1.60ಲಕ್ಷ ಶಬ್ದಾರ್ಥಗಳ ನಿಘಂಟು: ವಿ. ಕೃಷ್ಣರ ಶ್ರದ್ಧೆ ಪ್ರಶಂಸೆ

Date: 21-11-2020

Location: ಬೆಂಗಳೂರು


ಬುಕ್‌ ಬ್ರಹ್ಮ ಹಾಗೂ ವಸಂತ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ವಿ. ಕೃಷ್ಣ ಅವರ ‘ಕನ್ನಡ - ಇಂಗ್ಲಿಷ್ ಸಂಕ್ಷಿಪ್ತ ನಿಘಂಟು’ ಪುಸ್ತಕವನ್ನು ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ಬಿಡುಗಡೆ ಮಾಡಲಾಯಿತು.

ನಿಘಂಟು ಬಿಡುಗಡೆ ನಂತರ ಮಾತನಾಡಿದ ಶಿಕ್ಷಣ ತಜ್ಞ ಡಾ. ಕೆ. ಇ. ರಾಧಾಕೃಷ್ಣ “ಕೊರೊನಾದ ಲಾಕ್‌ಡೌನ್‌ ಸಂದರ್ಭದಲ್ಲಿ ಕನ್ನಡ ಪುಸ್ತಕಲೋಕ ಹೆಚ್ಚು ಕ್ರಿಯಾಶೀಲವಾಗಿತ್ತು. ಇದಕ್ಕೆ ಉತ್ತಮ ಉದಾಹರಣೆ ‘ಕನ್ನಡ - ಇಂಗ್ಲಿಷ್ ಸಂಕ್ಷಿಪ್ತ ನಿಘಂಟು’ ರಚನೆ. ಒಂದು ವಿಶ್ವವಿದ್ಯಾಲಯ ಮಾಡಬೇಕಿದ್ದ ಕೆಲಸವನ್ನು ಅತ್ಯಂತ ಶ್ರದ್ದೆಯಿಂದ ವಿ. ಕೃಷ್ಣ ಅವರು ಮಾಡಿದ್ದಾರೆ. ಅವರು ಶುದ್ಧಾಂಗ ತಪಸ್ವಿ. ತಮ್ಮನ್ನು ಏಕೀಮುಖಿ ಲೋಕಕ್ಕೆ ಅರ್ಪಿಸಿಕೊಂಡು 1.60 ಲಕ್ಷ ಪದಗಳ ನಿಘಂಟುವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕರ್ತೃ, ಸಂಪಾಕದರಾಗಿ ಕನ್ನಡ-ಇಂಗ್ಲಿಷ್ ಪದಗಳಿಗೆ ಸ್ಪಷ್ಟವಾದ ಅರ್ಥ ಜೀವಂತಿಕೆ ನೀಡಿದ್ದಾರೆ" ಎಂದು ನಿಘಂಟುವಿನ ಮಹತ್ವ ಹಾಗೂ ನಿಘಂಟು ತಜ್ಞ ವಿ.ಕೃಷ್ಣ ಅವರ ಕಾರ್ಯವನ್ನು ಶ್ಲಾಘಿಸಿದರು.
ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ, ನಿಘಂಟು ತಜ್ಞ ವಿ. ಕೃಷ್ಣ, ವಸಂತ ಪ್ರಕಾಶನದ ಮುರಳಿ ಶ್ರೀನಿವಾಸನ್, ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.

MORE NEWS

ಕಸಾಪ ಮತ್ತು ಸಪ್ನ ಬುಕ್‌ ಹೌಸ್‌ ಪು...

28-11-2020 ಬೆಂಗಳೂರು

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಪ್ನ ಬುಕ್‌ ಹೌಸ್‌ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಪುಸ್ತಕಗಳಿಗೆ ...

‘ಸುದ್ದಿ ಬರಹ ಮತ್ತು ವರದಿಗಾರಿಕೆ’ ...

26-11-2020 ಮೈಸೂರು

ಮೈಸೂರಿನ ಪತ್ರಕರ್ತರ ಭವನದಲ್ಲಿ ಗುರುವಾರ ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ್ ಅವರ ‘ಸುದ್ದಿ ಬರಹ ಮತ್ತು ವರದಿಗಾ...

ಅಮ್ಮನ ನೆನಪಿನಲ್ಲಿ ಪ್ರಶಸ್ತಿ ಪುರಸ...

26-11-2020 ಸೇಡಂ (ಕಲಬುರಗಿ ಜಿಲ್ಲೆ)

ಹೆತ್ತ ಅಮ್ಮನ ನೆನಪಿಗಾಗಿ ಅವರ ಹೆಸರಿನಲ್ಲಿ ಬೆಚ್ಚಗಿನ ಕೌದಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಮಾತೊಶ್ರೀ ಮಹಾದೇವಮ್ಮ ನಾಗ...

Comments