ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದ ಕಸಾಪ ಜಿಲ್ಲಾಧ್ಯಕ್ಷ ಹುದ್ದೆ : ನಿಷ್ಠಿ ರುದ್ರಪ್ಪ


ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್..ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿರುವ ಸಂಸ್ಥೆಯ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಬುಕ್ ಬ್ರಹ್ಮದೊಂದಿಗೆ ಮಾತುಕತೆ ನಡೆಸಿದ್ದಾರೆ..ಕನ್ನಡಕ್ಕಾಗಿ, ಸಾಹಿತ್ಯ ಪ್ರೇಮಿಗಳಿಗಾಗಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಅವರ ಮಾತುಗಳು ನಿಮ್ಮ ಓದಿಗಾಗಿ..

ಬುಕ್ ಬ್ರಹ್ಮ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದೀರಿ.. ಅಭಿನಂದನೆಗಳು. ಈ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.
ನಿಷ್ಠಿ ರುದ್ರಪ್ಪ: ಧನ್ಯವಾದಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂತಸ, ಹೆಮ್ಮೆಯ ವಿಚಾರ. ಇದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಬುಕ್ ಬ್ರಹ್ಮ: ಕ.ಸಾ.ಪ ಜಿಲ್ಲಾ ಘಟಕದ ಕಾರ್ಯವ್ಯಾಪ್ತಿಯಲ್ಲಿ ಹೇಗೆ ಸುಧಾರಣೆಗಳನ್ನು ರೂಪಿಸುತ್ತೀರಿ..?
ನಿಷ್ಠಿ ರುದ್ರಪ್ಪ:
ಪರಿಷತ್ತಿನ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವ ಯೋಜನೆ ನನ್ನದು..

ಬುಕ್ ಬ್ರಹ್ಮ: ನೀವು ಇತರರಿಗಿಂತ ಹೇಗೆ ಭಿನ್ನ ಮತ್ತು ನೀವು ಮೊದಲು ರೂಪಿಸುವ ಕಾರ್ಯಗಳು ಯಾವುವು…?
ನಿಷ್ಠಿ ರುದ್ರಪ್ಪ: ಪರಿಷತ್ತಿನ ಕಾರ್ಯಕ್ರಮಗಳನ್ಣು ಜನಮಾನಸಕ್ಕೆ ತಲುಪಿಸಲು ಕಾರ್ಯಯೋಜನೆ ರೂಪಿಸಲಾಗವುದು..ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಯೋಜನೆಗಳನ್ನು ತಯಾರಿಸಿದ್ದೇನೆ. ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಅವುಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ನನ್ನದು.

ಬುಕ್ ಬ್ರಹ್ಮ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದಿಂದ ಏನನ್ನು ನಿರೀಕ್ಷಿಸುತ್ತೀರಿ…?
ನಿಷ್ಠಿ ರುದ್ರಪ್ಪ: ಕೇಂದ್ರ ಪರಿಷತ್ತಿನಿಂದ ಹೆಚ್ಚಿನ ಆರ್ಥಿಕ ನೆರವಿನ ನಿರೀಕ್ಷೆಇದೆ..ಎಲ್ಲ ಯೋಜನೆಗಳ ಅಳವಡಿಕೆಗೆ ಆರ್ಥಿಕವಾಗಿ ಶಕ್ತರಾಗಿರಬೇಕಲ್ಲವೆ..? ಅದಕ್ಕಾಗಿ ಕೇಂದ್ರದ ಸಹಕಾರ ಬೇಕಾಗುತ್ತದೆ. ಇನ್ನು ಇದರ ಜೊತೆಗೆಯೇ ಅಖಿಲ ಭಾರತ ಸಮ್ಮೇಳನವನ್ನು ನಿರೀಕ್ಷಿಸುತ್ತೇವೆ.

