ವೇದಾಂತ ತತ್ವಸಾರ

Author : ನಾರಾಯಣ ಯಾಜಿ

Pages 56

₹ 30.00




Year of Publication: 2013
Published by: ಹವ್ಯಕ ಅಧ್ಯಯನ ಕೇಂದ್ರ
Address: ಬೆಂಗಳೂರು- 560001

Synopsys

ಕಿಬ್ಬಚ್ಚಲ ಮಂಜಮ್ಮ ವಿರಚಿತ ಯಕ್ಷಗಾನ ಪ್ರಸಂಗಗಳು ಹಾಗೂ ಕೀರ್ತನೆಗಳ ಕೃತಿ ʻವೇದಾಂತ ತತ್ವಸಾರʼ. 1886ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡು 1889ರಲ್ಲಿ ಮರು ಮುದ್ರಣ ಕಂಡ ಅಪೂರ್ವ ಕೃತಿ. ನಾರಾಯಣ ಯಾಜಿ ಸಾಲೆಬೈಲು ಅವರು ಈ ಪುಸ್ತಕವನ್ನು ಸಂಪಾದನೆ ಹಾಗೂ ಪರಿಚಯಿಸಿದ್ದಾರೆ. ಕಿಬ್ಬಚ್ಚಲ ಮಂಜಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಂಸಗಾರು ಸಮೀಪದ ಕಿಬ್ಬಚ್ಚಲಿನವರು. ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಹವ್ಯಕ ಬ್ರಾಹ್ಮಣತಿ, ವಿವಾಹಿತೆ ಹಾಗೂ ತಪಸ್ವಿನಿ ಎಂದು ತಿಳಿದುಬಂದಿದೆ. ಜೊತೆಗೆ ಇವರು ಯಕ್ಷಗಾನದ ವಿಶಿಷ್ಟ ಪದ್ಯಬಂಧಗಳಲ್ಲಿ ಆಧ್ಯಾತ್ಮಕ್ಕೆ ಸಂಬಂಧಿಸಿದ ಪದ್ಯಗಳನ್ನು ಹೇಳುತ್ತಿದ್ದರು. ಹೀಗೆ ಯಕ್ಷಗಾನದ ಸತ್ವವನ್ನು ಬೆಳೆಸಿ ಅನಾಮಧೇಯರಾಗಿ ಉಳಿದ ಅನೇಕ ಮಹಿಳೆಯರಿಗೆ ಇವರು ಪ್ರತಿನಿಧಿಯಾಗಿ ಕಾಣುತ್ತಾರೆ. ಹಾಗಾಗಿ ನಾರಾಯಣ ಯಾಜಿ ಅವರು ಪ್ರಸ್ತುತ ಕೃತಿಯಲ್ಲಿ ಮಂಜಮ್ಮನ ಕುರಿತು ಹಾಗೂ ವೇದಾಂತ ತತ್ವಸಾರ ಕೃತಿಯಲ್ಲಿರುವ ಯಕ್ಷಗಾನ ಪ್ರಸಂಗಗಳಾದ ಜೀವ ಪರಮರ ಕಲ್ಯಾಣ ಮತ್ತು ಮನೋಬುದ್ಧಿ ಸಂವಾದ ಬಗೆಗಿನ ಮಾಹಿತಿಗಳನ್ನು ನೀಡಿದ್ದಾರೆ.

About the Author

ನಾರಾಯಣ ಯಾಜಿ

ಕಲಾವಿದ, ಕತೆಗಾರ ನಾರಾಯಣ ಯಾಜಿ ಅವರು ಉತ್ತರ ಕನ್ನಡದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವವರು. ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕರಾಗಿದ್ದು, ‘ನೈದಿಲೆಯ ಒಡಲು’ ಅವರ ಮೊದಲ ಕಥಾ ಸಂಕಲನ. ಉತ್ಥಾನ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಅವರ ‘ವ್ಯಸ್ತ’ ಕಥೆಗೆ ಬಹುಮಾನ ಲಭಿಸಿದೆ. ...

READ MORE

Related Books