ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

Date: 22-12-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಪೂರ್ವ ಲಂಡನ್ ನ ಕಂಟೆಂಪೊರರಿ ಆರ್ಟ್, ಸ್ಟಕ್ ಮೂವ್‌ಮೆಂಟ್ ಕಲಾವಿದೆ ತ್ರೇಸಿ ಕರೀಮಾ ಎಮಿನ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದೆ: ತ್ರೇಸಿ ಕರೀಮಾ ಎಮಿನ್ (Tracey Karima Emin)
ಜನನ: 03 ಜುಲೈ, 1963
ಶಿಕ್ಷಣ: ಮೇಯ್ಡ್‌ಸ್ಟೋನ್ ಕಾಲೇಜ್ ಆಫ್ ಆರ್ಟ್ಸ್, ಕೆಂಟ್ ಮತ್ತು ರಾಯಲ್ ಕಾಲೇಜ್ ಆಫ್ ಆರ್ಟ್, ಲಂಡನ್
ವಾಸ: ಸ್ಪಿಟಾಲ್‌ಫೀಲ್ಡ್ಸ್, ಪೂರ್ವ ಲಂಡನ್
ಕವಲು: ಕಂಟೆಂಪೊರರಿ ಆರ್ಟ್, ಸ್ಟಕ್ ಮೂವ್‌ಮೆಂಟ್
ವ್ಯವಸಾಯ: ಪೇಂಟಿಂಗ್, ಶಿಲ್ಪಗಳು, ವೀಡಿಯೊ,ಎಂಬ್ರಾಯಿಡರಿ, ಫೊಟೋಗ್ರಫಿ, ಇನ್ಸ್ಟಾಲೇಷನ್.

ತ್ರೇಸಿ ಎಮಿನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ತ್ರೇಸಿ ಎಮಿನ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಮೂತ್ರಕೋಶದ ಹೊರಪದರದ ಕ್ಯಾನ್ಸರ್‌ಗೆ ಇದೇ (2020) ಜುಲೈ ತಿಂಗಳಿನಲ್ಲಿ ಶಸ್ತ್ರಕ್ರಿಯೆಗೆ ಒಳಗಾಗಿ, ಚೇತರಿಸಿಕೊಳ್ಳುತ್ತಿರುವ ತ್ರೇಸಿ ಎಮಿನ್, ಹಲವು ತಿಂಗಳುಗಳ ವಿಶ್ರಾಂತಿಯ ಬಳಿಕ ಈಗ ಕೃತಕ ಮೂತ್ರದ ಬ್ಯಾಗ್ ಧರಿಸಿಕೊಂಡೇ ಮತ್ತೆ ಕಲಾಲೋಕದಲ್ಲಿ ತೊಡಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ಅಯಾಚಿತವಾಗಿ ಒದಗಿಬಂದ ಕೊರೊನಾ ಕಾಲದ ಲಾಕ್‌ಡೌನ್ ಅವರಿಗೆ ಹೇಗೆ ವರವಾಗಿ ಪರಿಗಣಿಸಿತೆಂದು ಅವರು ವಿವರಿಸುವುದು ಹೀಗೆ - “What’s been amazing about this Covid time, is that the people who are really alone – you’re resilient. You understand how it all works. You’re nobody’s number one, no one's waiting for you, no one's looking for you, no one's missing you. In this situation, that’s a really good situation to be in. So now as I go into the next phase of my life I'm going to capitalise on that. Instead of feeling sorry for myself, it’s the other way around. I don’t feel lonely at all.”( ಇವಿನಿಂಗ್ ಸ್ಟಾಂಡರ್ಡ್ ಪತ್ರಿಕೆಯ ನ್ಯಾನ್ಸಿ ದುರಾಂಟ್ ಅವರಿಗೆ ನೀಡಿದ ಸಂದರ್ಶನದಲ್ಲಿ, ಜೂನ್, 2020)

ಡೇಮಿಯನ್ ಹರ್ಸ್ಟ್ ಮತ್ತು ಸಾರಾ ಲೂಕಸ್ ಅವರೊಂದಿಗೆ “ಯಂಗ್ ಬ್ರಿಟಿಷ್ ಆರ್ಟಿಸ್ಟ್ಸ್” (YBA) ಚಳವಳಿಯ ಮಹತ್ವದ ಭಾಗ ಎಂದು ಪರಿಗಣಿತರಾಗಿರುವ ತ್ರೇಸಿ, 90ರ ದಶಕದಲ್ಲಿ ತನ್ನ ವೈಯಕ್ತಿನ ಬದುಕನ್ನು ಕಲಾತ್ಮಕ ಭಾಷೆಯಲ್ಲಿ, ಬಿಚ್ಚಿಡುವ ಮೂಲಕ ಬ್ರಿಟಿಷ್ ಸಾಂಪ್ರದಾಯಿಕ ಜಗತ್ತನ್ನು ಬೆಚ್ಚಿಬೀಳಿಸಿದ್ದರು.

