ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

Date: 25-04-2024

Location: ಬೆಂಗಳೂರು


ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನ" ನೀಡುತ್ತಿದ್ದು, ಸ್ಪರ್ಧೆಗೆ ಕೃತಿಗಳನ್ನು ಆಹ್ವಾನಿಸಿದೆ.

ಈ ಬಹುಮಾನಕ್ಕೆ ಕಥೆ, ಕಾವ್ಯ, ಕಾದಂಬರಿ/ನಾಟಕ ಹಾಗೂ ಇತರೆ ಕೃತಿಗಳ ವಿಭಾಗವಾರು ಒಂದೊಂದು ಕೃತಿಯಂತೆ ನಾಲ್ಕು ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಂದು ಕೃತಿಗೆ ರೂ. 15,000/-(ಹದಿನೈದು ಸಾವಿರ) ಸಮಾನಾಂತರ ಬಹುಮಾನ ನೀಡಿ ಗೌರವಿಸಲಾಗುವುದು.

ಭಾಗವಹಿಸಲು ನಿಯಮಗಳು:
1. ಲೇಖಕಿಯರ ಮೂಲ ಕೃತಿಗಳಿಗೆ ಮಾತ್ರ ಅವಕಾಶ ಇರುವುದು.
2. ಲೇಖಕಿಯರ ಹೆಸರಿನಲ್ಲಿಯೇ ಕೃತಿಗಳನ್ನು ೪ ಪ್ರತಿಗಳಲ್ಲಿ ಬಹುಮಾನಕ್ಕೆ ಕಳಿಸುವುದು. ಪ್ರಕಾಶಕರಿಂದ ಬಂದಲ್ಲಿ ಪರಿಗಣಿಸಲಾಗುವುದಿಲ್ಲ.
3. ಕೃತಿಯು 1-1-2023 ರಿಂದ 31-12-2023 ರ ಒಳಗೆ ಪ್ರಕಟವಾಗಿರಬೇಕು.

4. ಪಿ.ಎಚ್‌. ಡಿ ಪ್ರಬಂಧ ಅಂತಾ ಯಾವುದೇ ವಿಶ್ವವಿದ್ಯಾಲಯಕ್ಕೆ ಹಾಜರುಪಡಿಸಿದ. ತಿರಸ್ಕೃತವಾದ ಕೃತಿಗಳಿಗೆ ಹಾಗೂ ಎಂ. ಫಿಲ್ ಮಾಡಿ ಪ್ರಕಟಿಸಿದ ಕೃತಿಗಳಿಗೆ ಅವಕಾಶವಿರುವುದಿಲ್ಲ.
5. ಒಬ್ಬರು ಒಂದಕ್ಕಿಂತ ಹೆಚ್ಚು ಕೃತಿಗಳನ್ನು ಕಳಿಸಬಹುದಾದರೂ ಅವರ ಒಂದು ಕೃತಿಗೆ ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುವುದು.
6. ಲೇಖಕಿಯರು ತಮ್ಮ ಸಂಕ್ಷಿಪ್ತ ಮಾಹಿತಿಯನ್ನು ಭಾವಚಿತ್ರದೊಂದಿಗೆ ಮೊಬೈಲ್ ನಂಬರ್ ಸಮೇತ ಕಳಿಸಬೇಕು.
7. ಸಂಘದ ಕಚೇರಿ ವೇಳೆಯಲ್ಲಿ ಸ್ವತಃ ಬಂದು ಅಥವಾ ಅಂಚೆಯಕೋರಿಯರ್ ಮೂಲಕ ಪುಸ್ತಕಗಳನ್ನು ತಲುಪಿಸಲು 2024 ಮೇ 30 ಕೊನೆಯ ದಿನವಾಗಿರುತ್ತದೆ.
8. ಈಗಾಗಲೇ ಈ ಪುಸ್ತಕ ಬಹುಮಾನವನ್ನು ಎರಡು ಬಾರಿ ಪಡೆದುಕೊಂಡವರಿದ್ದರೆ ಅಂಥವರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ.

ಹೆಚ್ಚಿನ ವಿವರಗಳಿಗೆ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ- 580 001 ಮೊಬೈಲ್ ಸಂಖ್ಯೆ: 9448022950 ಇವರನ್ನು ಸಂಪರ್ಕಿಸಬಹುದು.

MORE NEWS

ಮೈಸೂರಿನಲ್ಲಿ ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ

03-05-2024 ಬೆಂಗಳೂರು

ಮೈಸೂರು: ಚಿಣ್ಣರಿಗಾಗಿ ಜನಪದ ಸಾಹಿತ್ಯವನ್ನು ಪರಿಚಯಾತ್ಮಕವಾಗಿ ತಿಳಿಸಿಕೊಡುವ ನಿಟ್ಟಿನಲ್ಲಿ ಅದಮ್ಯ ರಂಗಶಾಲೆ ಹಾಗೂ ಸ್ಪಂ...

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...