Date: 29-12-2025
Location: ಬೆಂಗಳೂರು
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ 'ಪಂಚಮಿ ಪುರಸ್ಕಾರ 2026' ಕ್ಕೆ ಕನ್ನಡದ ಹಿರಿಯ ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ, ನಟ, ನಾಟಕಕಾರ, ಸಾಹಿತಿ ಟಿ. ಎನ್. ಸೀತಾರಾಂ ಆಯ್ಕೆಯಾಗಿದ್ದಾರೆ.
ಜನವರಿ ತಿಂಗಳಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಗೌರವದನ ಒಂದು ಲಕ್ಷದೊಂದಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್.ಪಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಪ್ರಶಸ್ತಿ ಸಮಿತಿಯ ಸಂಚಾಲಕ ಜನಾರ್ದನ ಕೊಡವೂರು, ಉಪಾಧ್ಯಕ್ಷ ಮಧುಸೂದನ ಹೇರೂರು ಉಪಸ್ಥಿತರಿದ್ದರು.
ಬೆಂಗಳೂರು: ಬೀಟಲ್ ಬುಕ್ ಶಾಪ್ ಇವರ ನೇತೃತ್ವದಲ್ಲಿ ವಿಶ್ವಮಾನವ ಕುವೆಂಪು ಹುಟ್ಟುಹಬ್ಬದ ಸವಿನೆನಪಿನ...
ಬದುಕಿನ ಕಠೋರ ಸತ್ಯಗಳನ್ನು ಹೇಳುತ್ತಲೇ ಆ ಬದುಕಿನ ಬಗ್ಗೆ ಕಹಿ ಮೂಡಿಸದ ಆಪ್ಯಾಯಮಾನಕರ ಓದಿನ ಕೃತಿಯಿದು. ಹಾಗೆಂದು ಇದು ಗೋ...
ತುಮಕೂರು : ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಮತ್ತು 30ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ...
©2025 Book Brahma Private Limited.