ಇಂಗ್ಲಂಡಿನ ಸರೆಯಲ್ಲಿ ಟರ್ಕಿಷ್ ತಂದೆ-ಬ್ರಿಟಿಷ್ ತಾಯಿಗೆ (ಉಪಪತ್ನಿ) ಜನಿಸಿದ ಅವಳಿ ಮಕ್ಕಳಲ್ಲಿ ಒಬ್ಬಳಾದ ತ್ರೇಸಿ, ತನ್ನ ತಂದೆ ಕುಟುಂಬವನ್ನು ತೊರೆದು ಹೋದಮೇಲೆ ತೀರಾ ಬಡತನದಲ್ಲಿ ಬೆಳೆಯಬೇಕಾಗಿತ್ತು. ಆಕೆಯೇ ಹೇಳುವಂತೆ ಮನೆಯ ಪ್ರತೀ ತಿಂಗಳ ವಿದ್ಯುತ್ ಮತ್ತು ಗ್ಯಾಸ್ ಬಿಲ್ ಗಳನ್ನು ಒಟ್ಟಿಗೆ ಒಂದೇ ತಿಂಗಳಲ್ಲಿ ಪಾವತಿ ಮಾಡುವ ಸ್ಥಿತಿ ಇರಲಿಲ್ಲ. ಜೊತೆಗೆ, 13ನೇ ವಯಸ್ಸಿನಲ್ಲಿ ಆಕೆ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಬೇಕಾಯಿತು. 1980ರಲ್ಲಿ ಮೆಡ್ವೇ ಡಿಸೈನ್ ಕಾಲೇಜಿನಲ್ಲಿ ಕಲಿಕೆ ಆರಂಭಿಸಿದ ಆಕೆಗೆ ಸಹಪಾಠಿ, ಬರಹಗಾರ ಬಿಲ್ಲಿ ಚೈಲ್ಡಿಷ್ ಜೊತೆ ಸಂಬಂಧ ಬೆಳೆಯುತ್ತದೆ ಮತ್ತು ಆತನ ಮುದ್ರಣಾಲಯ ಮತ್ತು ಮೇಯ್ಡ್‌ಸ್ಟೋನ್ ಕಾಲೇಜಿನಲ್ಲಿ ಆಕೆ ಕಳಿತ ಮುದ್ರಣ ತಂತ್ರಗಳು ಮುಂದೆ ಆಕೆಯ ಕಲಾಬದುಕಿನಲ್ಲಿ ಮಹತ್ವದ ಪರಿಣಾಮ ಬೀರುತ್ತವೆ. ಆಕೆ 1989ರ ಹೊತ್ತಿಗೆ ಲಂಡನ್‌ನ ರಾಯಲ್ ಕಾಲೇಜಿನಿಂದ ಪೇಂಟಿಂಗ್‌ನಲ್ಲಿ ಕಲಾಪದವಿ ಪಡೆಯುತ್ತಾರೆ.

