ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’


"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ರಾಮಾಯಣ ಇನ್ನೂ ಅನೇಕ ಪೌರಾಣಿಕ ಕಥೆಗಳು ಜನಮಾನಸದಲ್ಲಿ ಹಾಸುಹೊಕ್ಕಾಗಿರುತ್ತವೆ ಆದರೂ ಲೇಖಕರ ಕಥಾ ಆಯಾಮ, ದೃಷ್ಟಿಕೋನ ಕುತೂಹಲ ಮೂಡಿಸುತ್ತವೆ," ಎನ್ನುತ್ತಾರೆ ಸುಮಾ ಗುರುರಾಜ್. ಅವರು ಸಂತೋಷಕುಮಾರ ಮೆಹೆಂದಳೆಯವರ ‘ಮಹಾಪತನ’ ಕೃತಿ ಕುರಿತು ಬರೆದ ಅನಿಸಿಕೆ.

ಸುಯೋಧನ ಎಂಬ ಹೆಸರೇ ಸಕಾರಾತ್ಮಕ ಭಾವ ಮೂಡಿಸುತ್ತವೆ.

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ರಾಮಾಯಣ ಇನ್ನೂ ಅನೇಕ ಪೌರಾಣಿಕ ಕಥೆಗಳು ಜನಮಾನಸದಲ್ಲಿ ಹಾಸುಹೊಕ್ಕಾಗಿರುತ್ತವೆ ಆದರೂ ಲೇಖಕರ ಕಥಾ ಆಯಾಮ, ದೃಷ್ಟಿಕೋನ ಕುತೂಹಲ ಮೂಡಿಸುತ್ತವೆ.

ಸುಯೋಧನ ಎಂಬ ಹೆಸರೇ ಸಕಾರಾತ್ಮಕ ಭಾವ ಮೂಡಿಸುತ್ತವೆ. ದುರ್ಯೋಧನ ಆತ್ಮಕಥನ ಎಂದಿದ್ದರೆ ಸರಿಹೊಂದುತ್ತಿರಲಿಲ್ಲವೇನೋ.. ದುರಾಚಾರ, ದುರ್ನಡತೆ, ದುರಹಂಕಾರ ಇವೇ ಸುಳಿಯುತ್ತಿತ್ತು.

ಮಹಾಭಾರತದ ಖಳನಾಯಕ ಎಂದು ಗುರುತಿಸಲ್ಪಡುವ ಪಾತ್ರದ ಆಂತರ್ಯವನ್ನು ಸಕಾರತ್ಮಕವಾಗಿ ಲೇಖಕರು ಬಿಡಿಸಿ ಹರವಿದ್ದಾರೆ. ಮಹಾಪತನ ಓದುತ್ತಾ ಹೋದಂತೆ ಸುಯೋಧನನ ಬಗ್ಗೆ ಅಭಿಮಾನ ಪಸರಿಸುತ್ತದೆ. ತನ್ನ ಸಿದ್ಧಾಂತಗಳಿಗೆ, ತನ್ನ ನಂಬಿಕೆಗಳಿಗೆ, ಛಲಕ್ಕೆ ರಾಜಿಯಾಗದೆ ಅಪರೂಪದ ಸ್ವಾಭಿಮಾನ ಬಿಟ್ಟು ಕೊಡದೆ ಬದುಕಿದ ಮಹಾಪುರುಷ ಎನಿಸಿಕೊಳ್ಳುತ್ತಾನೆ. ಅತೀ ಬಲಶಾಲಿ, ಶೂರ ಧೀರ ಆದರು ದುರಂತ ನಾಯಕನ ಅಂತ್ಯ ಸಂಕಟವಾಗುತ್ತದೆ. ಏಕ ಪತ್ನಿ ವೃತಸ್ಥ, ಶಿಸ್ತಿನ ಅರಸನನ್ನು ಶಕುನಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದ್ದು ಶೋಚನೀಯ. ದಕ್ಷ ಆಡಳಿತಗಾರ, ಪ್ರಜಾಪ್ರತಿನಿಧಿ, ಸ್ನೇಹ ಜೀವಿ.

ಜಗತ್ತಿನ ಅತೀ ಬಲಶಾಲಿಗಳೆನ್ನೆಲ್ಲಾ ಮೋಸದಿಂದ, ಕುಟಿಲತೆಯ ವಂಚನೆಯಿಂದಲೇ ಗೆದ್ದರಲ್ಲ ಪಾಂಡವರು."ಮಮಃ ಪ್ರಾಣಾಹಿ ಪಾಂಡವ" ಎನ್ನುವ ಮಾತಿನ ಪರದೆಯ ಹಿಂದೆ ಕೃಷ್ಣಾ ಎಲ್ಲಾ ನಡೆಸಿದನೇ.. ಕೃಷ್ಣನ ಕುಟಿಲತೆಗೆ, ಪಾಂಡವರಿಗೆ ರಾಜ್ಯ ಕೊಡಿಸುವ ರಾಜತಾಂತ್ರಿಕ ಸುಳಿಗೆ ಪ್ರಬಲ ಬಲಶಾಲಿ ಕೌರವೇಶ ನಲುಗಿದನೆ..

