ಇಂದಿನ ವಿಜ್ಞಾನಿಗಳ ಸಾಧನೆ ಹಿಂದಿನ ತಲೆಮಾರಿನ ಅದ್ಭುತ ಪ್ರತಿಭೆಗಳ ಮೇಲೆ ಅವಲಂಬಿತವಾಗಿದೆ.


‘ಆಧುನಿಕ ವಿಜ್ಞಾನವು ಭಾರತವನ್ನು ಪ್ರವೇಶಿಸಲು ಎರಡು ಶತಮಾನಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದೆ. ದಾಖಲಾದ ಹಲವಾರು ಆವಿಷ್ಕಾರಗಳ ಪುರಾವೆಗಳನ್ನು ಅವಲೋಕಿಸಿದಾಗ, ಆಧುನಿಕ ವಿಜ್ಞಾನವು ಭಾರತದಲ್ಲಿ 19ನೇ ಶತಮಾನದಿಂದೀಚೆಗೆ ಬಳಕೆಯಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ’ ಎನ್ನುತ್ತಾರೆ ಸಿ. ಎನ್. ಆರ್. ರಾವ್ ಮತ್ತು ಇಂದುಮತಿ ರಾವ್. ಅವರು ತಮ್ಮ ‘ಭಾರತದಲ್ಲಿ ಆಧುನಿಕ ವಿಜ್ಞಾನದ ಸಂಸ್ಥಾಪಕರು’ ಕೃತಿಗೆ ಬರೆದ ಪ್ರವೇಶಿಕೆ ಇಲ್ಲಿದೆ.

ಆಧುನಿಕ ವಿಜ್ಞಾನವು ಕೆಲವು ಶತಮಾನಗಳ ಹಿಂದೆಯಷ್ಟೇ ಆರಂಭ ವಾಗಿದೆ ಎಂದು ಪರಿಗಣಿಸಬಹುದು. ಈ ನಂಬಿಕೆಯು ಸಮಂಜಸವಾಗಿದೆ ಎನ್ನಬಹುದು ಏಕೆಂದರೆ, ಭೌತವಿಜ್ಞಾನದ ಔಪಚಾರಿಕ ಆರಂಭವನ್ನು 17ನೇ ಶತಮಾನದ ಉತ್ತರಾರ್ಧಕ್ಕೆ ಗುರುತಿಸಬಹುದು. ನಾವಿಂದು ತಿಳಿದುಕೊಂಡ ಆಧುನಿಕ ವಿಜ್ಞಾನವು ಭಾರತವನ್ನು ಪ್ರವೇಶಿಸಲು ಎರಡು ಶತಮಾನಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದೆ. ದಾಖಲಾದ ಹಲವಾರು ಆವಿಷ್ಕಾರಗಳ ಪುರಾವೆಗಳನ್ನು ಅವಲೋಕಿಸಿದಾಗ, ಆಧುನಿಕ ವಿಜ್ಞಾನವು ಭಾರತದಲ್ಲಿ 19ನೇ ಶತಮಾನದಿಂದೀಚೆಗೆ ಬಳಕೆಯಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಂದಿನಿಂದ ನಾವು ಬಹಳಷ್ಟು ಅಭಿವೃದ್ಧಿಯನ್ನು ಸಾಧಿಸುವುದರ ಜೊತೆಗೆ ವಿಜ್ಞಾನದ ಅನೇಕ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನೂ ನೀಡುತ್ತಿದ್ದೇವೆ. ಅವುಗಳಲ್ಲಿ ಅನೇಕ ಕೊಡುಗೆಗಳು ನೈಜ ಹಾಗೂ ಮೂಲ ಸ್ವರೂಪವನ್ನು ಆವಿರ್ಭವಿಸುವ ಕೊಡುಗೆಗಳಾಗಿದ್ದು ವಿಜ್ಞಾನದ ಇತಿಹಾಸದಲ್ಲಿ ಮಾದರಿಯ ಹೆಗ್ಗುರುತುಗಳಾಗಿ ಪರಿಗಣಿಸಲ್ಪಟ್ಟಿವೆ.

ಇಂದು ನಾವು ಅತಿಯಾದ ಒತ್ತಡ ಹಾಗೂ ಸ್ಪರ್ಧಾತ್ಮಕ ಯುಗಕ್ಕೆ ಸಾಕ್ಷಿಯಾಗಿದ್ದೇವೆ. ಭಾರತದಲ್ಲಿ ಆಧುನಿಕ ವಿಜ್ಞಾನವು ಹೇಗೆ ಪ್ರಾರಂಭವಾಯಿತು ಹಾಗೂ ಅದರ ಆರಂಭಿಕ ಪರಿಶೋಧಕರು ಮತ್ತು ದಾರಿತೋರಿದ ಮಹನೀಯರು ಯಾರು ಎಂಬುದರ ಬಗ್ಗೆ ನಮ್ಮಲ್ಲಿ ಹಲವರು ಆಲೋಚಿಸದೇ ಇರಬಹುದು. ಆದರೆ ಇಂದಿನ ವಿಜ್ಞಾನಿಗಳ ಸಾಧನೆ ಹಿಂದಿನ ತಲೆಮಾರಿನ ಅದ್ಭುತ ಪ್ರತಿಭೆಗಳ ಮೇಲೆ ಅವಲಂಬಿತವಾಗಿದ್ದು, ನಮ್ಮ ಹಿಂದಿನ ಮಹಾನ್ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಹಸ್ತಪ್ರತಿ ತಯಾರಿಕೆಯಲ್ಲಿ ಅಪಾರ ಸಹಕಾರ ನೀಡಿದ ಶ್ರೀಮತಿ ಸುಧಾರವರಿಗೆ ಮತ್ತು ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ ಶ್ರೀ ವಿನಾಯಕ ಕೆ. ಪತ್ತಾರ ಇವರಿಗೆ ಧನ್ಯವಾದಗಳು. ಕೋವಿಡ್-19 ಲಾಕ್‌ಡೌನ್ ನಿಮಿತ್ತದ ಈ ಸಮಯವು, ಅತ್ಯುತ್ತಮ ಪುಸ್ತಕ ಬರೆಯಲು ಸದುಪಯೋಗವಾಯಿತೆಂಬುದನ್ನು ಇಲ್ಲಿ ಸ್ಮರಿಸಲೇಬೇಕು.

-ಸಿ. ಎನ್. ಆರ್. ರಾವ್, ಇಂದುಮತಿ ರಾವ್

MORE FEATURES

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...

ಪ್ರೀತಿ ಅರಳಿದರೆ ಬದುಕು ತೆರೆದಂತೆ

15-05-2024 ಬೆಂಗಳೂರು

"ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ,...