“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

Date: 24-11-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕದ ಕಲಾವಿದ ಫ್ರಾಂಚೆಸ್ಕೊ ಕ್ಲೆಮೆಂತೆ ಅವರ ಕಲೆಯ ಕುರಿತು ಬರೆದಿದ್ದಾರೆ.

ಕಲಾವಿದ: ಫ್ರಾಂಚೆಸ್ಕೊ ಕ್ಲೆಮೆಂತೆ (Francesco Clemente)
ಜನನ: 23 ಮಾರ್ಚ್, 1952 ದಕ್ಷಿಣ ಇಟಲಿಯ ನೇಪಲ್ಸ್
ಶಿಕ್ಷಣ:
ಯೂನಿವರ್ಸಿಟಿ ಆಫ್ ರೋಮ್ ನಲ್ಲಿ ಆರ್ಕಿಟೆಕ್ಚರ್
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ನಿಯೊ ಎಕ್ಸ್ ಪ್ರೆಷನಿಸ್ಟ್
ವ್ಯವಸಾಯ: ಪೇಂಟಿಂಗ್, ಡ್ರಾಯಿಂಗ್

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಇದೇ 2020ರ ಆಗಸ್ಟ್ ತಿಂಗಳಲ್ಲಿ ಪತ್ರಿಕಾ ಸಂದರ್ಶನವೊಂದರಲ್ಲಿ ಭಾರತದ ಜೊತೆ ತನ್ನ ಸಂಬಂಧಗಳ ಬಗ್ಗೆ ಹೇಳಿದ ಫ್ರಾಂಚೆಸ್ಕೊ ಕ್ಲೆಮೆಂತೆ, ತಾನು ತೀರಿಕೊಂಡಾಗ ತನ್ನನ್ನು ವಾರಾಣಸಿಯಲ್ಲೇ ಅಂತ್ಯಸಂಸ್ಕಾರ ಮಾಡಬೇಕೆಂದು ವಿಲ್ ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ಸಮಕಾಲೀನ ವಾಸ್ತವಗಳನ್ನು ಪುರಾತನ ವಿಧಾನಗಳು ಮತ್ತು ಚಿಂತನಾಕ್ರಮಗಳನ್ನು ಬಳಸಿಕೊಂಡು ನೋಡಿ, ಕಥೆ-ಪುರಾಣ-ಹಾಡುಗಳ ಮೂಲಕ ಪ್ರಸ್ತುತಪಡಿಸುವುದು ಭಾರತದ ಸತ್ವ. ಈವತ್ತನ್ನು ದೂರದಿಂದ ನೋಡುವ ಆ ವಿಧಾನ ನನಗೆ ಬಹಳ ಕುತೂಹಲಕರ ಎಂದಿರುವ ಕ್ಲೆಮೆಂತೆ ತಾನು ಕಂಡ ವಾರಾಣಸಿಯನ್ನು ಹೀಗೆ ವಿವರಿಸುತ್ತಾರೆ: Varanasi remains the most fulfilling place for me. Great stone steps on the Ganges, a relentless display of every aspect of human life, the women washing their saris, the pilgrims bathing, the corpses on the funeral pyres burning, the children playing cricket, the tourists gazing, the naked holy men smoking ganja… Nothing is sacred because all the boundaries are broken; everything is sacred because all the boundaries are broken. (ದಿ ಟಾಕ್ಸ್ ಸಂದರ್ಶನದಲ್ಲಿ)

ಭಾರತದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಫ್ರಾಂಚೆಸ್ಕೊ ಕ್ಲೆಮೆಂತೆ ಅಮೂರ್ತ, ಬೌದ್ಧಿಕ ಕಸರತ್ತಿನ ಚಿತ್ರಗಳು ವಿಜ್ರಂಭಿಸುವ ಕಾಲದಲ್ಲಿ ಮತ್ತೆ ಚಿತ್ರಗಳನ್ನು ಮೂರ್ತಗೊಳಿಸುವ, ಆದರೆ ಆ ಮೂರ್ತ ಚಿತ್ರಗಳಲ್ಲಿ ಅನನ್ಯವಾದ ಭಾವನಾತ್ಮಕ ಬಿಂಬಗಳನ್ನು ಕಡೆದು ನಿಲ್ಲಿಸುವ ಹೊಸಮಜಲನ್ನು ತೆರೆದುಕೊಟ್ಟ ನವ ಅಭಿವ್ಯಕ್ತಿವಾದದ (ನಿಯೊ ಎಕ್ಸ್ ಪ್ರೆಷನಿಸ್ಟ್) ಹರಿಕಾರರಲ್ಲಿ ಒಬ್ಬರೆಂದು ಪರಿಗಣಿತರಾಗುತ್ತಾರೆ. ಮುಗ್ಧವೆನ್ನಿಸುವ ಮತ್ತು ಅದೇ ವೇಳೆಗೆ ಕಂಡೊಡನೆ ಅವರದೇ ಅನ್ನಿಸಿಬಿಡುವ ಕ್ಲೆಮೆಂತೆ ಅವರ ಚಿತ್ರಗಳು ಜಗತ್ತನ್ನು ಫ್ರೆಶ್ ಆಗಿ ನೋಡುವ ಅವರ ಪ್ರಯತ್ನಗಳು. ಅಲ್ಲೂ ತನ್ನ ಓರಗೆಯ ಜಾರ್ಜ್ ಬಸೆಲೆಜ್, ಆನ್ಸೆಲ್ಮ್ ಕೀಫರ್ ಮತ್ತಿತರರಿಗಿಂತ ಭಿನ್ನವಾಗಿ ನಿಲ್ಲುವ ಕ್ಲೆಮೆಂತೆ, ತನ್ನ ಚಿತ್ರಗಳಲ್ಲಿ ಭಾರತದ ಧಾರ್ಮಿಕ-ಸಾಂಸ್ಕೃತಿಕ ಬಿಂಬಗಳನ್ನು ಯತೇಚ್ಛವಾಗಿ ಬಳಸುತ್ತಾರೆ.

