಕತ್ವ

Author : ಶಿವಾನಂದ ಬೇಕಲ್

Pages 100

₹ 150.00




Year of Publication: 2019
Published by: ಮಂಜುಳ ಪಬ್ಲಿಷಿಂಗ್ ಹೌಸ್
Address: # 2ನೇ ಮಹಡಿ, 42, ಉಷಾ ಪ್ರೀತ್ ಸಂಕೀರ್ಣ, ಮಾಳವೀಯ ನಗರ, ಭೂಪಾಲ, ಮಧ್ಯಪ್ರದೇಶ-462003
Phone: 91755 424 034

Synopsys

ಖ್ಯಾತ ಆಂಗ್ಲ ಲೇಖಕ ಬ್ರಿಯಾನ್ ಟ್ರೇಸಿ ಅವರ ಯಶಸ್ಸಿನ ಗ್ರಂಥಾಲಯ ಮಾಲಿಕೆಯಡಿ ಪ್ರಕಟಿತ  ಅವರ ‘ಲೀಡರ್ ಶಿಪ್’ ಕೃತಿಯನ್ನು ಲೇಖಕ ಶಿವಾನಂದ ಬೇಕಲ್ ಅವರು ‘ನಾಯಕತ್ವ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಯಕತ್ವ ಎಂಬುದು ಹುಟ್ಟಿನಿಂದಲೇ ಬರುವ ಶಕ್ಯತೆಗಳಲ್ಲ. ಅದು ಗಳಿಸಿಕೊಳ್ಳಬಹುದಾದ ಗುಣ-ಸಾಮರ್ಥ್ಯ. ಕಾರ್ಯಕರ್ತರಿರದಿದ್ದರೆ ನಾಯಕತ್ವಕ್ಕೆ ಬೆಲೆ ಇಲ್ಲ ಎಂಬ ಎಚ್ಚರಿಕೆ ಇರುವವ ಮಾತ್ರ ನಾಯಕ ಆಗುತ್ತಾನೆ. ಕಾರ್ಯಕರ್ತರ ಸುಖ-ದುಃಖಗಳೇ ತಮ್ಮವು ಎಂದುಕೊಳ್ಳುತ್ತಾನೆ. ಯಾವುದೇ ಸಮಸ್ಯೆಗಳನ್ನು ಮೊದಲು ತಾನು ಅನುಭವಿಸಲು ಸಿದ್ಧನಾಗಿರುತ್ತಾನೆ. ಆದರೆ, ‘ಬಾಸ್’ ಹಾಗಲ್ಲ. ಇದೆಲ್ಲ ಗುಣಗಳಿಗೆ ತದ್ದವಿರುದ್ಧವಾದದ್ದು. ತಾನಿದ್ದರೆ ಮಾತ್ರ ಕಾರ್ಯಕರ್ತರು. ಇಲ್ಲದಿದ್ದರೆ ಈ ಕಾರ್ಯಕರ್ತರ ಬದುಕು ಹಾಳಾದಂತೆ ಎಂದು ಭ್ರಮಿಸುತ್ತಾನೆ. ಈ ಸಂಗತಿಗಳನ್ನು ಒಳಗೊಂಡ ಪ್ರೇರಣಾತ್ಮಕ ಬರಹಗಳ ಸಂಗ್ರಹ ಕೃತಿ ಇದು.

About the Author

ಶಿವಾನಂದ ಬೇಕಲ್
(21 February 1951)

ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್  ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ  ಸುಧಾ, ತರಂಗ, ಪ್ರಜಾವಾಣಿ, ...

READ MORE

Related Books