ಹಿಮಾಲಯದ ಅಡಿಯಲ್ಲಿ ರಕ್ತಸಿಕ್ತ ಕಣಿವೆ...!


ಕಶ್ಮೀರಿ ಪಂಡಿತರ ಒಂದು ಕಾಲದ ಸುರಕ್ಷಿತ ಸ್ವಾತಂತ್ರ್ಯಪೂರ್ವದ ಬದುಕು ಅನಂತರ ಉಗ್ರ ಮುಸ್ಲಿಮರ ಕೈಯಲ್ಲಿ ಸಿಕ್ಕು ಮೂರಾಬಟ್ಟೆಯಾಗಿ ಚಿಂದಿಯಾಗಿ ಹರಿದು ಹೋಗಿದ್ದನ್ನು ವರದಿಯೂ ಮಾಡದೇ ಬಚ್ಚಿಟ್ಟ ಮುಚ್ಚಿಟ್ಟ ಈ ದೇಶದ ಆಗಿನ ಮಾಧ್ಯಮಗಳ ನಾಚಿಕೆ ಪಡುವಂತಹಾ ಹೊಣೆಗೇಡಿತನದ ಬಗ್ಗೆ ಲೇಖಕರು ತಮ್ಮ ಚುರುಕಾದ (ಪೆನ್) ಗನ್ ತಿರುಗಿಸಿ ಪಾಯಿಂಟ್ ಬ್ಲ್ಯಾಂಕ್ ಶೂಟ್ ಮಾಡಿದ್ದಾರೆ ಎಂದಿದ್ದಾರೆ ಕಾದಂಬರಿಕಾರ ನಾಗೇಶ್ ಕುಮಾರ್ ಸಿ.ಎಸ್. ಲೇಖಕ ಸಂತೋಷಕುಮಾರ್ ಮೆಹಂದಳೆ ಅವರ ಕೃತಿ The untold Story Of ಕಶ್ಮೀರ್ ಬಗ್ಗೆ ಅವರು ಬರೆದ ಲೇಖನ ನಿಮ್ಮ ಓದಿಗಾಗಿ..

ಕೃತಿ: The untold Story Of ಕಶ್ಮೀರ್
ಲೇಖಕಿ: ಸಂತೋಷಕುಮಾರ್ ಮೆಹಂದಳೆ
ಪ್ರಕಾಶನ: ಸಾಹಿತ್ಯ ಲೋಕ ಪಬ್ಲಿಕೇಶನ್
ಬೆಲೆ: 210
ಪುಟ:204

ಈ ಪುಸ್ತಕ ಕೇವಲ ಒಂದು ವಿಮರ್ಶೆಗೆ ನಿಲುಕುವುದಂತದಲ್ಲ... ಅಭಿಪ್ರಾಯಗಳು ಗೌಣವಾಗುತ್ತವೆ, ಮಾತುಗಳು ಮೌನವಾಗುತ್ತವೆ.

ಸಂತೋಷ ಕುಮಾರ ಮೆಹೆಂದಳೆಯವರು ನಮ್ಮ ನಡುವೆಯೇ ಹುದುಗಿಸಿಟ್ಟ ಘೋರಾತಿಘೋರ ಕಾಶ್ಮಿರಿ ಉಗ್ರವಾದಿಗಳ ಪಾಪಕೃತ್ಯಗಳ ಅಸ್ತಿಪಂಜರಗಳನ್ನು‌ ಯಾವುದೇ ಹಿಂದೇಟಿಲ್ಲದೇ ಬಯಲು‌ಮಾಡಿದ್ದಾರೆ.

ಅಲ್ಲಿ ಮೊದಲಿಂದಲೂ ಘನತೆ, ಗೌರವ ಮತ್ತು ತಮ್ಮದೇ ಆದ ಸಂಸ್ಕೃತಿಯನ್ನು ಪಾಲಿಸುತ್ತಾ ಬದುಕಿದ್ದ ಶಾಂತಿಪ್ರಿಯ ಹಿಂದೂಗಳನ್ನು ಒಕ್ಕಲೆಬ್ಬಿಸಿ ಇಸ್ಲಾಮೀಕರಿಸಿ ಅದರ ಮೂಲಕ ಉಗ್ರವಾದಿ ಹೆಡ್ ಕ್ವಾರ್ಟರ್ಸ್ ಆಗಿಸಲು ಮಾಡಿದ ಪಾಕಿಸ್ತಾನಿಗಳ ಕುತಂತ್ರ, ಸ್ಥಳೀಯ ಮುಸ್ಲಿಮರೂ ಜತೆಗೂಡಿ ಮಾಡಿದ ಷಡ್ಯಂತ್ರದ ಪರಿಣಾಮದ - ಎಲ್ಲ ಅಲಿಖಿತ ಮಾರಣಹೋಮದ ದಾಖಲೆಗಳೂ ಈ ಪುಸ್ತಕದಲ್ಲಿ ಬೆಳಕು ಕಂಡು ನಮ್ಮನ್ನು ಆಘಾತಕ್ಕೊಳಗಾಗಿಸುತ್ತದೆ. ಈ ದೇಶದಲ್ಲಿ ಇದನ್ನೆಲ್ಲಾ ನಾವು ಅರಿಯದೇ ದೊಡ್ಡ ತಪ್ಪು ಮಾಡಿದ್ದೇವಾ ಎನಿಸದಿರಲಾರದು. 