ತನ್ನ ಆರಂಭದ “My Bed” ಮತ್ತು “Everyone I have ever slept with” ನಂತಹ ಕೃತಿಗಳ ಮೂಲಕ ಸಾಂಪ್ರದಾಯಿಕ ಬ್ರಿಟಿಷ್ ಸಮಾಜಕ್ಕೆ ಶಾಕ್ ನೀಡಿದ ತ್ರೇಸಿ, ತನ್ನ ಕಲಾಕೃತಿಗಳಲ್ಲಿ ತನ್ನದೇ ಬದುಕು-ಲೈಂಗಿಕತೆಗಳನ್ನು ವಿಷಯವಾಗಿರಿಸಿಕೊಂಡು, ಬಹುತೇಕ ಆತ್ಮವಿಮರ್ಶೆಯ ರೀತಿಯ ಕಲಾಕೃತಿಗಳನ್ನು ರಚಿಸಿದರು. ಆರಂಭದಲ್ಲಿ ಕಲಾಕೃತಿಗಳಿಗಿಂತ ಹೆಚ್ಚಾಗಿ ಮಾಧ್ಯಮ ಗಾಸಿಪ್‌ಗಳಿಂದಲೇ ಪ್ರಸಿದ್ಧಿ ಪಡೆಯುತ್ತಾಹೋದ ತ್ರೇಸಿ, ಟೆಲಿವಿಷನ್ ರಿಯಾಲಿಟಿ ಷೋಗಳು ಬರುವ ದಶಕಗಳ ಮೊದಲೇ ಅಂತಹದೊಂದು ಖಾಸಗಿತನವನ್ನು ಬಿಚ್ಚಿಡುವ ಸಾಹಸ ಮಾಡಿದ್ದರು. ತನ್ನ ಧೈರ್ಯ ಮತ್ತು ಪ್ರಾಮಾಣಿಕತೆಗಳ ಮೂಲಕ ಬದುಕು-ಕಲೆಯ ನಡುವಿನ ಗೆರೆಯನ್ನು ಮಸುಕು ಗೊಳಿಸಿಕೊಂಡ ತ್ರೇಸಿ, ಅಂದಿನ ಬ್ರಿಟಿಷ್ ಸಮಾಜ ಚರ್ಚಿಸಲು ಮುಜುಗರಪಡುತ್ತಿದ್ದ ಮದ್ಯವ್ಯಸನ, ಲಿಂಗ ತಾರತಮ್ಯ, ಲೈಂಗಿಕತೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದರು. ಆ ಕಾರಣದಿಂದಾಗಿಯೇ ಅವರು ಆರಂಭದಲ್ಲಿ ಕಲಾವಿದೆಗಿಂತ ಹೆಚ್ಚು ಸೆಲೆಬ್ರಿಟಿ ಆಗಿದ್ದರು!

ಚಿತ್ರಗಳ ಜೊತೆ ಕೈಬರಹದ ವಾಕ್ಯಗಳು, ನಿಯಾನ್ ಅಕ್ಶ್ಃಅರಗಳು, ಎಂಬ್ರಾಯಿಡರಿ ಮಾಡಿದ ಶಬ್ದಗಳು, ಮೊನೊಪ್ರಿಂಟ್ ಅಕ್ಷರಗಳು, ಅವರ ಕಲಾಕೃತಿಗಳಲ್ಲಿ ಸಾಮಾನ್ಯ. ಡ್ರಾಯಿಂಗ್, ವೀಡಿಯೊ, ಶಿಲ್ಪ, ಎಂಬ್ರಾಯಿಡರಿ, ಪೇಂಟಿಂಗ್, ಫೋಟೊಗ್ರಫಿ, ಇನ್ಸ್ಟಾಲೇಷನ್, ಪರ್ಫಾರ್ಮೆನ್ಸ್… ಹೀಗೆ ಹಲವು ವಿಧದ ಕಲಾಕೃತಿಗಳನ್ನು ಅವರು ರಚಿಸಿದ್ದಾರೆ. ತನಗಾದ ನೋವು, ಅವಮಾನ, ಪ್ರೀತಿ, ನಿರಾಶೆ, ಸುಖ ಎಲ್ಲವನ್ನೂ ತೀವ್ರವಾಗಿ ಒಬ್ಬ ಮಹಿಳೆಯ ದೃಷ್ಟಿಕೋನದಿಂದ ಅವರು ತನ್ನ ಕಲಾಕೃತಿಗಳಲ್ಲಿ ಮುಚ್ಚುಮರೆಯಿಲ್ಲದೇ ವ್ಯಕ್ತಪಡಿಸುತ್ತಾರೆ. ಹಾಗಾಗಿಯೇ ಆಕೆಯ ಕಲಾಕೃತಿಗಳು ಹಲವು ಬಾರಿ ತೀವ್ರ ಪ್ರತಿಕ್ರಿಯೆಗಳನ್ನು ಪಡೆದದ್ದಿದೆ.