ಬುಕ್ ಬ್ರಹ್ಮ: ಸಾಹಿತ್ಯ ಪರಿಷತ್ತಿನ ಸುಧಾರಣೆಗಾಗಿ ನಿಮ್ಮಿಂದ ನಿರೀಕ್ಷಿಸಬಹುದಾದ ಕಾರ್ಯಗಳೇನು?
ನಿಷ್ಠಿ ರುದ್ರಪ್ಪ: ಸಾಹಿತ್ಯ ಪರಿಷತ್ತಿನ ಧ್ಯೇಯಗಳಿಗೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸುತ್ತೇನೆ..ಎಲ್ಲವೂ ಸಾಹಿತ್ಯ ಸೇವೆಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಪ್ರೇಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅಷ್ಟೇ..

ಬುಕ್ ಬ್ರಹ್ಮ: ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ಪ್ರತೀ ಜಿಲ್ಲೆಯಲ್ಲೂ ಹಲವು ಸಮಸ್ಯೆಗಳಿವೆ. ಅದರಂತೆ ನಿಮ್ಮ ದೃಷ್ಟಿಯಲ್ಲಿ ನಿಮ್ಮ ಜಿಲ್ಲೆ ಎದುರಿಸುತ್ತಿರವ ಸಮಸ್ಯೆ ಏನು. ಅದನ್ನು ನೀವು ಹೇಗೆ ಎದುರಿಸುತ್ತೀರಿ. ಅಥವಾ ಸುಧಾರಿಸುತ್ತೀರಿ?
ನಿಷ್ಠಿ ರುದ್ರಪ್ಪ: ಪ್ರತೀ ಜಿಲ್ಲೆಯಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ..ಸಮಸ್ಯೆಗಳು ಹೇಳಿಕೊಳ್ಳುವುದಕ್ಕಿಂತ ಆ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನಮಾಡಬೇಕಿರುವುದು ಮುಖ್ಯ..ಈ ನಿಟ್ಟಿನಲ್ಲಿ ನನ್ನ ಶ್ರಮ ಇರುತ್ತದೆ.

ನಿಷ್ಠಿ ರುದ್ರಪ್ಪ ಅವರ ಪರಿಚಯ ನಿಮ್ಮ ಓದಿಗಾಗಿ..

MORE FEATURES

ಮದುವೆಯ ಕಥಾ ಪ್ರಸಂಗ : ಅಂತರ್ಧರ್ಮೀ...

28-01-2022 ಬೆಂಗಳೂರು

ವಾಸ್ತವವಾದ ವಸ್ತುವನ್ನೊಳಗೊಂಡಿರುವ ‘ಮದುವೆ ಕಥಾ ಪ್ರಸಂಗ’ ಕಾದಂಬರಿಯ ಥೆಯ ಕ್ರಿಯೆಯು ಒಂದೇ ಮಟ್ಟದಲ್ಲಿ ಸಾ...

ನುಡಿಚಿತ್ರ ಅಂಕಣ ಬರಹದ ಬಗ್ಗೆ ಕವಿ ...

28-01-2022 ಬೆಂಗಳೂರು

ಸತ್ಯನಾರಾಯಣರ ಈ 'ನುಡಿಚಿತ್ರ' ದಲ್ಲಿ ಅವರ ತಾಯಿ ಹಾಗೂ ಅಜ್ಜಿಯರನ್ನು ಕುರಿತ ಎರಡು ಲೇಖನಗಳನ್ನೂ ಒಳಗೊಂಡಂತೆ,...

ಭಾವನೆಗಳ ಬಲೆಯಲ್ಲಿ ಹುಟ್ಟು ಪಡೆದ ‘...

27-01-2022 ಬೆಂಗಳೂರು

ಉತ್ತಮ ಶೀರ್ಷಿಕೆಯನ್ನು ಹೊಂದಿರುವ ಈ ಕವನ ಸಂಕಲನ ಸುಮಾರು ಐವತ್ತು ಕವನಗಳನ್ನು ಒಳಗೊಂಡಿದೆ. ಒಂದೊಂದು ಕವನ ಸವಿದವನೇ ಬಲ್ಲ...