ಯಕ್ಷಗಾನ ಜ್ವಾಲಾ ಪ್ರತಾಪ

Author : ಹೊಸ್ತೋಟ ಮಂಜುನಾಥ ಭಾಗವತ

Pages 54

₹ 50.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9480686862

Synopsys

ಯಕ್ಷಗಾನ ಜ್ವಾಲಾ ಪ್ರತಾಪ ನಾಟಕವು ಮಹಾಭಾರತದ ಸುತ್ತ ಹೆಣೆದಿರುವಂತಹದ್ದಾಗಿದೆ. ಧರ್ಮರಾಯನ ಅಶ್ವಮೇಧದ ಕುದುರೆಯನ್ನು ಬಭ್ರುವಾಹನ ಕಟ್ಟಿ ಹಾಕುತ್ತಾನೆ. ಇದರಿಂದಾಗಿ ಬಭ್ರುವಾಹನ ಹಾಗೂ ಅರ್ಜುನನಿಗೂ ಯುದ್ದವಾಗಿ ಕೊನೆಗೆ ಅರ್ಜುನನ ಶಿರಚ್ಚೇದವಾಗುತ್ತದೆ.  ಇದು ನಮಗೆಲ್ಲ ಗೊತ್ತಿರುವ ಕಥೆ. ಈ ಕಥೆಯನ್ನೇ ಇಟ್ಟುಕೊಂಡು ಯಕ್ಷಗಾನ ಪ್ರಸಂಗವನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಈ ಯಕ್ಷಗಾನ ಪ್ರಸಂಗಗಳಲ್ಲಿ ಅಂಬೆಯನ್ನು ಬಿಟ್ಟರೆ ಜ್ವಾಲಾಳ ಪಾತ್ರವೇ ಉಜ್ವಲವಾದದ್ದೆಂದು ನಂಬಲಾಗಿದೆ. ಈ ನಾಟಕದಲ್ಲಿ ಜಾಲೆಯ ಪಾತ್ರ ಪೌರಾಣಿಕವಾಗಿದ್ದರೂ, ಆಧುನಿಕ ಕಾಲದ ಹೆಣ್ಣಿನ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕೆ ಒತ್ತು ನೀಡಿದಂತೆ ಚಿತ್ರಿಸಲಾಗಿದೆ. ವಿವೇಚನೆ ಕಳೆದುಕೊಂಡು ಹಠಕ್ಕೆ ಬಿದ್ದು ವರ್ತಿಸಿದರೆ, ಏನೆಲ್ಲಾ ಅನಾಹುತಗಳು ಆಗುತ್ತವೆ ಎಂಬುದಕ್ಕೆ ಈ ನಾಟಕದ ಉದ್ದಕ್ಕೂ ಸಾಕ್ಷ್ಯಗಳು ಸಿಗುತ್ತವೆ. ಹೊಸ್ತೋಟ ಮಂಜುನಾಥರು ಬರೆದಿರುವ ಸಂಭಾಷಣೆಗಳು ವೈಚಾರಿಕತೆಯಿಂದಲೂ, ಕಾವ್ಯಾತಕತೆಯಿಂದ ಕೂಡಿವೆ. ನಾಟಕದುದ್ದಕ್ಕೂ ಬರುವ ಕಂದಪದ್ಯಗಳು ಇಡೀ ಪ್ರಸಂಗದ ಸೊಗಸನ್ನು ಹೆಚ್ಚಿಸಿವೆ.

About the Author

ಹೊಸ್ತೋಟ ಮಂಜುನಾಥ ಭಾಗವತ
(15 February 1940 - 07 January 2020)

ಹೊಸ್ತೋಟ ಮಂಜುನಾಥ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹನ್ಮಂತಿ ಹೊಸ್ತೋಟದವರು.  ಖ್ಯಾತ ಯಕ್ಷಗಾನ ಭಾಗವತರಾದ ಹೊಸ್ತೋಟ ಮಂಜುನಾಥ ಪ್ರಸಂಗಕರ್ತರು ಹಾಗೂ ಯಕ್ಷಗಾನದ ಸ್ವರೂಪ, ವೈವಿಧ್ಯತೆ ಗುಣಮಟ್ಟಗಳ ಬಗ್ಗೆ ನಿಖರವಾಗಿ ತಿಳಿದುಕೊಂಡಿರುವ ಶ್ರೇಷ್ಠ ಕಲಾವಿದರು. ತಂದೆ ಹೊಸ್ತೋಟದ ಭಾಗವತ, ತಾಯಿ- ಮಹಾದೇವಿ. ಶಿರಸಿಯಲ್ಲಿ ಆರನೇ ತರಗತಿಯವರೆಗೆ ಓದಿದ ಅವರು ಬಾಲ್ಯದಲ್ಲಿಯೇ ಹನುಮಂತಿಯ ಟೆಂಟ್ ಯಕ್ಷಗಾನ ಮೇಳದಲ್ಲಿ ಶಿವರಾಮ ಹೆಗಡೆ ಮತ್ತು ಮಹಾಬಲ ಹೆಗಡೆಯವರಲ್ಲಿ ಯಕ್ಷಗಾನ ಕಲೆಯನ್ನು ಕಲಿತರು. ಭಾಗವತಿಕೆಯನ್ನೇ ಉಸಿರಾಗಿಸಿಕೊಂಡಿದ್ದು ಕೆರೆಮನೆ ಶಿವರಾಮ ಹೆಗ್ಡೆಯವರ ಪ್ರಭಾವದಿಂದ. ಆರಂಭದಲ್ಲಿ ಕೊಡಗಿಪಾಲ ಶಿವರಾಮ ಹೆಗ್ಡೆ ಇವರನ್ನು ರಂಗಕ್ಕೆ ತಂದಾಗ ಉತ್ಸಾಹದಿಂದ ...

READ MORE

Related Books