ಆರಂಭದ ವಿವಾದಾತ್ಮಕ, ಲೈಂಗಿಕವಾಗಿ ಮುಕ್ತ ಮನೋವೃತ್ತಿಯ ತ್ರೇಸಿ, 2000ನೇ ಇಸವಿಯ ಹೊತ್ತಿಗೆ ಬಹಳ ಮಚ್ಯೂರ್ಡ್ ಕಲಾವಿದೆ ಆಗಿ ಬದಲಾಗಿದ್ದರು ಮತ್ತು ಬ್ರಿಟನ್‌ನ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು. 1990ರಲ್ಲಿ ಕ್ಯುರೇಟರ್ ಕಾರ್ಲ್ ಫ್ರೀಡ್‌ಮನ್ ಅವರೊಂದಿಗೆ ಸಂಬಂಧ ಹೊಂದಿದ್ದ ತ್ರೇಸಿ, ಕಡೆಗೂ ಮದುವೆ ಆದದ್ದು ತನ್ನ ಫ್ರಾನ್ಸ್‌ನಲ್ಲಿರುವ ಮನೆಯ ಕೈತೋಟದಲ್ಲಿ ತಂದಿರಿಸಿದ ಕಲ್ಲನ್ನು! “ಎಲ್ಲೋ ಸಮುದ್ರ ತೀರದ ಗುಡ್ಡದಿಂದ ತಂದ ಕಲ್ಲದು, ಪುರಾತನ ಮತ್ತು ಎಲ್ಲಿಗೂ ಹೋಗದೇ ಇಲ್ಲೇ ಲಂಗರು ಹಾಕಿ ಉಳಿಯುತ್ತದೆ. ಹಾಗಾಗಿ ನಾನು ಆ ಕಲ್ಲಿನ ಜೊತೆ ಗುರುತಿಸಿಕೊಳ್ಳಬಹುದು” ಎಂದಿದ್ದ ಆಕೆ, ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಬಳಸಿದ ಹೊದಿಕೆಯನ್ನು ಧರಿಸಿ ಆ ಕಲ್ಲಿನ ಜೊತೆ 2015ರಲ್ಲಿ ವಿಲಕ್ಷಣವಾಗಿ ಮದುವೆ ಆಗಿದ್ದರಂತೆ!

ತ್ರೇಸಿ ಎಮಿನ್ ಅವರ ಸಂದರ್ಶನ, ಆಸ್ಟ್ರೇಲಿಯಾದ ಕಲಾ ವಿಮರ್ಶಕ ವೇನ್ ತುನಿಕ್ಲಿಫ್ ಅವರಿಂದ:

ಬ್ರಿಟನ್ನಿನ ಪ್ರಸಿದ್ಧ ಸಾಂಸ್ಕೃತಿಕ ಟಿವಿ ಶೋ -ದಿ ಸೌತ್ ಬ್ಯಾಂಕ್ ಶೋ ದಲ್ಲಿ ತ್ರೇಸಿ ಎಮಿನ್ ಕುರಿತ ಕಾರ್ಯಕ್ರಮ :

ಚಿತ್ರ ಶೀರ್ಷಿಕೆಗಳು
ತ್ರೇಸಿ ಎಮಿನ್ ಅವರ ಅವರ Echoes of Munch … I Am the Last of My Kind (2019)


ತ್ರೇಸಿ ಎಮಿನ್ ಅವರ ಅವರ Everyone I Have Ever Slept With (1963-1995)


ತ್ರೇಸಿ ಎಮಿನ್ ಅವರ ಅವರ Exorcism of the last painting I ever made, installation view (1996)


ತ್ರೇಸಿ ಎಮಿನ್ ಅವರ ಅವರ Exorcism of the Last Painting I Ever Made (1996)


ತ್ರೇಸಿ ಎಮಿನ್ ಅವರ ಅವರ In The Dead Dark of night I wanted you (2018)


ತ್ರೇಸಿ ಎಮಿನ್ ಅವರ ಅವರ Ive Got It All (2000)


ತ್ರೇಸಿ ಎಮಿನ್ ಅವರ ಅವರ My bed (1998)


ತ್ರೇಸಿ ಎಮಿನ್ ಅವರ ಅವರ Thinking of You Again (2014)


ತ್ರೇಸಿ ಎಮಿನ್ ಅವರ ಅವರ This was the beginning (2020)


ತ್ರೇಸಿ ಎಮಿನ್ ಅವರ ಅವರ Untitled (Porchester Baths) (1988)


ತ್ರೇಸಿ ಎಮಿನ್ ಅವರ ಅವರ Untitled (2000)


ತ್ರೇಸಿ ಎಮಿನ್ ಅವರ ಅವರ You kept it coming (2019)

 

ಈ ಅಂಕಣದ ಹಿಂದಿನ ಬರೆಹಗಳು:

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...