ಪುರಾತನ ಗ್ರೀಕ್ ನಗರಿ ನೇಪಲ್ಸ್ ನಲ್ಲಿ ಪ್ರತಿಷ್ಠಿತ ಆದರೆ ಆರ್ಥಿಕವಾಗಿ ಅಷ್ಟೇನೂ ಪ್ರಬಲ ಅಲ್ಲದ ಕುಟುಂಬದಲ್ಲಿ ಜನಿಸಿದ ಕ್ಲೆಮೆಂತೆ ರೋಮ್ ವಿವಿಯಲ್ಲಿ ಆರ್ಕಿಟೆಕ್ಚರ್ ಕಲಿಯುವ ವೇಳೆಗಾಗಲೇ ಎರಡನೇ ಮಹಾಯುದ್ಧದ ಬಿಸಿಯನ್ನು ತಟ್ಟಿಸಿಕೊಂಡು, ಮಸೊಲಿನಿಯ ಸರ್ವಾಧಿಕಾರದಡಿ ಅಸ್ತಿತ್ವದ ಪ್ರಶ್ನೆಗಳನ್ನು ಎದುರಿಸಿರುತ್ತಾರೆ. 1971ರ ಮೊದಲ ಕಲಾಪ್ರದರ್ಶನದಿಂದ ಇಲ್ಲಿಯ ತನಕವೂ ಕ್ಲೆಮೆಂತೆ ಕಲಾಕೃತಿಗಳ ಮುಖ್ಯ ಎಳೆ ಈ ಅಸ್ತಿತ್ವದ ಪ್ರಶ್ನೆ. ತನ್ನ ಗುರು, ಶಿಲ್ಪಿ ಅಲಿಗೆರೊ ಬೊಯೆತ್ತಿ ಜೊತೆ 1973ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದ ಕ್ಲೆಮೆಂತೆಯನ್ನು ಕಾಡಿದ್ದು ಭಾರತದ “ಆತ್ಮ -ಅನಾತ್ಮ” ಸಿದ್ಧಾಂತ. ಕ್ಲೆಮೆಂತೆ ಅವರ ಹೆಚ್ಚಿನ ಚಿತ್ರಗಳಲ್ಲಿ, ಅದರಲ್ಲೂ ಭಾವಚಿತ್ರಗಳಲ್ಲಿ ಈ ಸಂಘರ್ಷ ಢಾಳಾಗಿ ಕಾಣಿಸುತ್ತದೆ. ಹಿಂದೂಯಿಸಂ ಮತ್ತದರ ಚಿಹ್ನೆಗಳನ್ನು ತನ್ನ ಕಲಾಕೃತಿಗಳಲ್ಲಿ ಯತೇಚ್ಛವಾಗಿ ಬಳಸುವ ಕಾರಣ ಕ್ಲೆಮೆಂತೆ ಬೇರೆ ಯುರೋಪಿಯನ್ ಕಲಾವಿದರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಪದೇಪದೇ ಭಾರತಕ್ಕೆ ಬರುವ ಕ್ಲೆಮೆಂತೆ 76-77ರ ಅವಧಿಯನ್ನು ಮದರಾಸಿನ ಥ್ಯಾಸಾಫಿಕಲ್ ಸೊಸೈಟಿಯಲ್ಲಿ ಹಿಂದೂಯಿಸಂ ಅಧ್ಯಯನಕ್ಕೆಂದು ಬಳಸಿಕೊಂಡಿದ್ದರು. ಅವರು ಸಂಸ್ಕೃತದಲ್ಲೂ ಪಾಂಡಿತ್ಯ ಹೊಂದಿದ್ದಾರೆ.

