ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

Date: 18-04-2024

Location: ಬೆಂಗಳೂರು


ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್‌ಕುಮಾರ್‌ಗೆ ಅಂದಿದ್ದರು. ಇದು ರಾಜ್‌ಕುಮಾರ್‌ ಅವರ ಶಕ್ತಿ. ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು ಎಂದು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.

ಅವರು ದಿನಾಂಕ 2024 ಏಪ್ರಿಲ್ 18ರಂದು ನಯನ ಸಭಾಂಗಣದಲ್ಲಿ ನಡೆದ ಕನ್ನಡ ಜನಶಕ್ತಿ ಕೇಂದ್ರ ಆಯೋಜಿಸಿದ್ದ ವರನಟ ಡಾ. ರಾಜಕುಮಾರ್ ಸಿರಿಗನ್ನಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತ್ಯ ಪರಿಷತ್ ನ ಸ್ಥಾಪನೆ ಮಾಡಿದವರ ಹೆಸರಿನಲ್ಲಿ ಒಂದು ಪ್ರಶಸ್ತಿ ಇಲ್ಲಾ ಎಂದಾಗ ತಕ್ಷಣವೇ ಸಿ. ಕೆ. ರಾಮೇಗೌಡ್ರು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮುಖಾಂತರವಾಗಿ ಒಂದು 25 ಸಾವಿರ ರೂಪಾಯಿ ಮೌಲ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನ ಕೊಡುತ್ತಾ ಬಂದಿದ್ದಾರೆ. ಅವರ ಅವಧಿ ಮುಗಿದ ನಂತರ ಅದನ್ನ ಕೇಂದ್ರ ಸಾಹಿತ್ಯ ಅಕಾಡೆಮಿ ವರ್ಗಾಯಿಸಿದ್ದಾರೆ. ಹೀಗೆ ರಚನಾತ್ಮಕವಾಗಿ ಕೆಲಸ ಮಾಡಿದರುವ ರಾಮೇಗೌಡರು ನಮ್ಮ ಹೃದಯದ ಭಾಗವಾಗಿರುವ ರಾಜ್ ಕುಮಾರ್ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದ್ದಾರೆ. ಹಾಗೇ ಈ ಪ್ರಶಸ್ತಿ ನೀಡುತ್ತಿರುವ ಕನ್ನಡ ಜನಶಕ್ತಿ ಕೇಂದ್ರಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಶಿವರಾಂ ಅವರ ಬಗ್ಗೆ ಮಾತನಾಡಿದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ, ಬಿ. ಕೆ. ಶಿವರಾಂ ಅವರು ನಿವೃತ್ತಿಯ ಆದ ನಂತರ ನಿರಂತರವಾಗಿ ಮಲ್ಲೇಶ್ವರಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡುತ್ತಾ ಬಂದಿದ್ದಾರೆ. ಪೊಲೀಸರಿಗೆ ಇಂತಹ ಸಾಂಸ್ಕೃತಿಕ ಪ್ರಜ್ಞೆ ಇದ್ದರೆ ಮಾನವೀಯ ಪ್ರಜ್ಞೆ ತನಗೆ ತಾನಾಗಿಯೇ ಬರುತ್ತದೆ. ರಾಜಕಾರಣಿಗಳಿಗೂ ಇಂತಹ ಸಾಂಸ್ಕೃತಿಕ ಪ್ರಜ್ಞೆ ಇರಲಿ ಅಂತ ಬಯಸುತ್ತೇವೆ. ಆದರೆ ಸಾಮಾನ್ಯವಾಗಿ ಅವರಲ್ಲಿ ಇರುವುದಿಲ್ಲ. ಪೊಲೀಸರಲ್ಲಿ ಇರುವ ಸಾಂಸ್ಕೃತಿಕ ಪ್ರಜ್ಞೆ ಮನುಷ್ಯನನ್ನಾಗಿ ಮಾಡುತ್ತೆ. ಹೀಗಾಗಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಅಭಿನಂದನಾರ್ಹ. ರಾಜ್‌ ಕುಮಾರ್‌ ಯಾರನ್ನು ಏಕವಚನದಿಂದ ಕಲರೆಯುತ್ತಿರಲಿಲ್ಲ. ರಾಮೇಗೌಡರು ಮಾತಾಡುತ್ತಾ ಒಂದು ಮಾತು ಹೇಳಿದ್ರು, ಶಿವರಾಂ ಅವರು ತಮ್ಮ ಕೆಳ ಅಧಿಕಾರಿಗಳು ಸೇರಿದಂತೆ ಯಾರನ್ನೂ ಏಕವಚನದಿಂದ ಮಾತನಾಡಿಸುತ್ತಿರಲಿಲ್ಲ ಅಂತ. ಶಿವರಾಂ ಅವರಿಗೆ ಪ್ರಶಸ್ತಿ ಕೊಡಲು ಈ ಒಂದು ಗುಣ ಸಾಕು. ಯಾಕಂದ್ರೆ ಪೊಲೀಸ್‌ ಅಂದರೆ ಏಕವಚನ ಎನ್ನುವ ಭಾವನೆ ಇದೆ ಎಂದರು.