ಈ ಪುಸ್ತಕದ ಪುಟಗಳು ಬಿಳಿಯ ಹಾಳೆ ಮೇಲೆ ಮೂಡಿದ ಕಪ್ಪು ಅಕ್ಷರಗಳಿಂದ ಮುದ್ರಿಸಿದ್ದರೂ, ರಕ್ತಲೇಪಿತ ಕೆಂಪಿನಿಂದ ನಮ್ಮ ಕೈಬೆರಳುಗಳಿಗೆ ಅಂಟಿಕೊಂಡಾತು, ಮನಸ್ಸಿನ ಮೂಲೆಗೂ ಮೆತ್ತಿಕೊಂಡಾತು ಎಂದು ಭಯವಾಗುತ್ತದೆ.

ಇಲ್ಲಿ ಪ್ರತಿ ಅಧ್ಯಾಯಕ್ಕೂ ಲೇಖಕರು ಮಾಹಿತಿ ಸಂಗ್ರಹ ಮಾಡಿದ ರೆಫ಼ೆರೆನ್ಸುಗಳು ಇದ್ದು ಈ ಪುಸ್ತಕದ ಗೌರವ ಮತ್ತು ಲೇಖನದ ವಿಶ್ವಾಸಾರ್ಹತೆ ಹೆಚ್ಚಿಸಿದೆ.

ಕಶ್ಮೀರಿ ಪಂಡಿತರ ಒಂದು ಕಾಲದ ಸುರಕ್ಷಿತ ಸ್ವಾತಂತ್ರ್ಯಪೂರ್ವದ ಬದುಕು ಅನಂತರ ಉಗ್ರ ಮುಸ್ಲಿಮರ ಕೈಯಲ್ಲಿ ಸಿಕ್ಕು ಮೂರಾಬಟ್ಟೆಯಾಗಿ ಚಿಂದಿಯಾಗಿ ಹರಿದು ಹೋಗಿದ್ದನ್ನು ವರದಿಯೂ ಮಾಡದೇ ಬಚ್ಚಿಟ್ಟ ಮುಚ್ಚಿಟ್ಟ ಈ ದೇಶದ ಆಗಿನ ಮಾಧ್ಯಮಗಳ ನಾಚಿಕೆ ಪಡುವಂತಹಾ ಹೊಣೆಗೇಡಿತನದ ಬಗ್ಗೆ ಲೇಖಕರು ತಮ್ಮ ಚುರುಕಾದ (ಪೆನ್) ಗನ್ ತಿರುಗಿಸಿ ಪಾಯಿಂಟ್ ಬ್ಲ್ಯಾಂಕ್ ಶೂಟ್ ಮಾಡಿದ್ದಾರೆ.

ಅದರಂತೆಯೇ ಇಂಥಾ ಪರಮಸಹಿಷ್ಣು ದೇಶದ ವಿರುದ್ಧ ತಮ್ಮ ಅಭಿಪ್ರಾಯ ಸ್ವಾತಂತ್ರ್ಯದ ಮುಸುಕು ಹಾಕಿಕೊಂಡು ಹೊಲಸು ಮಾತಾಡುತ್ತಾ ಈ ಪೀಳಿಗೆಯ ನಾಗರೀಕರನ್ನೂ ದಿಕ್ಕೆಡಿಸುವ ‘ಬುದ್ದಿಜೀವಿಗಳನ್ನೂ’ ಲೇಖಕರು ಸ್ಪೇರ್ ಮಾಡಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ- ಗುನ್ನ ಇಕ್ಕಿದ್ದಾರೆ!