ಭಾರತದ ಸಾಂಪ್ರದಾಯಿಕ (ಜೈಪುರ ಮತ್ತು ಓರಿಸ್ಸಾ) ಕಲಾವಿದರ ಜೊತೆ ಸೇರಿ ಅವರು ರಚಿಸಿದ Francesco Clemente Pinxit ಸರಣಿ ಗಮನಾರ್ಹ. 80ರ ವೆನೀಸ್ ಬಯೆನಾಲ್ ಮೂಲಕ ಅಂತಾರಾಷ್ಟ್ರೀಯವಾಗಿ ಚಿತ್ರಜಗತ್ತಿನ ಗಮನ ಸೆಳೆದ ಕ್ಲೆಮೆಂತೆ, 1995ರಲ್ಲಿ 51ದಿನಗಳ ಕಾಲ ಮೌಂಟ್ ಅಬು ಪರಿಸರದಲ್ಲಿ ಅಡ್ಡಾಡಿ, ದಿನಕ್ಕೊಂದು ವಾಟರ್ ಕಲರ್ ಚಿತ್ರ ರಚಿಸಿದ್ದರು. ವಿಫಲ ಸಿನಿಮಾ ನಟರೂ ಆಗಿದ್ದ ಕ್ಲೆಮೆಂತೆ ಕಲಾವಿದರು ಮತ್ತು ಕವಿ-ಸಾಹಿತಿಗಳೊಂದಿಗೆ ಸೇರಿ ಹಲವು ಸಹಯೋಗದ ಚಿತ್ರಗಳನ್ನೂ ರಚಿಸಿದ್ದಾರೆ. ಜಗತ್ತಿನಾದ್ಯಂತ ಬಹುತೇಕ ಎಲ್ಲ ಮಹತ್ವದ ಕಲಾಪ್ರದರ್ಶನಗಳಲ್ಲಿ, ಕಲಾಗ್ಯಾಲರಿಗಳಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡಿವೆ.

ಫ್ರಾಂಚೆಸ್ಕೊ ಕ್ಲೆಮೆಂತೆ ಬಗ್ಗೆ ಪ್ರಸಿದ್ಧ ಲೇಖಕ ಸಲ್ಮಾನ್ ರಷ್ದೀ ಬರೆದ ಬರಹವೊಂದು ಇಲ್ಲಿದೆ:

ಫ್ರಾಂಚೆಸ್ಕೊ ಕ್ಲೆಮೆಂತೆ ಕುರಿತ ಒಂದು ಪರಿಚಯಾತ್ಮಕ ವೀಡಿಯೊ:

ಚಿತ್ರ ಶೀರ್ಷಿಕೆಗಳು

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ . Angels’ tent (2013-14)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ The Artificial Princess (2011-12)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ Hunger (1980)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ India1 (2019)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ India 2 (2019)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ Self Portrait in an Imperial Age (2005)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ Story of My Country 1 (1990)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ Irons and Rainbows (2010)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ Tony Morrison (1998)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ Two Painters (1980)

ಫ್ರಾಂಚೆಸ್ಕೊ ಕ್ಲೆಮೆಂತೆ ಅವರ Untitled (2017)

ಈ ಅಂಕಣದ ಹಿಂದಿನ ಬರಹಗಳು:

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

18-03-2024 ಬೆಂಗಳೂರು

""ಅನ್ವೇಷಣೆ" ಯಂತಹ ಸಾಹಿತ್ಯಕ್ಕೆ ಮೀಸಲಾದ ನಿಯತ ಕಾಲಿಕೆಯಲ್ಲಿ ಕವಿತೆಗಳನ್ನು ಪ್ರಕಟಿಸಿರುವ ಭಾಗ್ಯ ಭರ...

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?

16-03-2024 ಬೆಂಗಳೂರು

"ಒಂದು ಕಾಲಗಟ್ಟದಲ್ಲಿ ಒಂದು ಸಮಾಜ ಇನ್ನೊಂದು ಸಮಾಜದೊಂದಿಗೆ ಎಂತದೆ ಸಂಬಂದವನ್ನು ಬೆಳೆಸಿಕೊಂಡಾಗಲೂ ಅದರಲ್ಲಿ ಸಕಾರಾ...

ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

11-03-2024 ಬೆಂಗಳೂರು

"ಜಗತ್ತಿನಲ್ಲಿ ಯಾವುದಾದರೂ ಬಾಶೆ ಇನ್ನೊಂದು ಬಾಶೆಯ ಇಲ್ಲವೆ ಬಾಶೆಗಳ ನಂಟು ಇಲ್ಲದೆ ಬದುಕಬಹುದೆ? ಹೀಗೊಂದು ಪ್ರಶ್ನೆ...