ಕರ್ಣ ಸುಯೋಧನನ ಸ್ನೇಹ ಪ್ರೀತಿ ಜಗತ್ತೆ ಮೆಚ್ಚಿ ಕೊಂಡಾಡಿದೆ. ಅಪರೂಪದ ಸ್ನೇಹ ಬಂಧನ, ಮಿತ್ರತ್ವಕ್ಕೆ ಜೀವ, ಜೀವನ ಮೀಸಲಿಟ್ಟ ಗೆಳೆಯ ಕರ್ಣನ ವ್ಯಕ್ತಿತ್ವ ನಿರೂಪಣೆ ಆಪ್ತವಾಗಿದೆ. "ಯಾರೂ ಯಾವತ್ತೂ ನನಗಾಗಿ ಕಾಯದಿದ್ದರೂ, ಕೊನೆಯ ಕ್ಷಣಗಳವರೆಗೂ ನನಗಾಗಿ ಕಾಯುತ್ತಿದ್ದ ಕರ್ಣ ಇನ್ನೂ ನನಗಾಗಿ ಕಾಯುತ್ತಿದ್ದಾನಲ್ಲಿ" ಈ ಮಾತು ಕಣ್ಣಂಚಿನಲ್ಲಿ ನೀರು ತರಿಸುತ್ತದೆ.

ಮೆಚ್ಚಿನ ಮಡದಿ ಭಾನುಮತಿಯ ಪಾತ್ರವನ್ನು ಇನ್ನಷ್ಟು ನಿರೀಕ್ಷಿಸಿದ್ದೆ. ನೈಪತ್ಯಕ್ಕೆ ಸರಿದ ಪಾತ್ರ. ಕೌರವೇಶನ ಕೊನೆಯ ಮಾತು, "ಸಂಪೂರ್ಣ ಸ್ಮಶಾನವನ್ನು ಆಳಲು ಸಿದ್ದನಾಗು ಧರ್ಮಜ" ಅಕ್ಷರಶಃ ಅನುಭವಕ್ಕೆ ಬಂದಿತ್ತು ಪಾಂಡವರಿಗೆ. ಕೊನೆಗೂ ಸ್ವರ್ಗದಲ್ಲಿ ನ್ಯಾಯ ಸಿಕ್ಕಿತಾ ಕೌರವೇಶನ ಶೌರ್ಯಕ್ಕೆ, ಧರ್ಮಿಷ್ಟ ಮಾನವೀಯತೆಯ ಬದುಕಿಗೆ, ನೀತಿ ನಂಬಿಕೆಗೆ, ದೊಡ್ಡತನಕ್ಕೆ. ಧರ್ಮಜನನ್ನು ಬಿಟ್ಟು ಪಾಂಡವರಿಗೆ ನರಕ ನ್ಯಾಯ ಸಮ್ಮತವೆ.

- ಸುಮಾ ಗುರುರಾಜ್

MORE FEATURES

ಅನುಪಮಾ ಅವರ ಶೈಲಿ ಹೆಚ್ಚು ಅಬ್ಬರವಿಲ್ಲದೆ ಮನಸ್ಸನ್ನು ಆರ್ದ್ರ ಗೊಳಿಸುತ್ತದೆ

06-05-2024 ಬೆಂಗಳೂರು

'ಅನುಪಮಾ ಅವರ ಶೈಲಿ ಹೆಚ್ಚು ಅಬ್ಬರವಿಲ್ಲದೆ, ಆಡಂಬರವಿಲ್ಲದೆ, ಶಾಸ್ತ್ರೀಯ ಚೌಕಟ್ಟುಗಳಲ್ಲಿ, ಹೊರೆ ಎನಿಸದ ಭಾವ ತೀವ್...

ಪುಸ್ತಕ ಬರೆಯುವುದಕ್ಕಿಂತ ಅದಕ್ಕೆ ಹೆಸರಿಡುವುದೇ ಕಷ್ಟದ ಕೆಲಸ

06-05-2024 ಬೆಂಗಳೂರು

'ಈ ಸಂಕಲನವನ್ನು 'ಬಿದಿರ ತಡಿಕೆ' ಎಂಬ ಹೆಸರಿನಿಂದ ಕರೆದಿರುವೆ. 'ಬಿದಿರು' ನಮ್ಮ ಕವಿಗಳಿಗೆ ಒಂದು...

ಅಂಬೇಡ್ಕರ್ ಕುರಿತು ಹೊಸ ಒಳನೋಟಗಳನ್ನು ನೀಡುವ ಕೃತಿ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದಿನಚರಿ’

06-05-2024 ಬೆಂಗಳೂರು

‘ಅಂಬೇಡ್ಕರ್ ಅವರಂತಹ ಮೇರು ವ್ಯಕ್ತಿತ್ವವನ್ನು ಒಬ್ಬರಿಂದ ಸಂಪೂರ್ಣವಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗುವುದಿಲ...