ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು

Author : ಡಿ.ಎನ್. ಶಂಕರ ಬಟ್

Pages 337

₹ 300.00




Year of Publication: 2021
Published by: ಡಿ.ಎನ್.ಶಂಕರ್ ಬಟ್
Address: ಡಾ.ಡಿ.ಎನ್.ಶಂಕರ್ ಬಟ್ ಅಂಚೆ ಪೆಟ್ಟಿಗೆ :- ಬಿ.ಮಂಚಾಲೆ ಸಾಗರ 577431

Synopsys

 ‘ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು’ ಕೃತಿಯು ಡಿ.,ಎನ್. ಶಂಕರ ಬಟ್, ಯೋ. ಬರತ್ ಕುಮಾರ್ ಸಂದೀಪ್ ಕಂಬಿ, ಮಲ್ಲೇಶ್ ಬೆಳವಾಡಿ, ವಿವೇಕ್ ಶಂಕರ್ ಅವರ ಸಂಪಾದಿತ ಕೃತಿಯಾಗಿದೆ. ಎರಡನೇ ಮುದ್ರಿತ ಕೃತಿಯಾಗಿದ್ದು ಈ ಕೃತಿಯ ಮೊದಲನೇ ಮುದ್ರಣವು 2017ರಲ್ಲಿ ಬಿಡುಗಡೆಗೊಂಡಿತು. ಕನ್ನಡ ಬರಹಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡದವು ಯಾವುವು ಮತ್ತು ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳು ಯಾವುವು ಎಂಬುದನ್ನು ತಿಳಿಯಬೇಕೆಂದಿರುವವರಿಗೆ ನೆರವಾಗಲು ಈ ಕೃತಿ ಸಹಕಾರಿಯಾಗಿದೆ. ಇದಲ್ಲದೆ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲುಪುವಂತೆ ಮಾಡಲು ಹಾಗೂ ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಬೇಕು ಎಂಬ ತುಡಿತ ಇರುವವರಿಗೆ ಕನ್ನಡ ಪದಗಳನ್ನೇ ಬಳಸಲು ಈ ಕೃತಿ ನೆರವಾಗಬಲ್ಲದು.ಕನ್ನಡ ಬರಹಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡದವು ಯಾವುವು ಮತ್ತು ಸಂಸ್ಕೃತದಿಂದ ಎರಡವಲಾಗಿ ಪಡೆದ ಪದಗಳು ಯಾವುವು ಎಂಬುದನ್ನು ತಿಳಿಯಬೇಕೆಂದಿರುವವರಿಗೆ ನೆರವಾಗಲು ಈ ಪದನೆರಕೆಯನ್ನು ಉಂಟುಮಾಡಲಾಗಿದೆ. ಇದಲ್ಲದೆ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲುಪುವಂತೆ ಮಾಡಲು ಅವುಗಲ್ಲಿ ಅದಷ್ಟು ಕಡಿಮೆ ಸಂಸ್ಕೃತ ಎರವಲುಗಳಿಗೆ ಸಾಟಿಯಾಗಿ ಎಂತಹ ಕನ್ನಡ ಪದಗಳನ್ನು ಬಳಸಲು ಬರುತ್ತದೆ ಎಂಬುದನ್ನು ತಿಳಿಸುವುದಕ್ಕಾಗಿಯೂ ಈ ಪದನೆರಕೆಯ್ನನು ಉಂಟುಮಾಡಲಾಗಿದೆ ಎಂದಿದ್ದಾರೆ.

 

About the Author

ಡಿ.ಎನ್. ಶಂಕರ ಬಟ್

ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ  ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು.  ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ...

READ MORE

Related Books