2022ನೇ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ ಪ್ರಕಟ


ಕನ್ನಡನಾಡು, ನುಡಿ, ಸಂಸ್ಕೃತಿಗಳನ್ನು ಕುರಿತ ಪುಸ್ತಕಕ್ಕೆ ಕನ್ನಡ ಗೆಳೆಯರ ಬಳಗವು ಕೊಡ ಮಾಡುವ 2020ನೆಯ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ಕ್ಕೆ ಸಂಗೀತ ವಿದುಷಿ ಡಾ. ಶ್ಯಾಮಲಾ ಪ್ರಕಾಶ್ ಅವರ ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಂಗೀತದ ಸಾಹಚರ್ಯ’ ಗ್ರಂಥ ಆಯ್ಕೆಯಾಗಿದೆ. 4000 ರೂ ನಗದು, ಫಲ ತಾಂಬೂಲದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಪತ್ರಕರ್ತ ಶಶಿಧರ ಹಾಲಡಿಯವರ ‘ಚಿತ್ತ ಹರಿದತ್ತ’ ಅಂಕಣ ಬರಹ ಮತ್ತು ಜ್ಞಾನಶ್ರೀ(ಲಕ್ಷ್ಮಿಕಾಂತಮ್ಮ) ಅವರ ‘ಭವ್ಯ ಭಾರತದ ವೀರ ರಾಣಿಯರು’ ಸಂಕಲನಕ್ಕೆ ಸಮಾಧಾನಕರ ಬಹುಮಾನ ದೊರೆತಿದೆ. ಸಮಾಧಾನಕರ ಬಹುಮಾನವು1500ರೂ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಸುಳ್ಯ ಶಾಲೆಯ ಮಕ್ಕಳ ಬರಹ ಸಂಕಲನ ‘ಅಪ್ರಕಾಶಿತ ಸ್ವಾತಂತ್ರ‍್ಯಯ ಹೋರಾಟಗಾರರ ಸ್ಮರಣೆ’ ಕೃತಿಗೆ ಪ್ರೋತ್ಸಾಹಕ 1000ರೂ ಬಹುಮಾನ ನೀಡಲಾಗುವುದು.

07-12-2022ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿ ಪ್ರದಾನ, ಕನ್ನಡ ಮಾಧ್ಯಮದ ಮಕ್ಕಳಿಗೆ ಪುರಸ್ಕಾರ ನೀಡುವ ಸಮಾರಂಭವಿದ್ದು,‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವನ್ನೂ ಅದೇ ಸಮಾರಂಭದಲ್ಲಿ ಕೊಡಮಾಡಲಾಗುವುದು. ರಾಜ್ಯಸಭಾ ಸದಸ್ಯ, ಸಾಹಿತಿ ಡಾ. ಎಲ್. ಹನುಮಂತಯ್ಯ, ನಾಡೋಜ ಗೊ.ರು. ಚನ್ನಬಸಪ್ಪ ಅವರುಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವೂಡೇ ಪಿ. ಕೃಷ್ಣ ಅವರು ಅದ್ಯಕ್ಷತೆ ವಹಿಸಲಿದ್ದು, ಹಿರಿಯ ಸಂಶೋಧಕ ಡಾ. ಆರ್. ಶೇಷಶಾಸ್ತ್ರಿ ಮುಂತಾದವರು ಅತಿಥಿಗಳಾಗಿರುತ್ತಾರೆ.

MORE FEATURES

ಹೊಚ್ಚ ಹೊಸ ನಿರೂಪಣಾ ಶೈಲಿಯ ಕಾದಂಬರ...

06-12-2022 ಬೆಂಗಳೂರು

ಸಣ್ಣಕತೆಯ ತೀವ್ರತೆ ಮತ್ತು ಕಾದಂಬರಿಯ ವಿಸ್ತಾರ -ಎರಡನ್ನೂ ಈ ಕಾದಂಬರಿ ಹೊಂದಿದೆ. ಅದೇ ಕಾರಣಕ್ಕೆ ಇದಕ್ಕೆ ಅಪರಿಮಿತ ವೇಗ ...

ಅಧೋಲೋಕದ ನಂಬಿಕೆಯ ನಾವೆಗೆ ಇಂಬು ನೀ...

06-12-2022 ಬೆಂಗಳೂರು

''ಅಂಬೇಡ್ಕರ್ ಅವರದು ಬಹುಮುಖೀ ವ್ಯಕ್ತಿತ್ವ. ನ್ಯಾಯವಾದಿ, ಪ್ರಾಧ್ಯಾಪಕ, ಪತ್ರಕರ್ತ, ಸಮಾಜ ಸುಧಾರಕ, ಚಿಂತಕ, ತ...

ಕುಳಿತಲ್ಲೇ ಒಂದು ಸಾಹಸಯಾತ್ರೆ ಮಾಡಿ...

06-12-2022 ಬೆಂಗಳೂರು

ನಮಗೆ ಬದುಕಲು ಸಕಲ ಸೌಲಭ್ಯಗಳಿದ್ದರೂ ನಮ್ಮ ವ್ಯವಸ್ಥೆಯನ್ನು ಸದಾ ಬೈಯುವ ನಾವು ಸಮುದ್ರ ಮಟ್ಟದಿಂದ 10,000 ಅಡಿ ಮೇಲಿನ ವಂ...