Date: 25-09-2022
Location: bangalore
ಮೂಡಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠ ನೀಡುವ ವರ್ಧಮಾನ ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟೆಂಬರ್ 28ರಂದು ಬುಧವಾರ ನಡೆಯಲಿದೆ.
ನಲವತ್ತೆರಡನೇ ವರ್ಷದ ಅಂದರೆ 2021ನೇ ಸಾಲಿನ ಪ್ರಶಸ್ತಿಗಳನ್ನು ಮೂಡಬಿದಿರೆಯ ಸಮಾಜಮಂದಿರ ಸಭಾದಲ್ಲಿ ನಡೆಯಲಿದೆ. ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಅವರು ಸಾನಿಧ್ಯ ವಹಿಸಲಿದ್ದಾರೆ. ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2021ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಗಜಾನನ ಶರ್ಮ ಹಾಗೂ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಡಾ. ಎಚ್.ಎಸ್. ಸತ್ಯನಾರಾಯಣ ಅವರಿಗೆ ನೀಡಲಾಗುತ್ತದೆ.
ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿ ಬೆಂಗಳೂರಿನ ಗಜಾನನ ಶರ್ಮ ಅವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ’ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ’ ಎಂಬ ಮಹಾ ಪ್ರಬಂಧಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಹತ್ತಕ್ಕೂ ಹೆಚ್ಚು ನಾಟಕ ಕೃತಿಗಳನ್ನು ಬರೆದಿದ್ದಾರೆ. ’ಪುನರ್ವಸು’, ’ಚೆನ್ನಭೈರಾದೇವಿ’ ಇವರ ಕಾದಂಬರಿಗಳು.
ವಿಮರ್ಶಕ ಡಾ. ಎಚ್.ಎಸ್ ಸತ್ಯನಾರಾಯಣ ಚಿಕ್ಕಮಗಳೂರಿನವರು. ಇವರ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ. ’ಕುವೆಂಪು ಅಲಕ್ಷಿತರೆದೆಯ ದೀಪ’, ’ಪನ್ನೇರಳೆ’, ’ನಗೆಮೊಗದ ಅಜ್ಜ ಮಾಸ್ತಿ’ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರು: ಬೀಟಲ್ ಬುಕ್ ಶಾಪ್ ಇವರ ನೇತೃತ್ವದಲ್ಲಿ ವಿಶ್ವಮಾನವ ಕುವೆಂಪು ಹುಟ್ಟುಹಬ್ಬದ ಸವಿನೆನಪಿನ...
ಬದುಕಿನ ಕಠೋರ ಸತ್ಯಗಳನ್ನು ಹೇಳುತ್ತಲೇ ಆ ಬದುಕಿನ ಬಗ್ಗೆ ಕಹಿ ಮೂಡಿಸದ ಆಪ್ಯಾಯಮಾನಕರ ಓದಿನ ಕೃತಿಯಿದು. ಹಾಗೆಂದು ಇದು ಗೋ...
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ 'ಪಂಚಮಿ ಪು...
©2025 Book Brahma Private Limited.