ಈ ಪರಮದುಷ್ಟರ ನೀಚ ಹತ್ಯಾಕಾಂಡ ಕಂಡು ಹಿಮಾಲಯದ ಎತ್ತರದ ಶಿಖರಗಳೇ ನಾಚಿ ತಲೆತಗ್ಗಿಸಿವೆಯೊ ಏನೋ?..ನಮಗಂತೂ ದೇಶದ ಮನಸಾಕ್ಷಿಯ ಮೇಲೆ ಮೂಡಿದ ಅಮಾಯಕರ ರಕ್ತದ ಕಲೆಗಳನ್ನು ಮುಚ್ಚಿಡಲು ಹಿಮಾಲಯದ ಹಿಮವೆಲ್ಲಾ ಕೂಡಾ ಸಾಕಾಗಲಾರದು ಎನಿಸೀತು!

ಈ ಪುಸ್ತಕ ಕೈಗೆತ್ತಿಕೊಂಡಾಗ ಒಂದೇ ಗುಕ್ಕಿನಲ್ಲಿ ಓದಬೇಕೆಂಬ ಆಸೆಯಿತ್ತು ಆದರೆ ಓದುತ್ತಾ ಹೋದಂತೆ , ಮಧ್ಯೆ ಸುಧಾರಿಸಿಕೊಳ್ಳಲು ಸ್ವಲ್ಪ ಬ್ರೇಕ್ ಬೇಕು ಎನಿಸಿದಂತ ಗಂಭೀರ ವಿಚಾರಧಾರೆ ಇದು .

ಲೇಖಕರಿಗೆ ಒಂದು ಚಿಕ್ಕ ಮನವಿ:‌ ಇನ್ನೇನಾದರೂ ಈ ಬಗ್ಗೆ ಅನ್ಟೋಲ್ಡ್ (untold) ಆಗಿ‌ ಮಿಕ್ಕಿದ್ದರೆ ಬರೆಯಬೇಡಿ... ನಮಗೆ ಇನ್ನು ಸಹಿಸಿಕೊಳ್ಳಲು, ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ!

ಖಂಡಿತಾ ನಗ್ನ ಸತ್ಯವನ್ನು ಓದಲು ಬಯಸುವವರು ಮಿಸ್ ಮಾಡಬಾರದಂತಹಾ ಪುಸ್ತಕ.

ಪುಸ್ತಕ ಕೊಳ್ಳಲು ಲೇಖಕರನ್ನು ಇಲ್ಲವೇ ಸಾಹಿತ್ಯಲೋಕದ ರಘುವೀರ್ ಸಮರ್ಥ್ ಅವರನ್ನು ಸಂಪರ್ಕಿಸಿ. ಇತರೆಡೆಯೂ ಲಭ್ಯ.

ಸಿ.ಎಸ್. ನಾಗೇಶ್ ಕುಮಾರ್ ಅವರ ಲೇಖಕ ಪರಿಚಯ...

 

MORE FEATURES

ಗಾಂಧಾರಿಯ ಭಾವ ಸಂಘರ್ಷ ’ಮಿಂಚದ ಮಿಂ...

25-05-2022 ಬೆಂಗಳೂರು

ಪಾಂಡವ ಪಂಚಕರಿಂದ ಕೌರವಾದಿಗಳ ಹನನದ ಪಶ್ಚಾತ್ ಕಂಪನವೇ "ಗಾಂಧಾರಿ ಶಾಪ" ಎಂಬ ಪ್ರಸಂಗ. ಕೃಷ್ಣಾವಾತಾರದ ಪರಿಸ...

ಹೆಣ್ಣಿನ ಚರಿತ್ರೆ ಮತ್ತು ಆಳುವ ಅಹಂ...

25-05-2022 ಬೆಂಗಳೂರು

ನಾಗರೇಖಾ ಅವರ 'ಸ್ತ್ರೀ - ಸಮಾನತೆಯ ಸಂಧಿಕಾಲದಲ್ಲಿ' ಯುಗ ಯುಗಗಳ ಮೌನದೊಳಗಿನ ಶಕ್ತಿಯು ಹೊರಪ್ರವಹಿಸಿದುದರ ಅಸಾಧ...

ಸರಜೂ ಕಾಟ್ಕರ್ ಅವರ  “ದಂಗೆ” - ಆಳ...

25-05-2022 ಬೆಂಗಳೂರು

ಯಾವ ಈಸಂ ಅಥವಾ ಯುಫೆಮಿಸಂಗಳ ಹಂಗಿಲ್ಲದೆ ತೃತೀಯ ವ್ಯಕ್ತಿ ನಿರೂಪಣೆಯಲ್ಲಿ ಸಾಗುವ  ಕಾದಂಬರಿ  ಚರಿತ್ರೆಯ ಪುಟಗ...