ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು

Author : ವಿನಯ ಲಾಲ್

Pages 280

₹ 180.00




Year of Publication: 2010
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಡಿಕ್ಷನರಿಗಳಲ್ಲಿ ಅನೇಕ ಪರಿಯ ಡಿಕ್ಷನರಿಗಳಿರುವುದುಂಟು. ಬಹುಪಾಲು ಡಿಕ್ಷನರಿಗಳು ಪದ-ಅರ್ಥಗಳ ಕೋಶಗಳಾಗಿದ್ದರೆ ಇನ್ನು ಕೆಲವು ನುಡಿಗಟ್ಟು-ಉಕ್ತಿ-ಉಲ್ಲೇಖಗಳ ಸಂಗ್ರಹವೋ ಪ್ರಸಂಗ-ಸನ್ನಿವೇಶಗಳ ಸಂಗ್ರಹವೋ ಆಗಿರುವುದುಂಟು. ಕೆಲವು ಕೋಶಗಳು ಸರ್ವಜನ ಸಾಮಾನ್ಯಭಾಷೆಗೆ ಸಂಬಂಧಿಸಿರುವಂಥವಾದರೆ, ಇನ್ನು ಕೆಲವು ತಜ್ಞಜನಪರಿಭಾಷೆಗೆ ಸೀಮಿತವಾಗಿರುತ್ತವೆ.

ಕೆಲವು ಅರ್ಥಕೋಶಗಳು ಶಾಸ್ತ್ರಗಂಭೀರ ಭಾಷ್ಯದ ಶೈಲಿಯಲ್ಲಿ ಮಾತನಾಡಿದರೆ, ಇನ್ನು ಕೆಲವು (ಅನರ್ಥ) ಕೋಶಗಳು ವೈನೋದಿಕ ಲಾಸ್ಯದ ಧಾಟಿಯಲ್ಲಿ ಮಾತನಾಡುತ್ತದೆ. ಇವುಗಳ ನಡುವೆ ಕೆಲವು ಅಪರೂಪದ ಕೋಶಗಳು ಪದಗಳ ಚರಿತ್ರೆಯ ಆಖ್ಯಾನಗಲನ್ನು ಹೇಳುತ್ತ ಹೇಳುತ್ತ ಅವುಗಳ ಚರಿತವನ್ನು ವ್ಯಾಖ್ಯಾನಿಸುವುದೂ ಉಂಟು. ಇಂತಹ ವಿಶಿಷ್ಟ ರೂಪದ ಒಂದು ನಿಘಂಟು- ಈ ಪುಸ್ತಕ.

ಕನ್ನಡ ಅಕಾರಾದಿಯಲ್ಲಿ ಜೋಡಿಸಲ್ಪಟ್ಟಿರುವ ಈ ಪರಿಭಾಷಾ ಕೋಶದಲ್ಲಿ ‘ಅರ್ಥಶಾಸ್ತ್ರ’ದಿಂದ ‘ಬಾಲಿವುಡ್’ನವರೆಗೆ, ‘ಇಸ್ಲಾಮ್’ನಿಂದ ‘ಕೋಕಾಕೋಲಾ’ದವರೆಗೆ, ‘ಮಾರ್ಕ್ಸ್‌ವಾದ’ದಿಂದ ‘ಯಾಹೂ’ದವರೆಗೆ ನಾನಾ ವಿಚಾರ ಕುರಿತು ಕಿರುಲೇಖನಗಳಿವೆ. ಹಾಗಂತ, ಇದು ಪರಿಭಾಷೆಗಳ ಪರಿಚಯವಿಲ್ಲದವರಿಗೆ ತಾಂತ್ರಿಕ ಪದಪ್ರಯೋಗಗಳ ಹಿನ್ನೆಲೆಯನ್ನು ಅರ್ಥಮಾಡಿಸುವ ಪ್ರಯತ್ನ ಅಲ್ಲ; ಅದಕ್ಕಿಂತ ಘನವಾದೊಂದು ಉದ್ದಿಶ್ಯ ಈ ಕೋಶದ ಹಿಂದಿದೆ. ಒಂದು ಕಡೆಯಿಂದ, ಈ ಕೋಶವು ನಮ್ಮ ಕಾಲ-ದೇಶಗಳ ಕೆಲವು ಮುಖ್ಯ ಪದ-ಪದಾರ್ಥ-ಪರಿಕಲ್ಪನೆ-ಪ್ರಕ್ರಿಯೆಗಳ ಕಥೆಯನ್ನು ಹೇಳುತ್ತಲೇ ಜತೆಜತೆಗೇ, ಅವುಗಳ ಹಿಂದಿನ ಸೂಕ್ಷ್ಮ ಸಾಂಸ್ಕೃತಿಕ ರಾಜಕಾರಣವನ್ನು ಅನಾವರಣಗೊಳಿಸುತ್ತದೆ. 

Related Books