ಉಭಯಕುಶಲೋಪರಿ

Author : ಎನ್.ವಿ. ಕಾಮತ್

Pages 51

₹ 50.00




Year of Publication: 2022
Published by: ಸುವರ್ಣಾ ಪ್ರಕಾಶನ
Address: ವಾದಿರಾಜ ನಗರ, ಉಡುಪಿ 576102

Synopsys

‘ಉಭಯಕುಶಲೋಪರಿ’ ಕೃತಿಯು ಎನ್.ವಿ. ಕಾಮತ್ ಅವರ ಕೊಂಕಣಿ ಮೂಲಕ ಸಂಸ್ಕೃತ ವಿಚಾರಗಳ ಕುರಿತ ಪದಗಳ ಸಂಕಲನವಾಗಿದೆ. ಪ್ರತಿಯೊಂದು ಭಾಷೆಯಲ್ಲಿ ಅನೇಕ ಪ್ರಭೇದಗಳಿವೆ. ಎಲ್ಲಾ ಪ್ರಭೇದಗಳ ಪದಗಳನ್ನು ಈ ಪುಸ್ತಕದಲ್ಲಿ ತಿಳಿಸಿಲ್ಲ. ನಮ್ಮ ಪರಿಸರದಲ್ಲಿ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಪದಗಳನ್ನು ಇಲ್ಲಿ ತಿಳಿಸಲಾಗಿದೆ. ಪದಗಳ ಉಚ್ಛಾರ, ಉಪಯೋಗಗಳನ್ನು ಸಂಭಾಷಣೆಯಿಂದಲೇ ತಿಳಿಯಬೇಕು. ಸಂಭಾಷಣೆಯನ್ನು ಕಲಿಯಲು ಆಸಕ್ತಿ ಇರುವವರಿಗೆ ಈ ಪುಸ್ತಕ ಒಂದು ಮಾರ್ಗದರ್ಶಿಯಾಗಿದೆ. ನಮ್ಮ ಆಸಕ್ತಿಗಳಲ್ಲಿ ಭಾಷಾಕಲಿಕೆಯೂ ಒಂದು ಬೇರೆ ಬೇರೆ ಭಾಷೆಗಳನ್ನಾಡುವ ವ್ಯಕ್ತಿಗಳೊಡನೆ ನಮ್ಮ ವ್ಯವಹಾರವಿರುವುದರಿಂದ ಅವರ ಭಾಷೆಯನ್ನು ನಾವು ಕಲಿತರೆ ಆದರಿಂದ ನಮಗೇ ಉಪಕಾರವಾಗುತ್ತದೆ. ನಾವಿರುವ ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಕನ್ನಡವು ರಾಜ್ಯಭಾಷೆ. ಕೆಲವರ ಮಾತೃಭಾಷೆ ಕೂಡ. ಅಲ್ಲದೆ ತುಳು, ಕೊಂಕಣಿ ಮಾತನಾಡುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ವಿಶ್ಲೇಷಿಸlಲಾದ ಮಾಹಿತಿ ಇಲ್ಲಿದೆ. 

About the Author

ಎನ್.ವಿ. ಕಾಮತ್

ಎನ್.ವಿ. ಕಾಮತ್ ಅವರು ಮೂಲತಃ ಉಡುಪಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕೃತಿಗಳು : ಉಭಯಕುಶಲೋಪರಿ(ಕೊಂಕಣಿ ಮೂಲಕ ಸಂಸ್ಕೃತ) ...

READ MORE

Related Books