ಗಜಾನನ ಶರ್ಮ, ಮಲ್ಲಿಕಾರ್ಜುನ ಹಿರೇಮಠಗೆ ಮಾಸ್ತಿ ಕಾದಂಬರಿ ಪುರಸ್ಕಾರ, ದಾದಾಪೀರ್ ಗೆ ಕಥಾ ಪುರಸ್ಕಾರ

Date: 27-09-2022

Location: ಬೆಂಗಳೂರು


ಮಾಸ್ತಿ ಅವರ 131ನೇ ವರ್ಷದ ಜನ್ಮ ಸಂಸ್ಮರಣೆಯ ಅಂಗವಾಗಿ ಪ್ರತಿ ವರ್ಷದಂತೆ ಕಾದಂಬರಿ ಪುರಸ್ಕಾರ ಮತ್ತು ಮಾಸ್ತಿ ಕಥಾ ಪುರಸ್ಕಾರಕ್ಕೆ ಲೇಖಕ, ಪ್ರಕಾಶಕರಿಂದ ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ 25 ಕೃತಿಗಳು ಬಂದಿದ್ದು, ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಲೇಖಕ ಗಜಾನನ ಶರ್ಮ ಅವರ ‘ಚೆನ್ನ ಭೈರಾದೇವಿ’ ಕೃತಿ ಆಯ್ಕೆಯಾಗಿದ್ದು, 25,000ರೂ ನಗದು ಬಹುಮಾನ ಗಳಿಸಿದ್ದಾರೆ. ಅಲ್ಲದೆ ಕೃತಿಯನ್ನು ಪ್ರಕಟಿಸಿರುವ ಅಂಕಿತ ಪುಸ್ತಕ ಪ್ರಕಾಶನ 10,000ರೂ ಪುರಸ್ಕಾರಕ್ಕೆ ಅರ್ಹವಾಗಿದೆ.

ಜೊತೆಗೆ ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’ ಕಾದಂಬರಿಯು ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, 25,000ರೂ ನಗದು ಪುರಸ್ಕಾರಕ್ಕೆ ಅರ್ಹವಾಗಿದೆ. ಕೃತಿಯನ್ನು ಪ್ರಕಟಿಸಿರುವ ಧಾರವಾಡ ಮನೋಹರ ಗ್ರಂಥಮಾಲಾ ಪ್ರಕಾಶನವು 10,000ರೂ ನಗದು ಬಹುಮಾನಕ್ಕೆ ಭಾಜನವಾಗಿದೆ. 

ಮಾಸ್ತಿ ಕಥಾ ಪುರಸ್ಕಾರಕ್ಕೆ ಯುವ ಲೇಖಕ ದಾದಾಪೀರ್ ಜೈಮನ್ ಅವರ ‘ನೀಲ ಕುರಿಂಜಿ’ ಕೃತಿ ಆಯ್ಕೆಯಾಗಿದೆ. ಈ ಮೂಲಕ  25,000 ರೂ ನಗದು ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಕೃತಿಯನ್ನು ಪ್ರಕಟಿಸಿರುವ ವೈಷ್ಣವಿ ಪ್ರಕಾಶನ ಆಯ್ಕೆಯಾಗಿದ್ದು, 10,000ರೂ ನಗದು ಪ್ರಶಸ್ತಿಗೆ ಅರ್ಹವಾಗಿದೆ. 

ಈ ಎರಡೂ ಸ್ಪರ್ಧೆಯಲ್ಲಿ ಪರಿಶೀಲಕರಾಗಿ ಈಶ್ವರ ಚಂದ್ರ, ಎಂ.ಎಸ್. ಆಶಾದೇವಿ, ವಿಜಯಶಂಕರ, ಎಚ್. ದಂಡಪ್ಪ, ಚ.ಹ.ರಘುನಾಥ್, ಚಿಂತಾಮಣಿ ಕೊಡ್ಲೆಕೆರೆ ಅವರು ಪ್ರಮುಖ ಪಾತ್ರ ವಹಿಸಿದ್ದರು. 

ಮಾಸ್ತಿ ಪುರಸ್ಕಾರ ಸಮಾರಂಭವನ್ನು ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು, ಈ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದಾಗಿ ಮಾಸ್ತಿ ಟ್ರಸ್ಟ್ ನ ಅಧ್ಯಕ್ಷರಾದ ಮಾವಿನಕೆರೆ ರಂಗನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
 

MORE NEWS

ಲೇಖಕಿಯರ ಸಂಘದಿಂದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

16-05-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿಗಳ ಪ್ರಶಸ್ತಿಗಳಿಗಾಗಿ ಲೇಖಕಿಯರಿಂದ ಕೃತಿಗಳನ್ನು ...

ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

16-05-2024 ಬೆಂಗಳೂರು

ಬೆಂಗಳೂರು: ಬೆಂಗಳೂರಿನ ಬಸವ ಸಮಿತಿಯು ‘ವಿಶ್ವ ಬಸವ ಜಯಂತಿ 2024’ರ ಅಂಗವಾಗಿ ಡಾ. ಅರವಿಂದ ಜತ್ತಿ ಮಾರ್ಗದರ...

ಲೇಖಕ ಮಚ್ಚಮಡ‌ ಲಾಲ ಕುಟ್ಟಪ್ಪನವರ ‘ಮೂಪಾಜೆ ನಿಗಂಟ್’ ಕೃತಿಯ ಲೋಕಾರ್ಪಣೆ

15-05-2024 ಬೆಂಗಳೂರು

ವಿರಾಜಪೇಟೆ: ಬುಡಕೆಟ್ಟ್ ಸಂಸ್ಕೃತಿ ಅಧ್ಯಯನ ಕೇಂದ್ರ ಕೊಡವಾಮೆರ ಆಶ್ರಯದಲ್ಲಿ ಲೇಖಕ ಮಚ್ಚಮಡ‌ ಲಾಲ ಕುಟ್ಟಪ್ಪ ಅವರ &...