ಕುಮಾರವ್ಯಾಸ ಭಾರತ : ಭಾಷಾ ವೈಜ್ಞಾನಿಕ ವಿಶ್ಲೇಷಣೆ

Author : ಬಿ.ಆರ್. ಸತ್ಯನಾರಾಯಣ

Pages 280

₹ 200.00
Year of Publication: 2014
Published by: ಸೃಷ್ಠಿ ಪಬ್ಲಿಕೇಷನ್ಸ್
Address: 121, 13ನೆ ಮುಖ್ಯರಸ್ತೆ, ಎಂ.ಸಿ. ಲೇಓಟ್‌, ವಿಜಯನಗರ, ಬೆಂಗಳೂರು-40
Phone: 9845096668

Synopsys

ಡಾ. ಸಿ. ಓಂಕಾರಪ್ಪ ಅವರ ಕುಮಾರವ್ಯಾಸ ಭಾರತ ಭಾಷಾ ವೈಜ್ಞಾನಿಕ ವಿಶ್ಲೇಷಣೆ ಕೃತಿಯನ್ನು ಬಿ.ಆರ್‌. ಸತ್ಯನಾರಾಯಣ ಅವರು ಸಂಪಾದಿಸಿದ್ದಾರೆ. ಈ ಕೃತಿಯು ಕುಮಾರವ್ಯಾಸ ಭಾರತದ ಭಾಷೆಯ ಧ್ವನಿಮಾ, ಆಕೃತಿಮಾ, ವಾಕ್ಯರಚನಾ ವಿಧಾನಗಳನ್ನೂ ನಿಘಂಟನ್ನೂ ಪರಿಚಯಿಸುತ್ತದೆ. ಅಲ್ಲದೆ ಕನ್ನಡದ ಬೆಳವಣಿಗೆಯ ಆ ಹಂತದ ಸಾಹಿತ್ಯಕ ಭಾಷೆಯ ಉತ್ತಮ ಚಿತ್ರಣವನ್ನು ಒದಗಿಸುತ್ತದೆ. ವಿಶ್ಲೇಷಣೆ ತತ್ಕಾಲೀನವಾಗಿದೆಯೇ (Synchronic) ಹೊರತು ಐತಿಹಾಸಿಕವಾಗಿಲ್ಲ. ಆದರೂ ಅದು ಒದಗಿಸುವ ಸಾಮಗ್ರಿಯು ಭಾಷೆಯ ಐತಿಹಾಸಿಕ ಅಧ್ಯಯನಕ್ಕೆ ಉಪ ಯುಕ್ತವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಬಗೆಯ ವಿಶೇಷ ಅಧ್ಯಯನಗಳು ಭಾಷೆಯ ಐತಿಹಾಸಿಕ ಮತ್ತು ತೌಲನಿಕ ಅಧ್ಯಯನ ಗಳೆರಡಕ್ಕೂ ಗಟ್ಟಿ ನೆಲೆಯನ್ನೊದಗಿಸುವ ಕಾರಣದಿಂದ ಅವು ಪ್ರೋತ್ಸಾಹ ಯೋಗ್ಯವಾಗುತ್ತದೆ. - ಆಕೃತಿಮಾ ವಿಧಾನವು ತೃಪ್ತಿಕರವಾಗಿ ವರ್ಣಿಸಲಾಗಿದೆ. ಸಂಸ್ಕೃತ ವ್ಯಾಕರಣದ ಮೇಲೆ ವಿಶೇಷ ಅವಲಂಬನೆಯನ್ನು ತೋರಿಸುವ ಸಾಂಪ್ರ ದಾಯಿಕ ವರ್ಗೀಕರಣದ ಅಂಶಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾದ ಮಟ್ಟಿಗೂ ಹೆಣಗಿದ್ದಾರೆ. ಕಾಂಡಸಿದ್ದಿಗೆ ಅಗತ್ಯಕ್ಕಿಂತ ಹೆಚ್ಚಿನ ಭಾಗವು ಒದಗಿಸಲ್ಪಟ್ಟಿದೆ. ಈ ನಿಟ್ಟಿನಲ್ಲಿ ನಾಮಪದ ಮತ್ತು ಕ್ರಿಯಾಪದಗಳ ನಿಷ್ಪತ್ತಿಯು ಒಟ್ಟಿಗೇ ಪರಿಗಣಿಸಲ್ಪಟ್ಟಿದೆ. ಅವುಗಳನ್ನು ಬೇರ್ಪಡಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಭಾಷೆಯ ವಾಕ್ಯರಚನಾ ವಿಧಾನವು ಸಾಕಷ್ಟು ಕೂಲಂಕಷವಾಗಿ ಪರಿಶೀಲಿಸಲ್ಪಟ್ಟಿದೆ. ಇಲ್ಲಿ ಕೊಟ್ಟಿರುವ ಉದಾಹರಣ ಸಂಪತ್ತಿಯು, ಇದನ್ನೊಂದು ಉಪಯುಕ್ತ ಮಾಹಿತಿ ಗ್ರಂಥವನ್ನಾಗಿ ಮಾಡುತ್ತದೆ. ಈ ಕೃತಿಯು ದ್ರಾವಿಡ ಭಾಷಾ ವಿಜ್ಞಾನಕ್ಕೆ ಉಪಯುಕ್ತವೂ ಸ್ಪೋಪಜ್ಞವೂ ಆದ ಕೊಡುಗೆಯಾಗಿದೆ.

 

 

About the Author

ಬಿ.ಆರ್. ಸತ್ಯನಾರಾಯಣ

ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್‍. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...

READ MORE

Related Books