ರಾಜ್‌ಕುಮಾರ್‌ ಅವರ ಬಗ್ಗೆ ಮಾತನಾಡಿದ ಅವರು, ರಾಜ್‌ಕುಮಾರ್‌ ಬಗ್ಗೆ ಒಂದು ದಿನದಲ್ಲಿ, ಒಂದು ಭಾಷಣದಲ್ಲಿ ಹೇಳಲು ಸಾಧ್ಯವೇ ಇಲ್ಲ. ಇದು ಉತ್ಪೇಕ್ಷೆಯೂ ಅಲ್ಲ. ರಾಜ್‌ಕುಮಾರ್‌ ಯಾಕೆ, ಇವತ್ತಿಗೂ ಜನಮಾನಸದಲ್ಲಿ ಉಳಿಸಿದಿರುವುದು ಅಂದ್ರೆ ವೈಜ್ಞಾನಿಕ ದೃಷ್ಠಿ ಇರುವ, ರಾಷ್ಟ್ರಕವಿ ಎನಿಸಿಕೊಂಡ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ತಲುಪಿಸುವ ಶಕ್ತಿ ಇರುವುದು ರಾಜ್‌ಕುಮಾರ್‌ಗೆ ಅಂದಿದ್ದರು. ಇದು ರಾಜ್‌ಕುಮಾರ್‌ ಅವರ ಶಕ್ತಿ. ರುಕ್ಕೋಜಿ ಅವರು ಡಾ. ರಾಜ್‌ಕುಮಾರ್‌ ಬಗ್ಗೆ ಸಂಶೋಧನೆ ಮಾಡಿ ಬರೆದಿರುವ ರೀತಿಯ ಗ್ರಂಥ ನನಗೆ ತಿಳಿದಿರುವ ಮಟ್ಟಿಗೆ ಬೇರೆ ಯಾವ ಕಲಾವಿದನ ಬಗ್ಗೆಯೂ ಬಂದಿಲ್ಲ. ಇದು ರುಕ್ಕೋಜಿ ಅವರ ಆಸಕ್ತಿಯೂ ಹೌದು, ರಾಜ್‌ಕುಮಾರ್‌ ಅವರ ಶಕ್ತಿಯೂ ಹೌದು ಎಂದು ತಿಳಿಸಿದರು.

ಸಿ.ಕೆ. ರಾಮೇಗೌಡ ಅವರು ವರನಟ ಡಾ . ರಾಜಕುಮಾರ್ ಸಿರಿಗನ್ನಡ ಪ್ರಶಸ್ತಿ ಪುರಸ್ಕೃತರಾದ ಬಿ. ಕೆ. ಶಿವರಾಂ ಬಗ್ಗೆ ಮಾತನಾಡಿದರು. ಅವರು ವೃತ್ತಿ ಜೀವನದಲ್ಲಿ ನಡೆದುಕೊಳ್ಳುತ್ತಿದ್ದ ರೀತಿಯನ್ನು ವೇದಿಕೆಯಲ್ಲಿ ಹಂಚಿಕೊಂಡರು. ಹಾಗೇ ಶಿವರಾಂ ಅವರ ಸಾಂಸ್ಕೃತಿಕ ಪ್ರಜ್ಞೆಯ ಕುರಿತು ಬೆಳಕು ಚೆಲ್ಲಿದರು.

ಕಾರ್ಯಕ್ರಮದಲ್ಲಿ ಗೋಪಾಲ್ ಬಿ. ಹೊಸೂರು, ಬಿ. ಕೆ. ಶಿವರಾಂ, ಕೆ. ಮೋಹನ್ ರಾವ್ ಸೇರಿದಂತೆ ಅನೇಕ ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

 

MORE NEWS

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-04-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...